
ಮೈಸೂರ ಮಲ್ಲಿಗೆಯಾ ಮುಡಿದು ಕಣ್ಸನ್ನೆಯಾ ನೋಟದಲಿ ಪಿಸು ಮಾತಿನಾ ಮೋಡಿಯಲಿ ಚಲುವ ರಾಶಿಯ ಬೀರುತ ಮನ ಸೆಳೆದಾ ನಲ್ಲೆಽಽಽಽ ಕಾದಿರಲು ನಲ್ಲನಿಗಾಗಿ ಬೆಳದಿಂಗಳು ಮೂಡಿತು ಹೊನ್ನ ಮಳೆ ಸುರಿಯಿತು ಗರಿಗೆದರಿ ಕುಣಿದಾ ನವಿಲು ಅವಳ ನೋಟಕ್ಕೆ ನಾಚಿತ್ತುಽಽಽಽ ...
ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ ಕಂ...
ನಾನೆ ಪಾರ್‍ವತಿ ನಾನೆ ಗಿರಿಜೆ ಶಿವ ಸಮರ್‍ಪಣೆ ಕೊಡುಶಿವಾ ನಾನೆ ಗೌರಿ ಗಂಗೆ ಶೈಲಜೆ ಶುಭ ಸಮರ್‍ಪಣೆ ಪಡೆಶಿವಾ ನೀನೆ ಸದ್ಗುರು ನೀನೆ ಶಿಕ್ಷಕ ನೀನೆ ನಂಬಿದ ವಲ್ಲಭಾ ನೀನೆ ಆತ್ಮಾರಾಮ ಪ್ರಿಯಕರ ನೀನೆ ತ್ರಿಭುವನ ವರಪ್ರಭಾ ಕೋ ಸಮರ್‍ಪಣೆ ಆತ್ಮ ತರ್‍ಪಣ...
ಜೀತಾ ಮಾಡಿ ಕಾಸ್ ಕೆರ್‍ಕೊಂಡಿ ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ ಏನೋ ಕುಡಿಯಾಕ್ ಬಂದ್ರೆ- ಸೇರಿಗ್ ಸೇರು ನೀರ್‍ನೆ ಬೆರಸಿ ಕಾಸ್ ಕೇಳ್ತೀಯ ಮೋಸ ಮರಸಿ ಸಾಚಾ ಮನ್ಸರ್ ಬಂದ್ರೆ? ೧ ನನ್ ಕೈ ಕಾಸು! ನಂಗ್ ಔಳ್ ಎಡ್ತಿ! ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್...
ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ, ಕನಸು ಕನ್ನ...
ಸಂಜೆಗಾಳಿಗೆ ಜಳಕ ಮಾಡಿಸೆ ಹನಿತು ಮಳೆ ಹೊಳೆಯೋಡಿತು ಬಾನ್ ಬೆಸಲೆ ಶಶಿ ನೋಡಿ ನಗುತಿರೆ ತಿರೆಗೆ ತಂಗದಿರಾಯಿತು. ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ ಹವಣಿಸಿದೆ ಉಡ್ಡೀನ ಲೀಲೆಗೆ ಚಂದ್ರಲೋಕವ ಬಯಸುತ. ಕಪ್ಪೆ ಜೀರುಂಡೆಗಳು ಮೇಳದಿ...
ನನ್ನ ಮನೆಯ ನೆತ್ತಿಯ ಮೇಲೆ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ ಚಳಿಯಲ್ಲಿ ನಡುಗುತ್ತ ಮಲಗಿದ್ದ ಹಸಿವಿನಿಂದ ಚಡಪಡಿಸುತ್ತಿರುವ ಮಕ್ಕಳಿಗೆ ಹೇಗೆ ಹೇಳಲಿ ನಾನು ನಮ್ಮ ರಂಜಾನಿನ ಉಪವಾಸ ಇನ್ನೂ ಮುಗಿದಿಲ್ಲ ಎಂದು. ಹಾಳ...













