ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ ಇದೇ ಚಳುವಳಿ. ತರಂಗದಂತೆ ದೇಶವನ್ನೆಲ್ಲಾ ಮುಳುಗಿಸಿ ಒಳ್ಳೆಯ ಸ...

ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ ಹಾಡಿ ಕುಣಿದು ಪಾಠ ಹೇಳಿಕೊಡುವುದು ಅವರ ರೂಢಿ. ಸದಾ ಹಸನ್ಮುಖದ ಗಡ್ಡ ಮೀಸೆ ಎರಡ...

ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ. ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸ...

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ...

ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು “ಕೆಲಸಕ್ಕೆ ಬಾರದ ಓದು! ನಿಮ್ಮ ಬುದ್ಧಿಗಳೆಲ್ಲಾ ಹಾಳಾಗಿ ಹೋಗುತ್ತಿವೆ. ನೀವೆಲ್ಲಾ ಬರೀ ಬೌದ್ಧರು.&#8...

ಆಶ್ರಮದ ಮೂಲೆಯೊಂದರಲ್ಲಿ ಒಂದೆಡೆ ದೃಷ್ಟಿ ನೆಟ್ಟು ಕುಳಿತಿದ್ದ ಆ ಮಧ್ಯ ವಯಸ್ಕಳನ್ನು ಕಂಡಾಗ ಏನೋ ವಿಶೇಷ ಆಕರ್ಷಣೆ. ಜೊತೆಗೆ ಮನದೊಳಗೆ ಮರುಕ. ನನ್ನ ಕಾಲುಗಳು ಆಕೆಯತ್ತ ಸೆಳೆದವು. ನನ್ನನ್ನು ನೋಡಿ ಅವಳ ಮುಖದಲ್ಲಿ ಗಾಬರಿ! ನಾನು ಸಮಾಧಾನದ ಸ್ವರದಲ್...

ಒಬ್ಬ ಹೆಣ್ಣು ಮಗಳು ನೀರು ಹಾಕಿಕೊಂಡಳು. ಆಕೆಗೆ ಬಯಕೆ ಕಾಡಹತ್ತಿದವು. ಆಕೆಯ ಜೀವ ನೀರಲ ಹಣ್ಣು ಬಯಸಿತು. ಗಂಡನು ನೀರಲ ಹಣ್ಣು ತರಲಿಕ್ಕೆ ಹೋದನು. ನೀರಲಗಿಡವನ್ನೇರಿ ಆತನು ಗಿಡ ಕಡೆಯ ತೊಡಗಿದನು. ಎರಡು ಹಣ್ಣು ಕಡಿದನು. ಗಿಡದಲ್ಲಿ ನಾಗೇಂದ್ರನು ಕಾಣ...

“ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು.” ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ ಒಮ್ಮೆಯೂ ಬೆಲೆ ಕೊಟ್ಟವನಲ್ಲ. ಪೋಲಿಸರು ಅಂಡಿಗೆ ತುಳಿದಾಗ ತಾನಾ...

“ಬಾಗಿಲು!ಬಾಗಿಲು!” ಬಾಗಿಲು ತೆರೆಯಲಿಲ್ಲ. ಕೋಣೆಯಲ್ಲಿ ಗಡಿಯಾರ ಟಿಂಗ್ ಎಂದು ಒಂದು ಗಂಟೆ ಬಡಿಯಿತು. “ಎಷ್ಟು ತಡ ಮಾಡಿದ್ದೇನೆ? ಬುದ್ಧಿ ಕೆಟ್ಟುಹೋಗಿದೆ. ನಾಳೆಯಿಂದ ಜಾಗ್ರತೆಯಾಗಿರುತ್ತೇನೆ. ‘ಯಾಂಟಿನಾಚ್’ ಎಲ್ಲಾಹೋಗಿ ಸೊಳೆ...

ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...