ಕನ್ನಡಿಗರಿಗೆ ವ್ಯಾಪಾರಮಾಡಲು ಬರುವುದಿಲ್ಲವೇ?

ಕನ್ನಡಿಗರಿಗೆ ವ್ಯಾಪಾರಮಾಡಲು ಬರುವುದಿಲ್ಲವೇ?

ಇದು ಅವರಿಗೆ ಹುಟ್ಟಿನಿಂದಲೇ ಬಂದ ಒಂದು ಶಾಶ್ವತ ನ್ಯೂನತೆಯೇ?

ನನಗೆ ಆಶ್ಚರ್ಯವೆನಿಸುವುದೇನೆಂದರೆ ಕರ್ನಾಟಕದ ನಗರಗಳಲ್ಲಿನ ಅಂಗಡಿ ಬೀದಿಗಳನ್ನು ನೋಡಿದರೆ ಒಂದು ನೂರು ಅಂಗಡಿಗಳಲ್ಲಿ ೬-೭ ಅಂಗಡಿಗಳು ಮಾತ್ರ ಕನ್ನಡಿಗರಿಂದ (ಇಲ್ಲಿ ಕನ್ನಡಿಗ ಅಂದರೆ ಮಾತೃಭಾಷೆ ಕನ್ನಡವಾಗಿದ್ದು ಮನೆಯಲ್ಲಿ ಕನ್ನಡ ಮಾತಾಡುವವರು) ಸ್ಥಾಪಿತವಾಗಿ, ಹಣ ಹೂಡಿ ನಿರ್ವಹಿಸಲ್ಪಟ್ಟು ಸ್ವಂತದ್ದಾಗಿರುವುದು. ಅಂದರೆ ರಾಜ್ಯದ ವಾಣಿಜ್ಯ ತೆರಿಗೆ ಕಂದಾಯದ ಒಟ್ಟು ೨೦,೦೦೦ ಕೋಟಿ ರೂ.ಗಳ ಮೊತ್ತದಲ್ಲಿ ಈ ಕನ್ನಡಿಗರ ಕೊಡುಗೆ ಅತ್ಯಂತ ಶೋಚನೀಯ ಸುಮಾರು ೫೦೦ ಕೋಟಿ ರೂ.ಗಳು ಮಾತ್ರ.

ಯಾವುದೇ ಸಮಾಜವು ವಾಣಿಜ್ಯದ ಆದ್ಯತೆ ಹೊಂದಿದ ಸಮಾಜವಾಗಿದ್ದರೆ ಸಂಪೂರ್ಣ ಸಮಾಜವೆಂದು ಮನ್ನಣೆ ಪಡೆದುಕೊಳ್ಳುತ್ತದೆ. ನಮ್ಮ ಪ್ರಿಯ ಕರ್ನಾಟಕದ ವಾಣಿಜ್ಯ ತೆರಿಗೆ ಆದಾಯಕ್ಕೆ ಕನ್ನಡಿಗರ ಕೊಡುಗೆ ವಾರ್ಷಿಕ ಕನಿಷ್ಠ ಪಕ್ಷ ೧೦,೦೦೦ ಕೋಟಿ ರೂ. ಗಳಾದರೂ ಆಗಬೇಕಿತ್ತು.

ಕನ್ನಡಿಗ ಸಮಾಜದ ವಾಣಿಜ್ಯ ಚಟುವಟಿಕೆಯ ಅಂಶವು ಯಾವಾಗ ನಿಂತು ಹೋಯಿತೋ ನಮಗೆ ತಿಳಿಯದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚೆನ್ನಾಗಿ ಕ್ರಿಯಾಶೀಲವಾಗಿತ್ತು. ಕ್ರಿ. ಶ. ೧೫೬೫ ರಲ್ಲಿ ಸಾಮ್ರಾಜ್ಯದ ಸೋಲು, ಅಳಿವಿನ ಬಳಿಕ ಅದು ಹಾಗಾಗಿರಬೇಕು. ಆಮೇಲೆ ರಾಜಕೀಯ ತುಮುಲ, ಸಾಮಾಜಿಕ ಸಮಸ್ಯೆಗಳು ಮತ್ತು ಕಷ್ಟಗಳನ್ನುಂಟುಮಾಡಿದ ಕದನಗಳಿಂದ ತುಂಬಿದ ಮೂರು ಶತಮಾನಗಳು (೧೭, ೧೮ ಮತ್ತು ೧೯ನೇ) ಒದಗಿದವು. ಆಮೇಲೆ ಉದ್ಭವಿಸಿದ ರಾಜಕೀಯ ವ್ಯವಸ್ಥೆಯು ಕನ್ನಡಿಗರಲ್ಲಿ ವಾಣಿಜ್ಯೋದ್ಯಮವನ್ನೂ ಪ್ರೋತ್ಸಾಹಿಸುವಂತಾಗಲಿಲ್ಲ. ರಾಜಕೀಯ ವ್ಯವಸ್ಥೆಯು ಈ ಕನ್ನಡಿಗರಿಗೆ ಪ್ರೋತ್ಸಾಹ ಕೊಡಲೇ ಇಲ್ಲ. ವಾಣಿಜ್ಯ ಚಟುವಟಿಕೆಗಳನ್ನಾಗಲೀ, ವಾಣಿಜ್ಯ ಸಂಸ್ಕೃತಿಯನ್ನಾಗಲೀ ಪ್ರೋತ್ಸಾಹಿಸದೆ ಕ್ರೂರವಾಗಿದ್ದು ವಾಣಿಜ್ಯಕ್ಕೆ ಬೆಂಬಲ, ಸಹಾಯಧನ, ಕೊಡದೆ ಈ ಕನ್ನಡಿಗರ ಬಂಡವಾಳ ಹೂಡಿಕೆಗೆ ರಕ್ಷಣೆಯನ್ನೂ ಕೊಡಲಿಲ್ಲ.

ವಾಣಿಜ್ಯ ಸಾಮರ್ಥ್ಯ, ಉದ್ಯಮಶೀಲತೆ ಮತ್ತು ಉದ್ಯಮ ಕೌಶಲ ಈ ಕನ್ನಡಿಗರಿಗೆ ಸಂಬಂಧಪಟ್ಟಂತೆ ಅತ್ಯಂತ ಕೆಳಸ್ತರದಲ್ಲಿರುವುದೇ ರಾಷ್ಟ್ರ್‍ಈಯ, ಅಂತಾರಾಷ್ಟ್ರ್‍ಈಯ ಮಟ್ಟದ ಚರ್ಚೆಗೂ ಗಂಭೀರ ವಿಷಯವಾಗಿದೆ. ನಾನು ವಾಷಿಂಗ್ಟನ್ನಲ್ಲಿದ್ದಾಗ ಅನಿವಾಸಿ ಭಾರತೀಯರೊಡನೆ ವಿಚಾರ ಮಾಡಿದ್ದೇನೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿದರು. ಸ್ವಾತಂತ್ರ್ಯ ಬಂದ ಮೇಲೆ, ೫೦ ವರ್ಷಗಳ ಹಿಂದೆಯೇ ಕನ್ನಡಿಗರು ವ್ಯಾಪಾರವನ್ನು ಚಿಕ್ಕದಾಗಿಯೇ ಆರಂಭಿಸಿ, ಅಂದರೆ ದಿನಸಿ ಅಂಗಡಿಗಳನ್ನು, ಲೇಖನ ಸಾಮಾಗ್ರಿಗಳ ಅಂಗಡಿಗಳನ್ನು, ಸಾಧಾರಣ ವಸ್ತುಗಳ ಅಂಗಡಿಗಳನ್ನು, ವಿದ್ಯುತ್ ಉಪಕರಣಗಳ ಅಂಗಡಿಗಳನ್ನು, ಕಬ್ಬಿಣದ ಅಂಗಡಿಗಳನ್ನು, ಬಟ್ಟೆ ಅಂಗಡಿಗಳನ್ನು, ಇವೇ ಮುಂತಾದ ಅಂಗಡಿಗಳನ್ನು ಆರಂಭಿಸಿ ನಡೆಸಿಕೊಂಡು ಬರಬಹುದಾಗಿತ್ತು. ಈ ಹೊತ್ತಿಗೆ ಕನ್ನಡಿಗರ ವಾಣಿಜ್ಯ ಸಾಮರ್ಥ್ಯವು ೩ ಜಿ ಮತ್ತು ೪ ಜಿ ಮಟ್ಟಕ್ಕೇರಿ ರಾಷ್ಪ್ರಮಟ್ಟದಲ್ಲಿ, ಕನ್ನಡಿಗರು ಗೌರವಾನ್ವಿತ ಉದ್ಯಮಿಗಳಾಗಿ ಮನ್ನಣೆ ಪಡೆಯುತ್ತಿದ್ದರು. ಆದರೆ ದುರದೃಷ್ಟವಶಾತ್ ಅದಾಗದೆ ಕನ್ನಡಿಗ ಇತರರ ವಾಣಿಜ್ಯ ಸಂಸ್ಥೆಗಳಲ್ಲಿ ಗುಮಾಸ್ತರಾಗಿ, ಕಿರಿಯ ಮಾರಾಟಗಾರರಾಗಿ, ಸ್ವಾತಂತ್ರಾ ನಂತರ ೫೦ ವರ್ಷಗಳಿಂದ ಸುವರ್ಣ ಕರ್ನಾಟಕದಲ್ಲಿ ದುಡಿಯುತ್ತಿದ್ದಾರೆ.

೨೧ನೇ ಶತಮಾನವು ಉದ್ಯಮಿಗಳ ಶತಮಾನ. ಅದು ವಾಣಿಜ್ಯ ಸಮುದಾಯದ ಶತಮಾನ. ಎಲ್ಲಕ್ಕಿಂತ ಹೆಚ್ಚಾಗಿ ಅದು ಯಾವ ಸಮಾಜವು ವ್ಯಾಪಾರ ಚಟುವಟಿಕೆಗಳನ್ನು ಸಮಾಜದ ಒಂದು ಮುಖ್ಯಾಂಶವೆಂದು ಮಾತ್ರವಲ್ಲದೆ ಸಮಾಜದ ಅತ್ಯಂತ ಮೂಲಭೂತ ಆವಶ್ಯಕ ಅಂಗವೆಂದು ಭಾವಿಸುತ್ತದೆಯೋ ಆ ಸಮಾಜಕ್ಕೆ ಸೇರಿದೆ ಈ ಶತಮಾನ. ಸಮಾಜದ ವಾಣಿಜ್ಯ ಅವಯವದಿಂದ ಉತ್ಪಾದಿಸಲ್ಪಟ್ಟ ಹಣವು ಸಮಾಜದ ಸಾಂಸ್ಕೃತಿಕ ಚಟುವಟಿಕೆಗಳನ್ನೂ, ಶೈಕ್ಷಣಿಕ ಉದ್ಯಮಗಳನ್ನೂ ಪೋಷಿಸುತ್ತದೆ. ಅದು ಅತ್ಯಾಧುನಿಕ ಆರೋಗ್ಯ ಸೌಕರ್ಯಗಳನ್ನೂ ಜೀವನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ವಾಣಿಜ್ಯಾಂಶವು ಸಮಾಜವನ್ನು ಕ್ರಿಯಾಶೀಲವನ್ನಾಗಿಯೂ, ಸ್ಪಂದಿಸುತ್ತ ಹೆಚ್ಚು ಚಲನಶೀಲವನ್ನಾಗಿಯೂ ಮಾಡುತ್ತದೆ. ಸುಪ್ತವಾಗಿ ಮುಂದುವರಿಯದೆ ಅಧೀನವಾಗಿರಗೊಳಿಸುವುದಿಲ್ಲ. ೨೧ನೇ ಶತಮಾನ ಮೊದಲಾಗಿ ೯ ವರ್ಷಗಳು ಕಳೆದರೂ ಖ್ಯಾತನಾಮರಾದ ಒಬ್ಬ ಕನ್ನಡಿಗ ವ್ಯಾಪಾರಸ್ಥನನ್ನೂ ಕಂಡಿಲ್ಲ.

ಇನ್ನು ೧೦-೧೫ ವರ್ಷಗಳಲ್ಲಿ ಚೀನಾದಂತೆ ಭಾರತವೂ ಉತ್ಪಾದನೆಯಲ್ಲಿ ಭಾರಿ ರಾಷ್ಟ್ರವಾಗುತ್ತದೆ. ಹಲವಾರು ಸಾವಿರ ಕೋಟಿ ಮೌಲ್ಯದ ಪದಾರ್ಥಗಳು, ವಸ್ತುಗಳು ಒಳ್ಳೆಯ ಲಾಭದ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಲಭ್ಯವಾಗಲಿವೆ. ಈ ಮಹಾವಕಾಶವನ್ನು ಉಪಯೋಗಿಸಿಕೊಂಡು ಮಾರಾಟ ಮಾಡಿ ಐಶ್ವರ್ಯ ಸಂಪಾದಿಸಲು ಈ ಕನ್ನಡಿಗರೆಲ್ಲಿ ಸಜ್ಜಾಗಿದ್ದಾರೆ ? ಕನ್ನಡಿಗರು ಅದ್ಭುತವಾಗಿ ಕೊಳ್ಳುವವರು ಮಾತ್ರ, ಎಂದೂ ಮಾರುವವರಲ್ಲ, ಅದಕ್ಕೇ ನಾನು ಕರ್ನಾಟಕದಲ್ಲಿ ಎಲ್ಲಿ ಹೋದರೂ ಹೆಚ್ಚಾಗಿ ಬಯ್ಯಪ್ಪನಹಳ್ಳಿ ವಿಲೇಜ್ (ಕೊಳ್ಳುವವರ ಹಳ್ಳಿಗಳ)ನ್ನು ಮಾತ್ರ ಕಾಣುತ್ತೇನೆ. ಒಂದೇ ಒಂದು ಮಾರಪ್ಪನಹಳ್ಳಿ (ಸೆಲ್ಲರ್ಸ್ ವಿಲೇಜ್) ಯನ್ನು ಕಾಣುವುದಿಲ್ಲ.

ವಾಣಿಜ್ಯ ಕ್ಷೇತ್ರದಲ್ಲಿ ‘ಸೋತಿರುವುದಲ್ಲದೆ ಕನ್ನಡಿಗರು ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ಸೋತಿದ್ದಾರೆ. ಇಡೀ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಿಗರು ಮೂಲಭೂತ ಸೌಕರ್ಯ ಎಂಬ ಪದವನ್ನೂ ಕೇಳಿಯೇ ಇರಲಿಲ್ಲ. ಭಾರಿ ಕಟ್ಟಡಗಳು, ಭಾರಿ ಸೇತುವೆಗಳು, ೪ ಪಥಗಳ ಹೆದ್ದಾರಿಗಳು, ಮೇಲು ರಸ್ತೆಗಳು, ಕೆಳರಸ್ತೆಗಳು, ದೊಡ್ಡ ಅಣೆಕಟ್ಟುಗಳು, ದೊಡ್ಡ ನಗರಗಳು, ಚಿಕ್ಕ ವಿಮಾನ ನಿಲ್ದಾಣಗಳು, ಸಣ್ಣ ಬಂದರುಗಳು ಮತ್ತು ವಿದ್ಯುದ್ಯೋಜನೆಗಳು ಇವುಗಳ ನಿರ್ಮಾಣ ಕಾರ್ಯಕ್ಕೆ ಒಂದೇ ಒಂದು ಗುತ್ತಿಗೆಯೂ ಅವರದಿಲ್ಲ. ಗಗನಚುಂಬಿ ಕಟ್ಟಡಗಳನ್ನು ಬಿಡೋಣ, ಕನ್ನಡಿಗರು ಒಂದೇ ಒಂದು ಮೋಡ ಮುಟ್ಟುವ ಕಟ್ಟಡವನ್ನೂ ಕಳೆದ ೫೦ ವರ್ಷಗಳಲ್ಲಿ ಕಟ್ಟಿಲ್ಲ.

೧೯೫೨ನೇ ವರ್ಷದಲ್ಲಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕನ್ನಡಿಗರು ಗುತ್ತಿಗೆ ಪಡೆಯಲು ಅಶಕ್ತರಾದರು. ಕಾರಣ ಕಟ್ಟಡ ನಿರ್ಮಾಣ ಸಾಮರ್ಥ್ಯದಲ್ಲಿ ತಮ್ಮ ಅವಿಶ್ವಾಸದಿಂದ ಈ ಕನ್ನಡಿಗರು ನಿರಾಕರಿಸಲ್ಪಟ್ಟರು. ಸರಿಯಾಗಿ ೫೦ ವರ್ಷಗಳ ಬಳಿಕ ೨೦೦೨ರಲ್ಲಿ ಅವರು ಮತ್ತೆ ವಿಕಾಸ ಸೌಧದ ನಿರ್ಮಾಣದ ಬಗ್ಗೆ ನಿರಾಕರಿಸಲ್ಪಟ್ಟರು. ಸುವರ್ಣ ಕರ್ನಾಟಕದ ೫೦ ಸುವರ್ಣದ ವರ್ಷಗಳಲ್ಲಿ ಕನ್ನಡಿಗರ ಭಾರಿ ನಿರ್ಮಾಣ ಕಾರ್ಯದ ಸಾಮರ್ಥ್ಯದಲ್ಲಿ ಏನೂ ಉತ್ತಮಿಕೆಯಾಗದಿರುವುದು ಒಂದು ದುರಂತ.

ಕರ್ನಾಟಕದ ದೊಡ್ಡ ದೇವಾಲಯಗಳನ್ನು ಈ ಕನ್ನಡಿಗರು ಕಟ್ಟಿರುವ ಬಗ್ಗೆ ನಮಗೆ ತುಂಬ ಹೆಮ್ಮೆ ಆದರೆ ಈ ಎರಡು ಪ್ರತಿಷ್ಠಿತ ಕಟ್ಟಡಗಳ ಬಗ್ಗೆ ನಾವು ಹೆಮ್ಮೆ ಪಡುವಂತಿಲ್ಲ.

ರಾಜಕಾರಣಿಗಳಿಗೆ ಕರ್ನಾಟಕ ರಾಜ್ಯವು ಶ್ರೀಮಂತ ರಾಜ್ಯವಾಗಿರಬಹುದು. ಆದರೆ ಕನ್ನಡಿಗರ ಪಾಲಿಕೆ ಅದು ಬಡರಾಜ್ಯ.

ಕನ್ನಡಿಗರಿಗೆ ಕರ್ನಾಟಕದ ಬೊಕ್ಕಸ ದುರ್ದೈವದಿಂದ ಒಂದು ಬೋರಲು ಹಾಕಿದ ಖಾಲಿ ಪಾತ್ರೆ. ಅದಕ್ಕೆ ಅಂಟಿಕೊಂಡ ಚಿನ್ನದ ಗಟ್ಟಿಗಳಿಗಾಗಿ ಈ ಕನ್ನಡಿಗರು ತಡಕಾಡುವುದಕ್ಕೂ ಆ ಪಾತ್ರೆಗೆ ಹುಣಸೆ ಹಣ್ಣಿನ ಲೇಪವೂ ಇಲ್ಲ. ಉದಾಹರಣೆ ಗಾಗಿ: ಬೆಂಗಳೂರು-ಮೈಸೂರು ಹೆದ್ದಾರಿಯಾಗಿದ್ದ ಚಿಕ್ಕದಾರಿಯನ್ನು ೪ ಪಥದ ರಾಜ್ಯ ಹೆದ್ದಾರಿ ಮಾಡಲು ರಾಜ್ಯ ಸರ್ಕಾರವು ೪೦೦ ಕೋಟಿ ರೂ. ಗಳನ್ನು ವೆಚ್ಚ ಮಾಡಿದೆ. ಆದರೆ ಕನ್ನಡಿಗರಿಗೆ ೩ ರಿಂದ ೪ ಕೋಟಿ ರೂ.ಗಳ ಕೆಲಸದ ಗುತ್ತಿಗೆ ಮಾತ್ರ ಕೊಡಲ್ಪಟ್ಟಿದೆಯೆಂದು ನನ್ನ ನಂಬಿಕೆ. ಆ ಬೋರಲು ಹಾಕಿದ ಪಾತ್ರೆಯ ಮೇಲಾದ ಒಂದು ಗೀಚಲು ಮಾತ್ರ. ಹಾಗೆಯೇ ಆ ದಾರಿಯನ್ನು ಎಸ್.ಎಮ್. ಕೃಷ್ಣ ರಾಜ್ಯ ಹೆದ್ದಾರಿ ಎಂದು ಕರೆಯಬೇಕೆಂದು ನನ್ನ ಅನಿಸಿಕೆ. ಕನ್ನಡಿಗರ ಸಂಕುಚಿತ ಆಲೋಚನೆಯು ಕಿರಿದಾದ ದಾರಿಯನ್ನು ಮೀರಿ ಆಲೋಚಿಸದಿದ್ದಾಗ ಮಾನ್ಯ ಶ್ರೀ ಎಸ್. ಎಮ್. ಕೃಷ್ಣ ಅವರಿಗೆ ಧೈರ್ಯವೂ, ದೃಷ್ಟಿಯೂ ಇದ್ದು ರಾಜ್ಯದಲ್ಲಿ ಅಂತಹ ಮೊಟ್ಟ ಮೊದಲಿನ ೪ ಪಥಗಳ ರಾಜ್ಯ ಹೆದ್ದಾರಿಗೆ ಮಂಜೂರಾತಿಯು ಒದಗಿತು. ನಾವು ಭಾಗ್ಯದ ಲಕ್ಷೀ ಬಾರಮ್ಮ, ಭಕ್ತಿ ಗೀತೆಯನ್ನು ಕಳೆದ ೫೦೦ ವರ್ಷಗಳಿಂದಲೂ ಹಾಡುತ್ತಿದ್ದೇವೆ. ಆದರೆ ಕನ್ನಡಿಗರಿಗೆ ಆ ಭಕ್ತಿಗೀತೆಯು ಪ್ರಾರ್ಥಿಸುವ ಭಾಗ್ಯದವರ ಇನ್ನೂ ಬರಬೇಕಾಗಿದೆ. ಬಹುಶಃ ದೇವತೆಗಳ ಲೋಕದಲ್ಲಿ ಕನ್ನಡದ ಅಧಿದೇವತೆ ಭುವನೇಶ್ವರಿಗೂ, ಭಕ್ತಿಪೂರ್ವಕವಾಗಿ ೩ ಕೋಟಿ ಭಕ್ತರಿಂದ ಕನ್ನಡ ಲಕ್ಷ್ಮೀ ಎಂದು ಕರೆಸಿಕೊಳ್ಳುವ ಭಾಗ್ಯದ ಲಕ್ಷ್ಮಿಗೂ ಒಂದು ಚಿಕ್ಕ ಘರ್ಷಣೆ ಇದ್ದಿರಬೇಕು. ಗಣೇಶ ದೇವನಿಗೂ ಚಂದ್ರದೇವನಿಗೂ ಇದ್ದ ಹಾಗೆ. ಪರಿಣಾಮವಾಗಿ, ಭಾಗ್ಯದ ಲಕ್ಷ್ಮಿಯ ವರಪ್ರದಾನವಾಗುವುದು ಅತಿಯಾಗಿ ವಿಳಂಬವಾಗುತ್ತಿದೆ.

ಕನ್ನಡಿಗರಲ್ಲಿ ಬಹುಪಾಲು ಜನರು ಒಂದು ತೀವ್ರವಾದ ಆರ್ಥಿಕ ರೋಗಕ್ಕೆ, “ಕ್ಯಾಷ್‌ಲೆಸ್‌ನೆಸ್‌’ (cashlessness) ಈಡಾಗಿದ್ದಾರೆ. ಹಾಗಾಗಿ ಒಂದು ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಬೇಕಾದ ಸ್ಥಳಾವಕಾಶವನ್ನು ಕೊಂಡು ಮಾಲೀಕರಾಗಲು ಅಗತ್ಯವಾದ ಪ್ರಾಥಮಿಕ ಹಣ ಹೂಡಿಕೆಗೂ ಅಸಮರ್ಥರಾಗಿದ್ದಾರೆ. ಮಾರಾಟ ಮಾಡಲು ವಸ್ತುಗಳು ಸಾಮಾಗ್ರಿಗಳನ್ನು ಕೊಳ್ಳಲಾರದವರಾಗಿದ್ದಾರೆ. ವ್ಯಾಪಾರ ಮಾಡಲು ಮಾರಾಟವಾಗಬಲ್ಲ ವಸ್ತುಗಳ ಸಗಟು ಖರೀದಿಗೆ ಅವುಗಳ ಉತ್ಪಾದನಾ ಕೇಂದ್ರಗಳ ಅರಿವನ್ನೂ ಪಡೆದಿಲ್ಲದವರಾಗಿದ್ದಾರೆ.

ಮೇಲೆ ಹೇಳಿದ ತೀವ್ರ ಕೊರತೆಗಳ ಕಾರಣ ಕನ್ನಡಿಗರಿಗೆ ವಾಣಿಜ್ಯವನ್ನು ಪ್ರಾರಂಭಮಾಡಲು ಪರಿಸ್ಥಿತಿ ತುಂಬ ಕಷ್ಟಕರವಾಗಿದೆ. ಆದ್ದರಿಂದ ರಾಜ್ಯಸರ್ಕಾರವು ಕೂಡಲೇ ಮಧ್ಯೆ ಪ್ರವೇಶಿಸಿ ತುರ್ತಾಗಿ ಕನ್ನಡಿಗರಲ್ಲಿ ವಾಣಿಜ್ಯ ಚಟುವಟಿಕೆಯನ್ನು ಪ್ರೋತ್ಸಾಹಿಸಿ ಬೆಂಬಲಿಸಬೇಕಾಗಿದೆ. ಕನ್ನಡಿಗರಲ್ಲಿ ಉದ್ದಿಮೆಯ ಸಾಮರ್ಥ್ಯವನ್ನು ಮತ್ತೆ ಹೆಚ್ಚಿಸಿಕೊಡಲು ಸರ್ಕಾರವು ಏನನ್ನು ಮಾಡಬೇಕು. ೧೬ನೇ ಶತಮಾನದ ವಿನಾಶಕಾರಿ ಕದನದ ಬಳಿಕ ಸುಮಾರು ೫೦೦ ವರ್ಷಗಳ ಕಾಲ ಅತ್ಯಂತ ಕೆಳಮಟ್ಟದಲ್ಲಿ, ಕೆಲ್ವಿನ್ ಶೂನ್ಯ ಮಟ್ಟದಲ್ಲಿದೆ ಅವರ ಸಾಮರ್ಥ್ಯ. ಆರ್ಥಿಕ, ರಾಜಕೀಯ ಮತ್ತು ಮೂಲಭೂತ ಸೌಕರ್ಯಗಳ ಮತ್ತು ಸರ್ಕಾರದ ಬೆಂಬಲದಿಂದ ವಂಚಿತವಾಗಿದೆ.

ವಾಣಿಜ್ಯ ವ್ಯವಹಾರಗಳ ಸಂತೋಷವನ್ನು ದೇವರೇ ಒಂದು ಸಮಾಜಕ್ಕೆ, ಕನ್ನಡಿಗ ಸಮುದಾಯಕ್ಕೆ ನಿರಾಕರಿಸಿರುವುದು ಅತ್ಯಂತ ದುರದೃಷ್ಟಕರ. ಇದೊಂದು ದೇವರ ಶಾಪವಾಗಿದ್ದರೆ ಅದು ತಲಕಾಡಿನ ಶಾಪಕ್ಕಿಂತಲೂ ಕೆಟ್ಟದಾಗಿದೆ. ಒಂದಾದ ಮೇಲೆ ಬಂದ ಸರ್ಕಾರಗಳು ಕನ್ನಡಿಗ ಸಮಾಜದಲ್ಲಿ ಉದ್ಯಮ ಚಟುವಟಿಕೆಯನ್ನು ಪ್ರೋತ್ಸಾಹಿಸುವುದರಲ್ಲಿ ವಿಫಲವಾಗಿದೆ. ಸರ್ಕಾರದ ಈ ಮಹಾವೈಫಲ್ಯವು ಕನ್ನಡಿಗರಿಗೆ ಅಪಮಾನವನ್ನು ತಂದಿದೆ.

ನನಗೆ ಅನ್ನಿಸುತ್ತಿದೆ ಇನ್ನು ಮುಂದೆ ವಿಳಂಬ ಮಾಡದೆ ರಾಜ್ಯ ಸರ್ಕಾರವು ಕನ್ನಡಿಗರನ್ನು ವ್ಯಾಪಾರೋದ್ಯಮ ಕ್ಷೇತ್ರಕ್ಕೆ ಆಕರ್ಷಿಸಲು ಮುಂದೆ ಹೇಳುವ ಸೌಕರ್ಯ ಗಳನ್ನು ಅವರಿಗೆ ಒದಗಿಸಿಕೊಡಬೇಕು. ಉದ್ಯಮ ಸಾಮರ್ಥ್ಯವು ಕನ್ನಡಿಗರಲ್ಲಿ ೪೦೦-೫೦೦ ವರ್ಷಗಳಿಂದಲೂ ಸುಪ್ತವಾಗಿದೆ. ಈ ಕನ್ನಡಿಗರಲ್ಲಿ ಉದ್ಯಮ ಸಾಮರ್ಥ್ಯವನ್ನು ಚಟುವಟಿಕೆಯನ್ನು ಮತ್ತೆ ಚುರುಕುಗೊಳಿಸಲು ರಾಜ್ಯಸರ್ಕಾರವು ಅವರಿಗೆ ಅಪಾರ ಪ್ರೋತ್ಸಾಹವನ್ನು, ಅಪಾರ ರಿಯಾಯಿತಿಯನ್ನು, ಅಪಾರ ಸಹಾಯ ಧನವನ್ನು ಮತ್ತು ಅಪಾರ ರಕ್ಷಣೆಯನ್ನು ಕೊಡಬೇಕು. ಹಾಗಾದರೆ ಈ ಕನ್ನಡಿಗರು ಮತ್ತೆ ಉದ್ಯಮ ಚಟುವಟಿಕೆಯನ್ನು ತಡಮಾಡದೆ ಪ್ರಾರಂಭಿಸಬಹುದು. ಸಂಕೋಚ ವಿಲ್ಲದೆ, ಈ ಮನೋಲಕ್ಷಣ ಅಂದರೆ ಕಳೆದ ಹಲವಾರು ಶತಮಾನಗಳ ಕಾಲ ಧೈರ್ಯದಿಂದ ವ್ಯಾಪಾರೋಧ್ಯಮದ ಚಟುವಟಿಕೆಗಳಿಂದ ತಡೆಹಿಡಿದ ಕನ್ನಡಿಗ ಭಯವಿಲ್ಲದೆ ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಿಸಬಹುದು.

ರಾಜ್ಯ ಸರ್ಕಾರಗಳು ಕೂಡಲೇ ಕಾರ್ಯನಿರತವಾಗಬೇಕು. ಈ ಮುಂದೆ ಹೇಳುವ ಸೌಕರ್ಯಗಳನ್ನೂ, ರಿಯಾಯಿತಿಗಳನ್ನೂ, ಈ ಕನ್ನಡಿಗರಿಗೆ ವ್ಯಾಪಾರದ ಮಳಿಗೆಗಳನ್ನು ತೆರೆಯಲು ಮತ್ತು ಅತ್ಯಾಧುನಿಕ ಕನ್ನಡಿಗ ಚಿಕ್ಕಪೇಟೆ, ಕನ್ನಡಿಗ ದೊಡ್ಡ ಪೇಟೆ ಗಳನ್ನು ಸ್ಥಾಪಿಸಲು ಕೊಡಬೇಕು.

೧. ವ್ಯಾಪಾರಿ ಅಂಗಡಿಗಳನ್ನು ಶೇಕಡಾ ೩೦ ಬಿಬಿ‌ಎಂಪಿ, ಬಿಡಿ‌ಎ, ರಾಜ್ಯ ಸರ್ಕಾರ ಕೆ‌ಐ‌ಎಡಿಬಿ, ಕೆಹೆಚ್ಬಿಗಳು ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಗಳಲ್ಲಿ ಕನ್ನಡಿಗರಿಗಾಗಿ ಕೇವಲ ಉದ್ಯಮ ಪ್ರಯತ್ನಗಳಿಗೋಸ್ಕರ ಮೀಸಲಿರ ಬೇಕು.

೨. ಕನ್ನಡಿಗರಿಗೆ ಅಂಗಡಿಗಳು ರಿಯಾಯಿತಿ ಬಾಡಿಗೆಯಲ್ಲಿ ಕೊಡಲ್ಪಡಬೇಕು.

೩. ಕನ್ನಡ ಅಂಗಡಿ ಮಾಲೀಕರಿಗೆ ಮತ್ತು ಕನ್ನಡ ವ್ಯಾಪಾರಿಗಳಿಗೆ ಅವರ ವಹಿವಾಟಿನ ಮೇಲೆ ಒಂದು ಮಿತಿ ಇಟ್ಟು, ಮಾರಾಟ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ, ಇತರ ತೆರಿಗೆಗಳೇ ಮೊದಲಾಗಿ ಎಲ್ಲಾ ಸರ್ಕಾರಿ ತೆರಿಗೆಗಳಿಂದ ಮೊದಲು ವರ್ಷಗಳ ವಿನಾಯಿತಿ ಇರಬೇಕು.

೪. ಕನ್ನಡಿಗರ ಅಂಗಡಿಗಳ ಮೇಲೆ ಸರ್ಕಾರಿ ಆಜ್ಞೆಯನ್ನು ನ್ಯಾಯಸಮ್ಮತವಾಗಿ ಸ್ವಲ್ಪಮಟ್ಟಿಗೆ ಮಾತ್ರ ಹಾಕಬೇಕು.

೫. ಸಾಲದ ಮೊತ್ತದ ಮೇಲೆ ಒಂದು ಮಿತಿಯನ್ನಿಟ್ಟು ಈ ಕನ್ನಡಿಗ ವ್ಯಾಪಾರಿ ಗಳಿಗೆ ಶೇ.೩ ಅಥವಾ ಶೇ.೨ ರ ಬಡ್ಡಿಯ ಸಾಲವನ್ನು ನೀಡಬೇಕು.

೬. ಆಯ್ದ ಕೆಲವು ಕೇಂದ್ರೀಯ ಸ್ಥಳಗಳಲ್ಲಿ ಅತ್ಯಾಧುನಿಕ ಮತ್ತು ನಿರ್ಮಲವಾದ ಸೌಕರ್ಯಗಳಿಂದ ಕೂಡಿದ ಕೇವಲ ಈ ಕನ್ನಡಿಗ ಅಂಗಡಿಗಳ ಸಂಕೀರ್ಣ ಗಳ ನಿರ್ಮಾಣವಾಗಬೇಕು, ಇಂತಹ ಕನ್ನಡಿಗ ವ್ಯಾಪಾರಿಗಳ ಉಪಯೋಗಕ್ಕೆ ಮಾತ್ರ.

೭. ರಾಜ್ಯಸರ್ಕಾರವು ಉದ್ಯಮ ಸಲಹೆಗಾರರನ್ನು ನೇಮಕ ಮಾಡಬೇಕು. ಅವರೊಡನೆ ಈ ಕನ್ನಡಿಗ ವ್ಯಾಪಾರಿಗಳು ತಮ್ಮ ಉದ್ಯೋಗದ ಬಗ್ಗೆ ಸಮಾಲೋಚಿಸಿ ಸಮಸ್ಯೆಗಳ ಪರಿಹಾರದ ಬಗ್ಗೆ ಸಲಹೆಗಳನ್ನು ಪಡೆದು ಕೊಳ್ಳಬಹುದು.

ರಾಜ್ಯಸರ್ಕಾರವು ಇಂತಹ ಕನ್ನಡಿಗ ಉದ್ಯೋಗಿಗಳಿಗೆ ಮುಂದಿನ ಬಜೆಟ್‌ನಲ್ಲೇ ಈ ರಿಯಾಯಿತಿಗಳನ್ನೂ ಪರಿಚಯಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಬಹುದು. ಪ್ರಾರಂಭಕ್ಕೆ ಅದು ಸಣ್ಣ ಪ್ರಮಾಣದಲ್ಲಿರಬಹುದು. ಅದು ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರ ಅತಿ ಸುಂದರ ಮತ್ತು ಭವ್ಯವಾದ ಬಜೆಟ್ ಆಗುವುದು.

೨೦ನೇ ಶತಮಾನದ ಕನ್ನಡಿಗ ರಾಜಕಾರಣಿಗಳು ಕನ್ನಡಿಗ ವ್ಯಾಪಾರಿಗಳನ್ನೂ, ಕನ್ನಡ ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಜವಾಬ್ದಾರಿಯನ್ನು ತಪ್ಪಿಸಿ ಕೊಂಡರು. ಬೊಂಬಾಯನ್ನು ಮಹಾರಾಷ್ಟ್ರದವರು ಮಾತ್ರ ಕಟ್ಟಲಿಲ್ಲವೆಂಬ ಘೋಷಣೆಯನ್ನು ಸೃಷ್ಟಿಸಿ ದೊಡ್ಡ ಸಂಖ್ಯೆಯಲ್ಲಿ ಹೊರಗಿನವರನ್ನು ಕರೆತಂದು, ಈ ಕನ್ನಡಿಗರನ್ನು ಬೆಂಗಳೂರು ಮತ್ತು ಕರ್ನಾಟಕದ ಬೆಳವಣಿಗೆ ಪ್ರಕ್ರಿಯೆಯಿಂದ ದೂರ ಹೊರಗಿಟ್ಟರು. ಈ ಕನ್ನಡಿಗರಿಗೆ ಬೃಹತ್ ಪ್ರೋತ್ಸಾಹಗಳನ್ನು ನೀಡಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತೊಡಗಿಸಬಹುದಾಗಿತ್ತು. ಹೀಗೆ ಇಂತಹ ಕನ್ನಡಿಗರನ್ನು ೨೦ನೇ ಶತಮಾನದಲ್ಲಿ ಯಾರೂ ಅಲ್ಲವೆಂದೆನಿಸಿ ನಗರ ಮತ್ತು ರಾಜ್ಯದ ಬೆಳವಣಿಗೆಯ ವಿಷಯದಲ್ಲಿ ಹೊರಗಿರಿಸಲಾಯಿತು. ಇದರ ಫಲವಾಗಿ, ಬಂದು ಉದ್ಯೋಗವನ್ನು ಆರಂಭಿಸಲು ಮತ್ತು ನಡೆಸಲು ನಾನು ಕೊಂಡ ಮಾರ್ಗದರ್ಶಿ ಪುಸ್ತಕವು ಸರ್ಕಾರದ ಬೆಂಬಲ ಮತ್ತು ಸಹಾಯಧನಗಳ ಅಭಾವದಿಂದ ೫೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಅನುಪಯುಕ್ತವಾಗಿತ್ತು.

ಕನ್ನಡಿಗ ವ್ಯಾಪಾರಿಗಳಿಗೂ, ಕನ್ನಡ ಉದ್ಯಮಶೀಲರಿಗೂ ಬೃಹತ್ ಪ್ರಮಾಣದ ರಿಯಾಯಿತಿಗಳನ್ನು ಕೂಡಲೇ ಘೋಷಿಸದಿದ್ದರೆ, ಈ ಕನ್ನಡಿಗರಿಗೂ, ಕನ್ನಡ ರಾಜ್ಯಕ್ಕೂ ರಾಜ್ಯಸರ್ಕಾರ ದೊಡ್ಡ ಅನ್ಯಾಯವನ್ನು ಮಾಡಿದಂತಾಗುತ್ತದೆ.

ಈ ಮುಂದೆ ಹೇಳುವ ಎಲ್ಲ ಕ್ಷೇತ್ರಗಳನ್ನು ಕನ್ನಡಿಗ ಸಮಾಜವು ಶೀಘ್ರ ಪ್ರಗತಿ ಯನ್ನು ಸಾಧಿಸುವುದನ್ನು ಖಾತರಿಗೊಳಿಸಲು ಕರ್ನಾಟಕ ಸರ್ಕಾರದಲ್ಲಿ ಪ್ರತ್ಯೇಕ ಮಂತ್ರಿ ಖಾತೆಯನ್ನು ಏರ್ಪಡಿಸುವ ತುರ್ತು ಅಗತ್ಯವಿದೆ.

೧. ಇಂತಹ ಕನ್ನಡಿಗರಲ್ಲಿ ವ್ಯಾಪಾರಿ ಚಟುವಟಿಕೆ ಮತ್ತು ಉದ್ಯಮ.
೨. ಈ ಕನ್ನಡಿಗರಿಂದ ನಿರ್ಮಾಣ ಕಾರ್ಯ.
೩. ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಕನ್ನಡಿಗರು.

ಬಿಜೆಪಿಯು ಗುಜರಾತ್ ಮಾದರಿಯ ಆಡಳಿತವನ್ನು ಕರ್ನಾಟಕಕ್ಕೆ ಸಲಹೆ ಮಾಡುತ್ತಿದೆ. ನನ್ನ ಕೆಲವು ಮಿತ್ರರು ಕರ್ನಾಟಕಕ್ಕೆ ಕರ್ನಾಟಕ ಮಾದರಿಯನ್ನು ಹೇಳುತ್ತಾರೆ. ಕರ್ನಾಟಕ ಮಾದರಿಗಿಂತ ಭಿನ್ನವಾದ ಇನ್ನೂ ಹೆಚ್ಚು ಸಫಲವಾಗುವ ಆಡಳಿತ ಮಾದರಿಯನ್ನು ಕಂಡುಕೊಳ್ಳಬೇಕಾಗಿದೆ. ಕರ್ನಾಟಕ ಮಾದರಿಯನ್ನು ಬದಲಾಯಿಸಬೇಕಾದ ಆವಶ್ಯಕತೆ ಇದೆ. ಏಕೆಂದರೆ ಕಳೆದ ೬೦ ವರ್ಷಗಳಿಂದಲೂ ಪ್ರಯೋಗಿಸುತ್ತಿರುವ ಈ ಮಾದರಿಯಿಂದ ಹೆಚ್ಚಿನ ಒಳ್ಳೆಯದೇನೂ ಉದ್ಭವಿಸಿಲ್ಲ. ಬದಲಾಗಿ, ಶ್ರೀ ಲಾಲು ನಮ್ಮನ್ನು ಕೊಳಕು ಜನವೆಂದೂ, ಶ್ರೀ ಹರೀಶ್ ವಿಧೇಯ ಜನರೆಂದೂ ಕರೆದು ಕರ್ನಾಟಕ ಮಾದರಿಯನ್ನನುಸರಿಸಿ ೬೦ ವರ್ಷವಾದರೂ ನಮ್ಮ ವ್ಯಾಪಾರ ಸಾಮರ್ಥ್ಯ ಶೂನ್ಯಮಟ್ಟದಲ್ಲೇ ಇದೆ. ಕರ್ನಾಟಕ ಮಾದರಿಯು ಆತ್ಮ ಘಾತುಕ ಮಾದರಿಯೆನಿಸುತ್ತದೆ. ತಕ್ಷಣ ಬದಲಾವಣೆ ಅಗತ್ಯ. ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಅದು ಚೆನ್ನಾಗಿದ್ದಿರಬಹುದು. ಆಗ ಔದ್ಯೋಗಿಕ ಪ್ರಗತಿಯು ನಿಧಾನಗತಿಯಲ್ಲಿದ್ದು ಹಲವು ಆವಿಷ್ಕಾರಗಳು ಅಂತಾರಾಷ್ಟೀಯ ಪ್ರಯೋಗಶಾಲೆಗಳ ತೊಟ್ಟಿಲಲ್ಲಿದ್ದವು. ಕಳೆದ ಮೂವತ್ತು ವರ್ಷಗಳಲ್ಲೇ ಮನಸ್ಸಮ್ನ ಚಕಿತಗೊಳಿಸುವ ಶೋಧನೆಗಳನ್ನು ಆವಿಷ್ಕಾರಗಳನ್ನು ಅವುಗಳಿಂದ ಫಲಿಸಿದ ಬೆರಗಾಗಿಸುವ ಉತ್ಪನ್ನಗಳನ್ನೂ ಕಂಡಿದ್ದೇವೆ. ಜಾಗತೀಕರಣವು ೨೦ನೇ ಶತಮಾನದ ಕನ್ನಡಿಗನನ್ನು ಕೆಳಕ್ಕೆ ತಳ್ಳಿದೆ. ೨೧ನೇ ಶತಮಾನದ ಕನ್ನಡಿಗನ ಲಕ್ಷಣವನ್ನು ಇನ್ನೂ ಹೇಳಬೇಕಿದೆ. ಕರ್ನಾಟಕವು ಕರ್ನಾಟಕ ಮಾದರಿಯನ್ನು ಕೂಡಲೇ ತ್ಯಜಿಸಿ ಬೇರೊಂದು ಹೆಚ್ಚು ಪ್ರಗತಿದಾಯಕ ಸಫಲತೆಯಲ್ಲಿ ಪ್ರಮಾಣಿತವಾಗಿರುವ ಮಾದರಿಯನ್ನು ಅಳವಡಿಸಿ ಕೊಳ್ಳಬೇಕಾಗಿದೆ.

ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳು ಶೀಘ್ರ ಔದ್ಯೋಗಿಕ ಅಭಿವೃದ್ಧಿಗೆ, ಕೃಷಿ ಅಭಿವೃದ್ದಿಗೆ, ಉದ್ಯಮಾಭಿವೃದ್ಧಿಗೆ, ಕಟ್ಟಡ ನಿರ್ಮಾಣದ ಉದ್ಯಮಾಭಿವೃದ್ದಿಗೆ, ಮೂಲಭೂತ ಸೌಕರ್ಯದ ಅಭಿವೃದ್ಧಿಗೆ, ಗ್ರಾಮೀಣ ಅಭಿವೃದ್ದಿಗೆ, ಶೀಘ್ರ ಶಕ್ತಿ ಸ್ಥಾವರಗಳ ಸೇರ್ಪಡೆಗೆ, ಎಲ್ಲರಿಗೂ ಆಧುನಿಕ ಆರೋಗ್ಯ ಸೇವಾಸೌಕರ್ಯಗಳಿಗೆ ಮತ್ತು ಶಿಕ್ಷಣ ಸೌಲಭ್ಯಗಳಿಗೆ ಪ್ರಸಿದ್ಧವಾಗಿವೆ. ವಾಣಿಜ್ಯೋದ್ಯಮ ಮತ್ತು ಚಟುವಟಿಕೆ ಗಳಿಗೆ ಭಾರತದ ೧ನೇ ರಾಜ್ಯ ಗುಜರಾತ್. ಕರ್ನಾಟಕವು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಭಾರತದಲ್ಲಿ ೨೭ನೇ ಸ್ಥಾನದಲ್ಲಿದೆ. ವಾಣಿಜ್ಯೋದ್ಯಮದಲ್ಲಿ ಮತ್ತು ವ್ಯಾಪಾರಿ ಸಾಮರ್ಥ್ಯದಲ್ಲಿ ರಾಜ್ಯ ಸರ್ಕಾರವು ಪ್ರೋತ್ಸಾಹ ಕೊಟ್ಟರೆ (ಕನ್ನಡಿಗರಿಗೆ) ಕರ್ನಾಟಕವು ವ್ಯಾಪಾರಿ ಚಟುವಟಿಕೆಯಲ್ಲೂ, ಉದ್ಯಮದಲ್ಲೂ ಭಾರತದಲ್ಲಿ ೯ನೇ ಸ್ಥಾನವನ್ನೂ ಗಳಿಸಬಲ್ಲದು.

೨೦ನೇ ಶತಮಾನದ ಪೂರ್ವಾರ್ಧದಲ್ಲಿ ಕನ್ನಡಿಗರಿಗೆ ಒಬ್ಬ ಮಹಾನ್ ಕನ್ನಡಿಗನ ಕರೆಯೇನಿತ್ತೆಂದರೆ -ಔದ್ಯೋಗೀಕರಣಗೊಳಿಸು, ಇಲ್ಲದಿದ್ದರೆ ಅಳಿಸಿಹೋಗು. ಈ ಕನ್ನಡಿಗರಿಗೆ ನನ್ನ ಕರೆ ಏನೆಂದರೆ, ‘ವ್ಯಾಪಾರೋದ್ಯೋಗ ಮಾಡಿ ಸೌಮ್ಯ ಸಂಪತ್ತನ್ನು ಗಳಿಸಿ ಕನ್ನಡಿಗರಿಗೆ ಹೆಸರು, ಕೀರ್ತಿಯನ್ನು ತಂದುಕೊಡಿ’ ಎಂದು.

(ಕನ್ನಡ ಮಾತೃಭಾಷೆಯಾಗಿದ್ದು ಕನ್ನಡ ಮಾತನಾಡುವ) ಕನ್ನಡಿಗರ ಉದ್ಯಮ ಶೀಲತೆಯ ಮೂಲ ಪ್ರೇರಣೆಗಾಗಿ, ವಾಣಿಜ್ಯ ಪ್ರೋತ್ಸಾಹಕ್ಕಾಗಿ ಕರ್ನಾಟಕ ಸರ್ಕಾರವು ಈ ಕೂಡಲೇ ಪ್ರತ್ಯೇಕ ಬಜೇಟನ್ನೇ ಆಲೋಚಿಸಬೇಕು.

ಈ ಕರೆಯು ಒಬ್ಬ ಸಾಧಾರಣ ಕನ್ನಡಿಗನಿಂದಿರಬಹುದು. ಆದರೆ ಅದನ್ನು ಕರ್ತವ್ಯದ ಕಹಳೆಯೆಂದು ಭಾವಿಸಿ ಕಾರ್ಯಪ್ರವೃತ್ತರಾಗಿರಿ — ಕೂಡಲೇ. ಯಾರಿಗೆ ಗೊತ್ತು! ಕಳೆದುಹೋದ ವಾಣಿಜ್ಯ ಸಾಮ್ರಾಜ್ಯವನ್ನು ನೀವು ಪಡೆಯಬಹುದು. ಉದ್ಯಮ ಕ್ಷೇತ್ರದಲ್ಲಿ ಈ ಕನ್ನಡಿಗರ ಅಸ್ತಿತ್ವವನ್ನು ಕಾಣಿಸಬೇಕಾಗಿದೆ. ಕ್ಷೇತ್ರವನ್ನು ಪ್ರವೇಶಿಸಿರುವುದು ತುಂಬ ತಡವಾಗಿರಬಹುದು. ಈಗಲೇ ನೀವು ಇದನ್ನು ಮಾಡದಿದ್ದರೆ ೨೧ನೇ ಶತಮಾನವನ್ನು ಸಂಪೂರ್ಣವಾಗಿ ಕಳೆದುಕೊಳಳುತ್ತಿದ್ದೀರಿ.

೨೧ನೇ ಶತಮಾನವು ನಷ್ಟವಾದರೆ ಕನ್ನಡಿಗರಿಗೆ ಈ ಸಹಸ್ರಮಾನವೆ (೧.೧.೨೦೦೧ ರಿಂದ ೩೧.೧೨.೩೦೦೦ವರೆಗೆ) ಎಂದೆಂದಿಗೂ ನಷ್ಟವಾದಂತೆ.


Previous post ಇಂದಿನ ಸಂಕ್ರಾಂತಿ
Next post ಮನಸ್ಸು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys