Home / ಕವನ / ಕವಿತೆ

ಕವಿತೆ

ಅದುರುವ ಅಧರದಲಿರುವುದು ಗಾನವು ವದಗಿದ ಕುಸುಮವು ತುರುಬಿನಲಿ ಕಳಕಳ ರವದಲಿ ನುಣುಪಿನ ಬೆಣಚಲಿ -ಸುಳಿಯುವ ಹೊಳೆಯೋ ಯಾರೆಲೆನೀ- ಕೆಲಸಕೆ ನಲಿವವು ನಿನ್ನಂಗಗಳು ಅಲಸದೆ ನಡುನಡು ನಗುವದದೇಂ ಮಂಜುಳ ಮಾತಿನ ಇಂಗಿತವೇನದು -ಅಂಜದ ಕಂಗಳ ಭಾಷೆಯದೇಂ- ಉಕ್ಕಿ ಹ...

ಜೀವ ಭಾವ ಬೆರೆತಗಾನ ನನ್ನ ಎದೆಯ ತುಂಬಿತು ಅದರ ಭಾವ ನನಗೆ ಒಲಿದು ಬಾಳು ಧನ್ಯವೆನಿಸಿತು || ಎನ್ನ ಬದುಕು ಭವ್ಯವಾಯ್ತು ಮನದ ಹೂವು ಅರಳಿತು ಮುದುಡಿದ ಮನ ಮಿಡಿದು ಹರುಷ ತುಂಬಿ ಗೆಲುವು ತಂದಿತು || ನೂರು ಆಸೆ ನೂರು ಭಾವ ಚೈತನ್ಯವ ನೀಡಿತು ಭರವಸೆಗಳ ...

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ ಪಾದಕ್ಕೆ ಕಮಲ ನೆತ್ತಿಗೆ ಚಂದ್ರ, ನಿಂತ ನಿಲುವು ರಾಗವೋ ವಿರಾಗವೋ ರವಿಯೇ ತಾರ ಬುವಿಯೇ ಮಂದ್ರ, ಕೆಳೆಗೆ ಬೆಳೆದ ಗಿಡಮರಗಳ ನಡುವೆ ಊಳುವ ಗಾಳಿಯ ಕರುಣಾಕ್ರಂದ, ಕೊಂಚ ಗದ್ಯ ಇನ್ನೆಲ್ಲ ಪದ್ಯ ಮರ ಹಿಡಿದ ಫಲವಲ್ಲ ಅ...

ಮಿರಿಯಾಲ್ ಮಂಡಿ ಮಿರಿಯಾಲ್ ಮಂಡಿ ಏನೇನ್ ಕಂಡಿ ಮಿರಿಯಾಲ್ ಮಂಡಿ ಕುರುಕಾಯ್ಲ ಬಂಡಿ ಸಾವಿರ ಕಂಡಿ ಬಾಣಲೆ ತಿಂಡಿ ಕರಿಯೋದ್ ಕಂಡಿ ಬಡವನ ಭಾಂಡಿ ಒಡೆಯೋದ್ ಕಂಡಿ ತಿರುಕನ ಥಂಡಿ ಕೊರೆಯೋದ್ ಕಂಡಿ ಸೆಟ್ಟಿಯ ಹುಂಡಿ ಕಟ್ಟೋದ್ ಕಂಡಿ ಹೆಂಡತಿ ಚಂಡಿ ಹಿಡಿಯೋದ...

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...

ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊ...

ಏನಪರಾಧ ಮಾಡಿದೆನೆಂದು? ನನಗೀಗತಿಯನು ನೀ ದಯಪಾಲಿಸಿದೆ| ನನ್ನಯ ಸತ್ಯದೀಕ್ಷೆಗೇಕಿಂತ ಪರೀಕ್ಷೆಯ ವಿಧಿಸಿದೆ ವಿಧಿಯೆ| ಕಾಪಾಡು ಕರುಣಾಳು ಕಾಶಿಪುರ ಪೋಷಿಪನೆ ಶಂಕರ ಶಶಿಧರನೆ|| ಸೂರ್ಯವಂಶದರಸನಾಗಿ ಎಲ್ಲರನು ಸಮಾನತೆಯಿಂದ ನೋಡುತಲಿದ್ದೆ| ದಾನ ಪುಣ್ಯಾದ...

ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ. ಕತ್ತಲ ಕರಗಿಸಿ ರಾತ್ರಿಗಳ ಸುಂದರವಾಗಿ ಮಾಡ...

೧ ಮಿಂಚು ಸಂಚರಿಸುವುದಂತೆ ಬೆಂಕಿ ಆವರಿಸುವುದಂತೆ ಬಿರುಗಾಳಿ ಬೀಸುವುದಂತೆ ಸಮುದ್ರ ಉಕ್ಕುವುದಂತೆ ಜಲಪಾತ ಧುಮ್ಮಿಕ್ಕುವುದಂತೆ ಭುವಿ ಕಂಪಿಸುವುದಂತೆ ಸಹಸ್ರಾರ ಸಿಡಿಯುವುದಂತೆ ಅಬ್ಬಬ್ಬಾ… ಏನೆಲ್ಲಾ ಕಲ್ಪನೆಗಳು ಒಂದು ಸಮಾಗಮದ ಹಿಂದೆ ಹುಸಿಗೆ...

ಏನ ಪಾಡಲಿ ನಿನ್ನ ಆಮೋದಕಿಂದು ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ ಘನವರಣ ಹನಿರಸದ ಬಲು ಸಿವುರಿನ ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ ಕಣಕಣನೆ ದನಿಗೊಡುವ ಗಜ ಗಬ್ಬುಬೇಕೆ ಕಿರಿ ಪಿರಿಯ ನವನುಡಿಯ ಹೊಳೆ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...