ಮಾವಿನ ಮರದಡಿನಿಂತ ಸುಂದರಿ
ಮಂದಹಾಸ ಬೀರಿದ ಮದನಾರಿ
ಹೂ ಬಳ್ಳಿಯಂತೆ ಮರವ ನೀ ಆಸರಿಸಿ
ಅರಳಿ ನಲಿವ ಚಲುವೆ ನೀ ಸಿಂಗಾರಿ
ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು
ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು
ಕೋಗಿಲೆಯ ಜೊತೆಗೂಡಿ ನೀ ಹಾಡಲು
ವಸಂತನು ನಿನ್ನ ಜೊತೆಗೆ ಸದಾ ಇರುತಿರಲು
ನಲ್ಲನ ಕಾಣುವ ಕಾತುರವು ಹೆಚ್ಚಾಗಿ
ಅರಳಿದೆ ನಿನ್ನಯ ತನುವು ಮೃದುವಾಗಿ
ಒಳಗೆ ತುಂಬಿದೆ ಒಲವು ಬಲವಾಗಿ
ಚಲುವ ಕಾಯುತ್ತಿರುವ ನಿನಗಾಗಿ
ನಲ್ಲನ ಸೇರಲು ಮೆಲ್ಲನೆ ನೀ ಬರಲು
ಮಲ್ಲಿಗೆಯ ಹಾಸಿ ಚಲುವ ಬರಸೆಳೆಯಲು
ಹುಳಿ ಮಾವು ಕೂಡ ಸಿಹಿಯಾಯ್ತು
ಜೋಡಿ ಜೀವಿಗಳು ಬೆರೆತು ಒಂದಾದ ಹೊತ್ತು
*****