ಅಯ್ಯ, ಕಿಚ್ಚಿನೊಳಗೆಬೆಂದ ಕಾಯಕ್ಕೆ ಅಚ್ಚುಗ ಉಂಟೆ? ತಾನುತಾನಾದ ಬಳಿಕ ಮೂವ ಹಂಗುಂಟೆ? ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೇ? ತನುವ ಮರೆದಂಗೆ, ಇನ್ನಿದಿರೆಂಬುದುಂಟೆ? ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ? ಇವೆಲ್ಲವನು ಹಿಂಗಿಸಿ, ಈ ಮಹದಲ್ಲಿ ಬೆರ...
ಅಮ್ಮಾ! ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ, ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ, ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ ಕುಸುರಿಗೆಲಸಗಳ ನೋಡಿ ಮರುಳಾಗಿ ಬಾಯ್ತೆರೆದು ಅಲ್ಲೇ...
ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ...
ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ...
ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್ ಈ ಸೂರ್ಯ. *****...
ಅಯ್ಯ, ನಾ ಮರ್ತ್ಯದಲ್ಲಿ ಹುಟ್ಟಿ, ಕಷ್ಟ ಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿದೆ. ಕರ್ಮಕ್ಕೆ ಗಿರಿಯಾಗುತಿದ್ದರೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗಕಟ್ಟಿದನು. ತಂದೆ ಎಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರ...





