ನೆತ್ತಿಗೆ ಹರಳೆಣ್ಣೆಯ ಹಬ್ಬವೆ? ಅಮವಾಸೆಯ ಕಗ್ಗತ್ತಲು ನಮಗೆ ನಾವೇ ಕಾಣಿಸಲಾರೆವು ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ ಅಡ್ಡಾಡದಿದ್ದರೂ ಎಡುವಿದಂತೆ ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ ಯಾರೂ ಮಾತನ...

ಮುಚ್ಚಿಕೊಂಡ ಕದಗಳ ಆಹ್ವಾನವಿಲ್ಲದ ಅಂತಃಪುರದೊಳಗೂ ಹೇಗೋ ನುಗ್ಗಿಬಿಡುತ್ತಾಳೆ ಗೊತ್ತೇ ಆಗದಂತೆ ಮೆಲ್ಲ ಮೆಲ್ಲಗೆ ಗೂಡುಕಟ್ಟಿ ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ ಇವಳದೇ ಜೀವಭಾವ ಮೈಮನಗಳ ತುಂಬಿಕೊಂಡು ಮೊಟ್ಟೆಯೊಡೆದು ಹುಟ್ಟಿಬಂದ ಕನಸಿನ ಕಂದನಿಗೆ ವ...

ಅವನು ಬರುತ್ತಾನೆ ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ...

ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ ನಿನ್ನೆದುರು ಏನಿಲ್ಲ ಮಾನಾವಮಾನ! ನಿಗಿ ನಿಗೀ ಉರಿಯುವ ಕೆಂಡ ಈ ಮನಸು ಘಮ ಘಮದ ಹುಡಿಧೂಪ ನೀನಿತ್ತ ಕನಸು ಬಿದ್ದಂತೆ ಹುಡಿ ಧೂಪ ಉರಿ ಕಾರಿ ಬಣ್ಣ ಏಳುವುವು ಗೀತೆಗಳು ಪರಿಮಳಿಸಿ ನನ್ನ! ಕಾದು ಎದೆ ಬಿರಿದಿರುವ ಬೇಸ...

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ ಪಿಝಾಹಟ್‌ದಲ್ಲಿ ಕುಳಿತಾಗ ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ ಇರುವಾಗಲೂ ಇಲ್ಲಿ ಎಲ್ಲರೆದೆಯಲಿ ಹಕ್ಕಿಗಳೇನೇನೋ ಮಾತಾಡುತ್ತವೆ. ಏನೆಲ್ಲ ಐಶಾರಾಮಿ ಬದುಕು ವಿ...

ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ ನೆಲಸೋಕದ ರಾಜಕುಮಾರ...

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ ರೋಮಾಂಚನವ ಚಿಗುರಿಸಿ ರಂದ್ರರಂದ್ರವ ಬಯಲಗಾಳಿಗೆ ತೆರೆಸೋ ನೀಲಿಗಟ್ಟಿರುವೀ ಧಮನಿಗಳಲ್ಲಿ ಕೆಚ್ಚು ರ...

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ? ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು ದಿನದ ದುಃಖ ದುಡಿತ ಇದ್ದಂತೇ ಇರುತ ಹೊಸದಾಯಿತೆ ಇಡಿಯ ಲೊಕ ನೀ ಹಜ್ಜ...

ಸೂರ್ಯ ನಸುಕಿನ ನಿನ್ನ ಹೂನಗೆ ಮುದ್ದಿಸಿಕೊಳ್ಳಲು ನಿನಗಿಂತ ಮೊದಲೇ ಎದ್ದು ಕಿಟಕಿಯಲಿ ನಿನಗಾಗಿ ಕಾಯುತ್ತೇನೆ ಬೆಳಗಿನ ಕಾಫಿಗಿಂತಲೂ ಚೇತೋಹಾರಿ ನಿನ್ನದೊಂದು ಸ್ಪರ್ಷ ಮಲ್ಲಿಗೆಯ ಘಮಲು ಆಹಾ! ನೆಲತುಂಬ ಸುರಿದ ಪಾರಿಜಾತ ಕಿಡಕಿಯಾಚೆ ಎದುರಿಗೆ ಬಂದೇಬಿಟ...

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....