ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ
ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ

ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ
ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ

ಯಾವ ದೇವರ ಪ್ರೀತಿಗಾಗಿ ನದಿ ಹರಿಯಿತೊ ಕಣಿವೆಯಲಿ
ಆ ದೇವರ ಪ್ರೀತಿಗಾಗಿ ಅಣಬೆ ಹುಟ್ಟಿತೊ ಕಸದಲಿ

ಯಾವ ದೇವರ ಪ್ರೀತಿಗಾಗಿ ಸೂರ್‍ಯ ಮೂಡಿತೊ ದಿವಿಯಲಿ
ಆ ದೇವರ ಪ್ರೀತಿಗಾಗಿ ಪ್ರಾಣ ಹುಟ್ಟಿತೊ ಭುವಿಯಲಿ
*****