ಅನುವಾದ

ಅನುವಾದಿತ ಕವನಗಳು

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ […]

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ, ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು; ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ ತಂಪೆರೆದ […]

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ […]

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ […]

ಎಲೆ ಚೆಲುವ ದುಂದುಗಾರನೆ

ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ […]

ನೋಡಿಕೋ ಮುಖವ ಕನ್ನಡಿಯಲ್ಲಿ

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ […]

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ […]

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ ಸುಂದರ ತಳಿಗಳೆಲ್ಲ ವೃದ್ದಿಸಲಿ ಎನ್ನುವುದು, ಹಣ್ಣಾದದ್ದೆಲ್ಲವೂ ಮಣ್ಣಿಗುರುಳುವ ಮುಂಚೆ ನೆನಪನುಳಿಸಲು ತನ್ನ ಕುಡಿಯನ್ನು ಪಡೆಯುವುದು. ನೀನೊ ನಿನ್ನದೆ ಕಣ್ಣಕಾಂತಿಯಲಿ ಬಂಧಿತ, ನಿನ್ನ […]