ಅವಳಿಗೆ ಎಂಟು ವರ್ಷಕ್ಕೆ ಬಾಲ ವಿವಾಹವಾಗಿತ್ತು. ಕತ್ತಿಗೆ ಬಿಗಿದ ಮಾಂಗಲ್ಯ ಅವಳಿಗೆ ಬೇಡವೆನಿಸಿ ಅವಳು ಅದನ್ನು ಆಡುತ್ತಾ ಸಮುದ್ರಕ್ಕೆ ಕಿತ್ತಿ ಎಸೆದಳು. ಅಲೆಯ ರಭಸ ಮಾಂಗಲ್ಯವನ್ನು ಅವಳ ಗಂಡನ ಕೈಗೆ ಮತ್ತೆ ತಂದು ಕೊಟ್ಟಿತು. ಅವನು ಮತ್ತೆ ಅವಳ ಕೊರಳಿಗೆ ಕಟ್ಟಿದ. ಬಾಲೆ ಈ ಬಾರಿ ಕಿತ್ತಿ ಮಾಂಗಲ್ಯವನ್ನು ಬಾವಿಗೆ ಎಸೆದಳು. ನೀರು ಸೇದುವಾಗ ಕೊಡದ ಕಂಠದಲ್ಲಿ ಅವನ ಕೈಗೆ ಮಾಂಗಲ್ಯ ಮತ್ತೆ ಅವನ ಕೈಗೆ ಸಿಕ್ಕಿತು. ಹುಡುಗ ಈಬಾರಿ ಮಾಂಗಲ್ಯವನ್ನು ಕಟ್ಟಲ್ಲಿಲ್ಲ. ಅವನು ಅವಳ ಕೈಗೆ ರಾಕಿ ಕಟ್ಟಿದ, “ಅಣ್ಣಾ!” ಎಂದು ಬಾಲೆ ಅವನೊಡನೆ ನಿರಂತರವಾಗಿ ನಲಿದಾಡಿದಳು.
*****