Home / ಕವನ / ಕವಿತೆ

ಕವಿತೆ

ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ….| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು ಕವಿಯ ಕಲ್ಪನೆಯೋ ಇದು ಕಲ್ಲಲರಳಿದ ತರತರದ ಹೂಮಾಲೆಯೋ| ಯು...

ಖುಶಿ ಬಸಿದು ಹಿಂಡಿ ಎಸೆದು ಕರುಳ ಕತ್ತಲಲ್ಲಿ ಬತ್ತಿ ಹೊಸೆದು ಕಣ್ಣಹನಿ ಹತ್ತಿಸಿದ ಬೆಳಕಲ್ಲಿ ಹುಡುಕುತ್ತಿದ್ದೇನೆ ಸುಖವೇ ಎಲ್ಲಿ ಹೋದೆ ನೀನೆಲ್ಲಿ ಹೋದೆ? ಹಜ್ಜೆ ಮುಂದಿಟ್ಟಂತೆಲ್ಲ ಗುರುತು ಹಿಂದಾಗಿ ಹಿನ್ನೋಟ ಮುನ್ನೋಟ ಬೆರೆತು ಒಂದಾಗಿ ಬತ್ತಿ ಬೆ...

ನನ್ನ ಮನೆಯ ಒಡತಿ ನೀನು, ನನ್ನ ಮಕ್ಕಳ ತಾಯಿ ನೀನು, ಮೌನವಾಗಿ ತಲೆ ತಗ್ಗಿಸಿ ಎಲ್ಲರ ಸೇವೆ ಮಾಡುವ ನಿನಗೆ ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ ಮರಿಯಮ್, ಖತೀಜಾ ಹಾಗೂ ಬೀವಿ ಫಾತೀಮಾರಂತೆ ನಾವು ಮಾಡಿದ ಕಟ್ಟಳೆಗಳನ್ನು ನೀನೂ ತಲೆ ಮೇಲಿಟ್ಟು ಪಾಲಿಸು, ಇಂ...

ಮಾನ್ಯರಿಗೆ ಶರಣು ಜನ ಸಾಮಾನ್ಯರಿಗೆ ಶರಣು ಅನ್ಯರಿಗೆ ಶರಣು ಅನನ್ಯರಿಗೆ ಶರಣು ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು ಹೊನ್ನೆ ಮರದಡಿ ಕೂತವರಿಗೆ ಚೆನ್ನೆಯಾಡುವ ಕನ್ನೆಯರಿಗೆ ಕನ್ನಡದ ಜಾಣೆಯರಿಗೆ ಕನ್ನಡದ ಜಾಣರಿಗೆ ಬಹಳ ಶರಣು ಮೊನ್ನೆ ಹೋದವರಿಗೆ ನ...

ಭಾವ ಇರದ ಕವಿತೆ ಅದು ಅಕ್ಷರಮಾಲೆ ಜೀವ ಇರದ ಚರಿತೆ ಅದು ನೆನಪಿನ ಓಲೆ ಹರಿವು ಇರದ ಅರಿವು ಅಹುದು ಜಗಕೆ ಕೊಳಕು ತಿರುವು ಇರದ ಬದುಕು ಅದು ಯಾತರ ಬದುಕು? ನೋಟ ಇರದ ಬದುಕು ಅದಕೆ ಹಲವು ದಿಕ್ಕು ಹಿನ್ನೋಟ ತೊರೆದ ಯಾನ ಅದಕೆ ಯಾವ ದಿಕ್ಕು? ಸ್ಫೂರ್ತಿಭರಿ...

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು ...

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ… ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ… ‘ತಾಯಿಗಿಂತ ದೇವರಿಲ್ಲ… ಜನನಿ ತಾನೆ ಮೊದಲ ಗುರುವು’...

ಕನ್ನಡ ನಾಡು ನಮ್ಮ ನಾಡು ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು ಕನ್ನಡ ಚೆಲ್ವ ಕುವರ ಕುವರಿಯರ ನಾಡು ನಮ್ಮ ಚಲುವ ಕನ್ನಡ ನಾಡು ಸುಂದರ ಬನ ಸಿರಿಗಳ ಸಾಲೇ ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ ಸುವಾಸನೆಯ ಶ್ರೀಗಂಧದ ಬೀಡೇ ನಮ್ಮ ಚಲುವ ಕನ್ನಡ ನಾಡೇ ತು...

ಸಪ್ತಪದಿಯ ತುಳಿಯುವಾಗ ನಾನೆಣಿಸಿದ್ದು ಅವನೂ ನನ್ನೊಡನೆ ತನ್ನ ಹೆಜ್ಜೆ ಸೇರಿಸಿದ್ದಾನೆಂದು! ನಾಲ್ಕು ಹೆಜ್ಜೆಗಳು ಸೇರಲಿಲ್ಲವೆಂದು ತಿಳಿದದ್ದು, ಭ್ರಮನಿರಸನವಾದದ್ದು ಸಂಸಾರದೊತ್ತಡಗಳು ‘ಭಾರಿ’ ಆದಾಗ! ಆಗಲೇ ತಿಳಿದದ್ದು ನನ್ನ ದಾರಿಯೇ...

ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು? ನೋವು ಮೂಡಿದೆ ನಿನ್ನ ಗೆಲುಮೊಗದಲಿ ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ? ಗೋಸಲೀಲೆಯಕಾಂಬ ಸೌಭ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...