ಯುಗದ ಹಾದಿಯಲ್ಲಿ
ಜಗದ ಸುತ್ತ
ಹೊನ್ನ ಕಿರಣ
ಆವಾಗ ಮನವಾಗುವಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಬೇಲಿಯ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಮೌನ
ಶೂನ್ಯವಿದೋ ಜೀವನ
ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಚೇತನ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಸ್ವಪ್ನ
ಭಾವತೆಯ ಭವ್ಯ ಕಿರಣ
ಪೂರ್ಣತೆಯ ಗಾನದೆಡೆಯಲಿ
ನಡೆಮುಂದೆ
ನಡೆಮುಂದೆ
ಒಂದೇತ್ ಜ್ಯೋತಿರ್ಗಮನ
ಪರ್ವ ಭೂವರ್ಣತೆಯಡಿಯಲ್ಲಿ
ಕೂಡಿತದೋ
ಕೂಗಿತದೋ
ಆವಾಗಮನವಾಗುವ ಮುನ್ನ
ನಿಮ್ಮದೆಯ ಅರ್ಪಣ
ನಡೆಮುಂದೆ
ನಡೆಮುಂದೆ
ಜ್ವಲಂತ ಹಾದಿಯಲಿ
ಮಾನವತೇ ಸ್ವಚ್ಛತೆಯೆಡೆಯಲ್ಲಿ
ಕೂಡಿತದೋ
ಕೂಗಿತದೋ
ಧೃಢತೆಯ ಸೌರ ರೂಪತೆಯಲಿ
ಸತ್ವಪರ್ವ ಆನಂದಗಾನ
ಕೂಗಿತದೋ
ಕೂಗಿತದೋ
ಮಾನ್ಯತೆಯ ಸವ್ಯಸಾಚಿಯಲಿ
ನಿಮ್ನದರ್ಪಣ ಆವಾಗಮನವಾಗುವ ಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಸರ್ವಾಗಮನ
*****