ಬದುಕಿನ ಹೆಚ್ಚ ಹೆಚ್ಚಗಳ ಗೆಜ್ಜೆವುಲಿವಾಗಿ
ಗಿಡಮರ ಪ್ರಾಣಿ ಪಕ್ಷಗಳ ಒಡನಾಟದ
ಹಸಿವು ಹಂಬಲ ಬೇಟೆ ಬೇಟ ಹಿಗ್ಗು ಕೂಗುಗಳ
ತೊದಲು ನುಡಿಯುತ್ತಾ
ಗವಿ ಗುಡಿಸಲು ಹಳ್ಳಿ ಊರು ಪಟ್ಟಣಗಳಲ್ಲಿ
ಬಯಲಾಟವಾಡುತ್ತಾ
ಪಶುವನ್ನು ದುಡಿಮೆಗೆ ಹೂಡಿ
ನೆಲವ ಹಸನು ಹಸಿರು ನಂದನ ಮಾಡುತ್ತ
ಇಷ್ಟಿಷ್ಟೆ ಕಾಳು ರಾಶಿಯಾಗಿ
ಸಮಷ್ಠಿಯ ಆಸ್ತಿಯಾಗಿ
ಯುಗ ಯುಗಗಳಿಂದ ಕೂಡಿ ಬೆಳೆದು ಬಂದ ಮಾತನ್ನು
ನನ್ನೊಬ್ಬನ ಆಶೆಪಾಶಗಳ ಬಲೆಯಲ್ಲಿ
ಬಂಧಿಸಲೇ! ಬಚ್ಚಿಟ್ಟುಕೊಳ್ಳಲೇ!
ಆಶೆಬುರುಕ ಧನದಾಸರಂತೆ
*****