
ರನ್ನ ದುಡುಗುಣಿ ಚಿನ್ನದ ಕೊಂಡಿ ಹೊನ್ನಿನಾ ಡಾಬಾ ಇಟ್ಟಿದಳಽ| ಎಣಕೆನಿಲ್ಲದೆ ಮಾಣಿಕಸಽರ ಎದಿಬದಿ ತಾನು ಹಾಕುವಳಽ| ಕಡಿಯ ಕಂಕಣ ಕಮಳದ ಮುಖಿಯ ಹೊಳಿವ ಮುತ್ತಿನ ವಾಲಿಗಳಽ| ಜಯ ಜಯ ಮಂಗಳಽ| ಜಯ ಜಯ ಮಂಗಳಽ| ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧|| ಕಸ...
(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ೮ ಪಡುಹಾಸಂಗಿಯೆಡೆಯಲಂ ಗಾತ ಬಿ...
ಕಣ್ಣೋಟವೋ . . . ಚೆಲ್ಲಾಟವೋ . . . ನೀನು ಕಣ್ಣಲ್ಲೆ ನುಡಿದ ಮಾತು ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ – ನಿನ್ನ ಹೆಜ್ಜೆಯಲ್ಲಿ ಕಂಡ ನಡಿಗೆ ನವಿಲು ಆಗಿದೆ; ಪ್ರೀತಿ ಸೋನೆ ಸುರಿಸಿದೆ// ಕೆಂಪಾಗಿದೆ . . . ರಂಗೇರಿದೆ . . . ನಿನ್ನ ಕೆಂಪಾ...
ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ ಕೈ. ಮರುಳೆಂದವು – ಸೈ, ಸ...
ಯೆಂಡ ಮುಟ್ದಾಗ್ಲೆಲ್ಲ ನಂಗೆ ಏನೋ ಕುಸಿಯಾಗೈತೆ! (ಕುಡಕನ್ ಮಾತ್ ಅಂದ್ರಂಗೆ ಅಲ್ಲ! ನೆಗ ಉಕ್ಕ್ ಬರತೈತೆ?) ೧ ಈಚಲ್ ಮರದಲ್ಲ್ ಮಲಗಿದ್ದ್ ಯೆಂಡ ಕಟ್ಟಿದ್ ಮಡಕೇಗ್ ಅರ್ದು ಬಾರಿ ಪೀಪಾಯ್ನಾಗ್ ಇಳಕೊಂಡಿ ತುಂಬ್ಕೋಂತೈತೆ ಸುರ್ದು. ೨ ಅಲ್ಲಿಂದ್ ಇಲ್ಗೆ...
ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ ನಿನ್ನಿರವ ಮರ್ಮವನು ಎಂತರಿವೆ ಹರಿಯೇ? ನಿನ...
ಹಿಂಬಳಿ ಮುಂಬಳಿ ಗಂಧದ ಗೀರಾ ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ ಜಾತ ಮಲ್ಲಿಗಿ ಜಾಳಿಗಿ ದಂಡಿ ವಾನ್ಯಾಡು ತುರುಬ ಒನಪಿಲಿ ಕಟ್ಟಿ ಖನ್ನಿ ಕೋಮಽಲಿ ಹಸೀಗೇಳಽ ಸೋ ||೧|| ನೀರೆಯ ಬಾವುಲಿ ಲಿಗಿಲಿಗಿನಾಡುತ ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ ಹೊನ್ನಾ-ಭರ...
ಮರಿತನದ ಮರವೆಯಿಂ ಮರಸಿ ತಂದಪೆಯಾ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸೆದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪ ಸಾಕು, ನಿನ್ನುಪಚಾರಗಳನೊಲ್ಲೆನದನು ಇನಿತು ಬೇಗನೆ ಮರೆತೆಯಾ? ನಾನುಮಾಕೆ ಈರ್ವರಾವಿದ್ದೆ ವಿಲ್ಲಿಯ...













