ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ? ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ, ನ...

ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ ಜೊತೆಗೂಡಿ ನೀ ಹಾಡಲು ವಸಂತನು ನಿನ್ನ ಜೊ...

ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? ಅಷ್ಟೇ ಅಲ್ಲದೆ, ಕೋಪ ಬಿಡುವುದು ಅನಿವಾರ್‍ಯವೂ ಆಗಿತ್ತು! ...

ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ ಮನಿಮನಿಯ ಬಾಗಿಲಕ ದೀಪ ತಾರ ನಗಿಮಾರಿ ಗರತೇರು ನಗುವಿನಾರತಿ ತಂದ್ರು ಮ...

ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ ಕಾಲನ ಕೈಗೆ ಸಿಕ್...

ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ – ವಿಜ್ಞಾನೇಶ್ವರಾ *****...

ಹಚ್ಚಿಟ್ಟ ಹಣತೆ ಆರಿ ಹೋಗುವುದು ಗಾಳಿಯ ಸೋಂಕಿಗೆ ಉಸಿರಿನ ಉಫ್‌ಗೆ ನೀರೆಯರ ಸೀರೆಯಂಚಿನ ಸ್ಪರ್ಶಕೆ ದಾರಿದೀಪವಾಗುವ ಹಮ್ಮನು ಬಿಟ್ಟು ಬಯಲಾದಾಗ ನಾನು ಉರಿದು ಬೂದಿಯಾಗುತ್ತೇನೆ ‘ಹಚ್ಚೇವು ಕನ್ನಡದ ದೀಪ’ ಎಂಬ ಹಾಡನ್ನು ಕೇಳುತ್ತ ಕ್ಷಣದಷ್ಟು ತಮದ ಅಲೆ...

ನಲುಗುವ ಹೂವು ನಾನಲ್ಲ ಅರಳುವ ಹೂವು ನಾನಲ್ಲ ಮುಡಿಯುವ ಹೂವು ನಾನಲ್ಲ ಅಂತರಂಗ ವಿಹಂಗಮದಲಿ ನಲಿದ ಹೂ || ದೇವರಿಗೆ ಮುಡಿಪಾದುದಲ್ಲ ಜೀವನ ಆಧಾರವಾದುದಲ್ಲ ಮನೆತನ ಮಾನವೀಯತೆ ಹೊಂದುದಲ್ಲ ಆಕಾರಾಧಿಗಳ ಸಂಯಮದೆ ವಿಹರಿಸುವ ಹೂ || ಬಣ್ಣದ ಓಕುಳಿ ಮಾರ್ಮಿಕ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...