Home / ಕವನ / ಕವಿತೆ

ಕವಿತೆ

ನನಗೂನೆ ಯೆಂಡಕ್ಕು ಬಲಬಲೆ ದೋಸ್ತಿ. ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ. ನಂಗ್ ಎಸರು ಯೋಳ್ತಾರೆ-ರ್ರರ್ರರ್ರರ್ರರ್ರತ್ನ. ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ. ೧ ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ ಸಿಕ್ದಂಗೆ ನಂಗ್ ಒಬ್ಬ ಬೇವಾರ್‍ಸಿ...

ಜಗದ ಜೀವವನುಂಡು ಹಲವು ಬಗಗಳ ಕಂಡು ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ. ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು ಹಸಿತ ವದನದಿ ತೋರಿ ಕುಣಿಕುಣಿದು ನಲಿದ...

ವ್ಯವಸ್ಥೆಯ ಒಳಗಿನಿಂದ ಒಂದೊಂದೇ ಪ್ರಶ್ನೆಗಳೇಳುತ್ತವೆ ರಾಜಕೀಯದ ಬಣ್ಣ ಬಯಲಾಗುತ್ತದೆ ಶಸ್ತ್ರಾಸ್ತ್ರ ಕೆಳಗಿಟ್ಟ ಅವರು ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು! ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ? ಶ...

ಯಾವ ಕ್ಷಣದಲಿ ಯಾರೋ ಯಾರೂ ಅರಿಯದ ಊರಲಿ ಕರೆದು ಮಾತಾಡಿಸಿದವರು ಯಾರೋ ಬಾಯಾರಿದ ವೇಳೆಯಲಿ ನೀರೂಡಿಸಿದವರು ಯಾರೋ ಯಾವ ಕ್ಷಣದಲಿ ಯಾರೋ ನಡೆ ತಪ್ಪಿ ಬಿದ್ದಾಗ ಹಿಡಿದೆತ್ತಿದವರು ಯಾರೋ ಬೇಸರದಿ ಅಲೆಯುತಿದ್ದಾಗ ಕೆಲಸ ನೀಡಿದವರು ಯಾರೋ ಪ್ರೀತಿಗಾಗಿ ಪರಿತ...

ಮತ್ತೆ ಮಳೆ ಹೊಯ್ಯುತಿದೆ ಆದರೆ ಎಲ್ಲಾ ನೆನಪಾಗುವುದಿಲ್ಲ. ಮತ್ತೆ ಮತ್ತೆ ಮಳೆ ಬರಬೇಕು ಅಂದರೇ ಈ ನೆಲ ಹಸಿರಾಗುವುದು ಹಸಿರಾದೊಡೆ ಚಿಗುರಿತೆಂದು ನಾವು ಭ್ರಮಿಸುವುದು, ಅದು ಜ್ವಾಲಾಮುಖಿಯ ಮೇಲಿನ ಹಸಿರೆಂದು ಈ ಇಳೆ ಅದೆಷ್ಟು ಸಲ ಗುಡುಗಿಲ್ಲ. ಗುಡುಗು...

ಬಂಗಾರ ನೀರಿನಲಿ ಬೆಳಗುತಿದೆ ಬೆಳಗು ಮಂಜಿನ ತೆರೆಯಲಿ ಈ ಹೂವು ಆ ಹಕ್ಕಿ ನಲಿಯುತಿರೆ ನಯನ ಮನೋಹರ ವನಸಿರಿ ದುಂಬಿಗೆ ಮಧು ಮಹೋತ್ಸವ ಕನ್ನಡ ತೆನೆ ಹೊಯ್ದಾಡುತಿರೆ ಕನ್ನಡ ಕಂಪ ಸೂಸುವಂಗೆ ರಾಮನಾದರ್ಶ ಗಾಂಧೀಸತ್ಯ ಭೀಮ ಬಲ ಕೊಡು ತಾಯೇ ಮನವೆಂಬ ಮರ ಹೊತ್...

ಯಾಕೆ ಹುಡುಕಬೇಕು ಹೇಳು ಗೆಳತಿ, ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ, ಚುಕ್ಕಿಯಾಗಿ ಬಾನಲ್ಲಿ ಲೀನವಾದವರ? ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ ಈ ಕ...

ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ ಆದ ಸಂತೋಷ ಅಷ್ಟಿಷ್ಟಲ್ಲ ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತ...

ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...

ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ ನನ್ನ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...