ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ “ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು” ಎಂದಿತು ಮಗು. “ಹಿಡಿಯೋಕೆ ಆಗೋಲ್ಲ ಪುಟ್ಟಿ” ಅಂತ ಹೇಳಿದ ಅಪ್ಪ “ನಂಗೆ ನಕ್ಷತ್ರ ಬೇಕೇ ಬೇಕು” ಅಂತ ಹಟಮಾಡಿತು ಮಗು. “ಮಗು! ಒಂದಲ್ಲ, ಎರಡು ನಕ್ಷತ್ರ ನಿನ್ನ ಕಣ್ಣಲ್ಲಿ ಬಿದ್ದದ್ದನ್ನು ನೋಡಿದೆ” ಎಂದರು ತಂದೆ. ಮಗು ಮುಗ್ಧವಾಗಿ ಮುಗಳುನಕ್ಕು ಕಣ್ಣು ಮುಟ್ಟಿಕೊಂಡಿತು.
*****