
ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ? ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ; ಯಾಕೆ ಇಂಥ ಇರಿವ ನೋಟ ನೂರು ದೂರ ಹೊರಿಸುವಾಟ ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ? ಸೆಳಿದು ತಬ್ಬಿ ತೋಳಿನೊಳಗೆ ಬಾ ಅಪ್ಸರೆ ಎಂದ ಗಳಿಗೆ ನಾಚಿ ಎದೆಗೆ ...
ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ ಪುಕ್ಕಟೆಯಾಗಿ ನಾಯಿಮರಿಕೊಟ್ಟ ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ ನಾಯಿಮರಿ ಊಟ ತಿಂಡಿಗೆ ಹೊಂದಿ...
ಬೀದಿಗಿಳಿದ ಕವಿತೆ ಮತ್ತೆ ಬಾಗಿಲಿಗೆ ಬಚ್ಚಿಟ್ಟ ಬೆಳಕು ಒಳಗೆ ಕಣ್ ಕೋರೈಸುವ ಥಳುಕು ಹೊರಗೆ ಹೊರಗೋ? ಒಳಗೋ? ತರ್ಕದಲ್ಲಿ ಕವಿತೆ. ಬೀದಿಯರಿಯದ ಕವಿತೆ ಬಾಗಿಲಿಗೆ ಮೈಚೆಲ್ಲಿದೆಯಂತೆ ಒಳಗಿನ ಬಗೆಗೆ ನಂಬಿಕೆಯಿಲ್ಲ ಹೊರಗಿನ ಸೆಳೆತ ತಪ್ಪಿಲ್ಲ ಹೊರಗೋ? ಒ...
ಪ್ರಪಂಚದೊಳಗಿನ ಕಷ್ಟಗಳನ್ನು ನೋಡಲಾರದೆ ಪ್ರತಿ ದಿನವೂ ಪಡುವಣ ಸಮುದ್ರದಲ್ಲಿ ಬಿದ್ದು ಹೋಗೋಣವೆಂದು ತೆರಳುತ್ತಾನೆ ಸೂರ್ಯ ಮತ್ತೇ ಮರುದಿನ ಹೊತ್ತಾರೆ ಪ್ರಪಂಚದೊಡನೆ ಸಂಬಂಧಗಳನ್ನು ಬಿಡಿಸಿಕೊಳ್ಳಲಾಗದೆ ಭವಿಷ್ಯತ್ತಿನ ಆಶೆಯೊಡನೆ ಮೂಡಲಲ್ಲಿ ಉದಯಿಸುತ್...
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ! ನೀನೆ ಸರಿ ಅನ್ನಬೇಕು; ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವೆ ಹೀಗೆ ಆಡಿ ಕಾಡಿಸುವುದು ಸಾಕು. ಏಕಾಂತವೆನ್ನುವುದೆ ಇಲ್ಲ ನನಗೀಗ ಎದೆಯೊಳೆ ಬಿಡಾರ ಹೂಡಿರುವೆ; ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ ನಿನ್ನದೇ ನಾಮ...
ಜಗಕೆಲ್ಲಾ ಯಾಕಿಂಥಾ ನಿಶೆ ಕುಡಿಸಿ ನಶೆ ಏರಿಸುವೆಯೋ ಸೂರ್ಯ? ನಿನಗೆಲ್ಲವೂ ಹುಡುಗಾಟ ಕುಡಿಸಿ ಮನವ ಕೆಡಿಸುವ ಆಟ ಉನ್ಮತ್ತ ಪ್ರೀತಿಯಮಲು ನಿಷ್ಕಾರಣ ನಿರಾಕರಣದ ತೆವಲು ಸುಮ್ಮನೆ ಕಲ್ಲಾದವಳು ಭೂಮಿಯಾಳಕೆ ಇಳಿದು ಹೋದವಳು ಇರುವುದೆಲ್ಲವ ಬಿಟ್ಟು ಇಲ್ಲದ್...
ಶಂಕೆಯೆಂಬ ಬೆಂಕಿ ಸೋಕಿ ಬೇಯುವಾ ಮನ ಮೌನವಾಗಿ ನರಳುತಿದೆ ಉರಿದು ಹೂ ಬನ ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛಧಾರೆಗೆ ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ! ಜೀವ ಜೀವ ಹಾಡಿ ಹೆಣೆದ ಒಲುಮೆ ಗೂಡಿದು ಬರಿದಾಗಿದೆ ಹೊಯ್ದಾಡಿದೆ ಸಣ್ಣ ಗಾಳಿಗೂ! ದುಃಖ...
ತೀರ ಇತ್ತೀಚಿಗೆ ಸಂಜೆಹೊತ್ತಿನ ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು ಅದು ~ಆಕ್ಸಿಡೆಂಟೇ ಅಲ್ಲ ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು ಕಿರುಗುಟ್ಟಿದ ಗಾಲಿ – ಮುಂದಿನ ಕಾರು ಚಾಲಕ ಅರ್ಧಬೋಳು ತ...













