
ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ ಅನ್ನ...
ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು? ಮಾಯೆಯನ್ನು ಹರಡುತಿದ್ದ ಮುರಳಿಯನ್ನು ತ್ಯಜಿಸಿ ಮೈಗೆ ಒರಗಿ ನಿಲ್ಲುತಿದ್ದ ಸುರಭಿ ಹಿಂಡ ಸರಿಸಿ ನಂದಗೋಪಿ ಬಂಧು ಬಳಗ ಎಲ್ಲರ ಹುಸಿ ಮಾಡಿ ಹೋದನಲ್ಲ ಕೊನೆಗೂ ಮಧುರೆಯ ...
ದುಡಿಮೆಯೆ ದೇವರು ದುಡೀ ದುಡೀ ಅಕ್ಷರ ಬ್ರಹ್ಮನ ಪಡೀ ಪಡೀ ||ಪ|| ಭೂಮಿ ತಾಯಿಯು ದುಡಿತಾಳೆ ಸೂರ್ಯ ಚಂದ್ರರು ದುಡಿತಾವೆ ಗಾಳಿ ಬೀಸುತಾ ನೀರು ಹರಿಯುತಾ ಬೆಂಕಿ ಉರಿಯುತಾ ದುಡಿತಾವೆ ||೧|| ದುಡಿಮೆಯಿಂದಲೇ ಕೋಟೆ ಕೊತ್ತಲ ವೈಭವ ರಾಜ್ಯವು ಮೆರೆದಾವೆ ಗ...
ನನ್ನ ಶ್ಯಾಮನ ಮಂದಹಾಸ ಮಿಂಚುವ ಮುಖ ಕಾಡುವುದೆ ಸಖಿ ನನ್ನ ಇರುಳಿನಲ್ಲಿ, ಕುಡಿನೋಟ ಚಿಮ್ಮುವಾ ಬಾಣಗಳು ಎದೆ ತಾಗಿ ಹೊರಳುವೆನು ನಾ ಮಧುರ ನೋವಿನಲ್ಲಿ. ಕರಯುವಳು ನನ್ನ ಸಖಿ “ಬಾರೆ ಮಿರಾ ಬಾರೆ ಕಟ್ಟಲೇನೇ ಕೈಗೆ ತಾಯಿತವನು? ಬೇರು ಮೂಲಿಕೆ ತಂದ...
ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ ಬೊಡ್ಡೆಗೆ ಕ...
ಕೃಷ್ಣ ಬಂದನೆ ಸಖೀ ನೋಡು ಹೊರಗೆ ಶುಭ ಶಕುನವಾಗುತಿದೆ ಎಲ್ಲ ಕಡೆಗೆ! ಶ್ರಾವಣದ ಮೋಡ ಸುರಿಯುತ್ತಿವೆ ಕಾದಿರುವ ಭೂಮಿಗೆ ನೀರಧಾರೆ, ಬಾನು ಗುಡುಗಿನ ತಬಲ ನುಡಿಸುತ್ತಿದೆ ನಡುನಡುವೆ ಹೊಂಚುತಿದೆ ಮಿಂಚು ಬೇರೆ, ಕೋಗಿಲೆ ಮಯೂರ ಕೇಕೆ ಹಾಕಿ ಆಗಸದ ಪ್ರೀತಿಗ...
ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ. ನಿಜವೆ, ನಾನು ಹುಚ್ಚಿಯೇ ಜನದ ಕಣ್ಣಿಗೆ! ಲಜ್ಜೆ ಏಕೆ ಕೃಷ್ಣ ಮೆಚ್ಚಿ ಕರೆದ ಹೆಣ್ಣಿಗ...
ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ|| ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು ನವೋದಯದ ಸರ್ವೋದಯ ...
ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ ಹಸೆ ಏಕೆ? ಬೇಯುತ್ತಿದೆ ಎದೆ ಒಂದೇ ಸಮನೆ ಸುರಿದಿದೆ ಕಂಬನಿ...













