ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ ಹಸೆ ಏಕೆ? ಬೇಯುತ್ತಿದೆ ಎದೆ ಒಂದೇ ಸಮನೆ ಸುರಿದಿದೆ ಕಂಬನಿ...

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು ಮನಸಿನ ಮೂಸೆಯ ಭಾವದ ಕುದಿಗಳು ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ|| ಅಂತರಂಗದಲಿ ರಿಂಗಣಗುಣಿಯುತ ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು ಒಳ ತಲ್ಲಣಗಳ ಪಲ್ಲವಿ ನರಳುತ ಹೂವು ಅರಳಬೇಕು ಸುಗಂ...

ಬರುವುದ ಕಂಡೆ ಗಿರಿಧಾರಿ ನನ್ನ ಮನೆಯ ಮುಂದೆ ಹಿಗ್ಗಿ ಅಡಗಿದೆನು ಲಜ್ಜೆಯಲಿ ಮನೆಬಾಗಿಲ ಹಿಂದೆ. ಹಳದಿಯ ರೇಸಿಮೆ ವಸ್ತ್ರದಲಿ ಹೊಳೆವ ದಿವ್ಯ ದೇಹ ಬಾನಿನ ಬಣ್ಣದ ಮುಖದಲ್ಲಿ ಕಣ್ಣು ಜೋಡಿ ಸೂರ್ಯ. ಕೇಸರಿ ಬಣ್ಣದ ಸೀರೆಯಲಿ ಮಿಂಚುತಿರುವ ರಾಧೆ ಕಾದೇ ಇರು...

ಅಕ್ಕ ತಂಗಿಯರೇ! ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ ಎರವಲು ಬೆಳಕಿನಿಂದ ಮೆರೆವ ಗ್ರಹ ಉಪಗ್ರಹಗಳನ್ನೋ ಉಲ್ಕೆಗಳನ್ನೋ ಕೊಡಬೇಡಿ ಒಂದರೊಳಗೊಂದು ಸಿಕ್ಕಾ ಸಿಕ್ಕಾ...

ಪ್ರೀತಿಯ ದೀಪವ ಎದೆಯಲಿ ಬೆಳಗಿ ಮರೆಗೆ ಸರಿದೆಯೇನು? ಅರಿಯದ ಹೆಣ್ಣ ಉರಿಸುವೆಯಲ್ಲ ಎಂಥ ಕಟುಕ ನೀನು! ನೀನಿಲ್ಲದೆ ನಾ ಹೇಗಿರಲಿ – ಶಶಿ ಹರಸದ ನಭದಂತೆ, ಮಿಡುಕುತ್ತಿರುವ ನೀರಿನಲಿ ಉಸಿರು ಕಟ್ಟಿದಂತೆ. ದಾರಿದಾರಿಯ ಅಲೆಯುವೆ ನಿನ್ನ ಹೆಸರನೆ ಕೂ...

ಜನರ ಲೌಕಿಕಾಶಯಗಳ ತುಳಿದ ಕಲ್ಲು ಕಲ್ಲುಗಳ ತಳಪಾಯ ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು ಶೋಷಣೆಯ ವೈಭವೀಕರಣದ ನವರಂಗಗಳು ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ ಮತಾಧಿಕ್ಯತೆಯ ಬೆರಗಿನ ಗೋಪುರ ಅಜ್ಞಾನಕ್ಕಿಟ್ಟ ಕಳಸುಗಳು ಮೆರೆದಿವೆ ಭವ್ಯ ಭಾರತದ ...

ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ ಹೇಳಲಾರೆನೇ ಕಂಪಿಸಿದೆ ಜೀವ ನಾ ತಾಳಲಾರೆನೇ ನೀನೆ ಬಲ್ಲೆಯೇ ನನ್ನ ಎಲ್ಲ ಮ...

ಬದುಕಿನ ಹೆಚ್ಚ ಹೆಚ್ಚಗಳ ಗೆಜ್ಜೆವುಲಿವಾಗಿ ಗಿಡಮರ ಪ್ರಾಣಿ ಪಕ್ಷಗಳ ಒಡನಾಟದ ಹಸಿವು ಹಂಬಲ ಬೇಟೆ ಬೇಟ ಹಿಗ್ಗು ಕೂಗುಗಳ ತೊದಲು ನುಡಿಯುತ್ತಾ ಗವಿ ಗುಡಿಸಲು ಹಳ್ಳಿ ಊರು ಪಟ್ಟಣಗಳಲ್ಲಿ ಬಯಲಾಟವಾಡುತ್ತಾ ಪಶುವನ್ನು ದುಡಿಮೆಗೆ ಹೂಡಿ ನೆಲವ ಹಸನು ಹಸಿ...

ಶ್ರೀ ಕೃಷ್ಣನ ಚರಣಕಮಲ ಭಜಿಸು ಮನವೆ ನೀ ಅವಿನಾಶೀ ಶ್ಯಾಮನ ಪದ- ಕಮಲ ಭಜಿಸು ನೀ ಲೋಕ ಒಂದು ನೀರ ಗುಳ್ಳೆ, ಕಂಡರೇನು, ಕಡೆಗೆ ಸುಳ್ಳೇ! ಬುವಿ ಬಾನಿನ ಮಧ್ಯೆ ಮಾಯೆ ಮೆರೆವ ಮಿಥ್ಯಕಿಲ್ಲ ಎಲ್ಲೆ, ಮನೆಯ ಬಿಟ್ಟ ಮಾತ್ರಕೇನು, ಕಾವಿಯುಟ್ಟ ಶಾಸ್ತ್ರಕೇನು? ...

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ|| ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....