ಹೃದಯವನ್ನು ವನ ಮಾಡಿದೆ. ಸಂತಸದ ಉಸಿರು ಹಸಿರಲ್ಲಿ ಮೂಡಿತು. ಚಳಿಗಾಲ ಬಂದು ಎಲೆ ಎಲ್ಲಾ ಉದುರಿತು. ಮತ್ತೆ ಬೇಸಿಗೆ ತಾಪ ಸಹಿಸಲಾರದೇ ವಸಂತನಿಗಾಗಿ ಕಾದು ಕುಳಿತೆ. ದಟ್ಟ ಮೋಡಗಳು ಮೂಡಿ ಮಳೆ ಸುರಿಯಿತು. ಚೈತ್ರದ ಚಿಗುರು ಮೂಡಿ ಕೋಗಿಲೆ ಮತ್ತೆ ಪಲ್ಲವ...

ನನ್ನ ಕೊಲ್ಲಬೇಡ ಅಂತ ಹೇಳು. ಜಸ್ಟಿನೋ! ಹೋಗಿ ಹೇಳು ಅವರಿಗೆ, ದಮ್ಮಯ್ಯ! ಹೇಳು ಅವರಿಗೆ. ಪ್ಲೀಸ್, ಹೇಳು.” ‘ನನ್ನ ಕೈಯಲ್ಲಿ ಆಗಲ್ಲ. ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ ‘ಕೇಳುವ ಹಾಗೆ ಮಾಡು. ಬುದ್ಧಿ ಉಪಯೋಗಿಸು. ನನ್ನ ...

ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ. ಶಿಸ್ತಿನಿಂದ ಎದ್ದು ನಿಂತ. ಸುತ್ತೂ ನೋಡುತ್ತಾ ಕೇಳಿದ ತೇಜಾ “ಏನೂ ಕೆಲಸವಿಲ್ಲ! ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆ...

“ಮರ! ಭೂಮಿಯಿಂದ ನೀನೇನ ಕಲಿತೆ?” ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್...

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂ...

ಆ ಚಾಲಕ ವೇಗವಾಗಿ ವಾಹನವನ್ನು ಓಡಿಸಿ ಆಯ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ. ಅವನ ಅಜಾಗ್ರತೆ ಅವನಿಗೆ ಅರಿವಾಗಲೇ ಇಲ್ಲ. ಅವನಿಗೆ ಮರದ ಮೇಲೆ ಅತೀವ ಕೋಪ ಬಂತು. ಮರವನ್ನು ಕಡೆದು ಹಾಕಿದ. ಮಗುವಿನಂತೆ “ನಾನೇನು ಮಾಡಿದೆ? ನಿಂತ ಕಡೆ ನಿಂತಿದ್ದೆ. ...

ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನ...

ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ ಚಿಕಿತ್ಸೆ ಮಾಡುತ್ತಿದ್...

ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್‌ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇ...

-೧- ಸೀತಾ, ‘ಬೇಗನೆ ಕಾಗದ ಬರಿ; ಕಾಯುತ್ತಿರುತ್ತೇನೆ, ಮರೆಯಬೇಡ’ ಎಂದು ಬರೆದಿರುವೆ. ಕಾಗದ ಬರೆಯದಿದ್ದುದಕ್ಕೆ ಕ್ಷಮಿಸು. ನೀನು ಯೋಚಿಸಿರುವಂತೆ ಬರೆಯದಿರುವುದಕ್ಕೆ ಕಾರಣ ನಿನ್ನನ್ನು ಮರೆತದ್ದೂ ಅಲ್ಲ-ಹೊಸ ಸ್ನೇಹಿತರೂ ಅಲ್ಲ. ನಿನಗಿಂತಲೂ ಹೆಚ್ಚಿನ...

1...6869707172...137

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....