ಪ್ರಪಂಚದೊಳಗಿನ ಕಷ್ಟಗಳನ್ನು ನೋಡಲಾರದೆ
ಪ್ರತಿ ದಿನವೂ ಪಡುವಣ ಸಮುದ್ರದಲ್ಲಿ
ಬಿದ್ದು ಹೋಗೋಣವೆಂದು ತೆರಳುತ್ತಾನೆ ಸೂರ್ಯ
ಮತ್ತೇ ಮರುದಿನ ಹೊತ್ತಾರೆ
ಪ್ರಪಂಚದೊಡನೆ ಸಂಬಂಧಗಳನ್ನು ಬಿಡಿಸಿಕೊಳ್ಳಲಾಗದೆ
ಭವಿಷ್ಯತ್ತಿನ ಆಶೆಯೊಡನೆ
ಮೂಡಲಲ್ಲಿ ಉದಯಿಸುತ್ತಾನೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)