ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ನಡುವಿನ ಸಂಬಂಧ ಬಹಳ ಚೆನ್ನಾಗಿದ್ದವು...

‘ಎಲ್ಲಿ ಹಾಳಾಗಿ ಹೋಗಿದ್ಯೋ ಹಡಬೆನಾಯಿ?’ ಅಬ್ಬರಿಸಿದ ಲಾಯರ್ ವೆಂಕಟ ‘ಗರಡಿ ಮನೆಗೆ… ಬರ್ತಾ ರಾಜಯ್ಯ ಮೇಷ್ಟ್ರು ಸಿಕ್ಕಿದ್ದರು. ಸ್ವಲ್ಪ ಲೇಟಾಯಿತು’ ತಡಬಡಾಯಿಸಿದ ರಂಗ. “ನಿನ್ನನ್ನೇನು ದೊಡ್ಡ ಗಾಮ ಪೈಲ್ವಾನ್ ಅಂಡ್ಕೊಂಡಿದಿಯೇನಲೆ, ಪ...

ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ “ಈಗ ನೀನು ಸ್ವಾತಂತ್ರಳು” ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮ...

ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ ಇಂಥದೊಂದು ಪ್ರಾಣಿ...

ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗ...

ಪ್ರೀತಿಸುವ ಹುಡುಗ ಕೇಳಿದ “ಪ್ರೀತಿ ಎಲ್ಲಿ ಹುಟ್ಟುತ್ತದೆ?” ಎಂದು. “ಅದು ಹೃದಯ ತೊಟ್ಟಿಲಲ್ಲಿ” ಎಂದಳು ಹುಡುಗಿ. “ಅದು ಎಲ್ಲಿ ಸಾಯುತ್ತದೆ ಗೊತ್ತಾ?” ಎಂದ. “ಅದು ಹೃದಯ ಸ್ಮಶಾನದಲ್ಲಿ” ಎ...

ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ ಏನೋ ಅವಘಡ ಆಗೇದ ಅನಿಸಿತ್ತ...

ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್‌ ಡಿಫರೆಂಟ್‌, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ ದೂರವಿಟ್ಟಾಗ ಅಂತಃಕರಣಿ, ಉಪಕಾರಿ ಅನ್ನುವಾಗಲೇ ಅಹಂಕಾರಿ, ಕೇಡು ಬಯಸದವನಂದ...

ಅವರಿಬ್ಬರು ಶ್ರೀಮಂತ ಮನೆತನಕ್ಕೆ ಸೇರಿದವರು. ಪ್ರೀತಿಯಲ್ಲಿ ಬಿಗಿದ ಜೋಡಿಗಳು. ಅವಳ ನಿಶ್ಚಿತಾರ್ಥಕ್ಕೆ ಒಂದು ಕೋಟಿ ಬೆಲೆಬಾಳುವ ಕಂಠೀಹಾರ, ಉಂಗುರದ ಕಾಣಿಕೆಯಿತ್ತ. ಮತ್ತೆ ಮದುವೆಗೆ ಐವತ್ತು ಲಕ್ಷ ಬೆಲೆಬಾಳುವ ಸೀರೆ ಕುಪ್ಪುಸದ ಉಡುಗೊರೆಯನ್ನು ಇತ್...

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್‌. ಈ ಕತೆನ ನಾಯಕ ಈಗ ಬೊದ್ಕಿತ್ಲೆ. ಕತೆ ಹೇಳ್ದೊವೂ ಬೊದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬೊದುಕ್ಯೊಳೋ. ನಮ್ಮೊದ್‌ ಮಲೆನಾಡ್‌. ಕೊಡಗ್‌ಗೆ ಅಂಟಿಕಂಡೇ ಇರುವ ಊರ್‌....

1...8788899091...147

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...