ಮೊನ್ನೆ ಕಾಶಿಗೆ ಹೋಗಿದ್ದೆ
ಗಂಗೆಯಲ್ಲೊಂದು ಮುಳುಗು ಹಾಕಿ
ಕೋಪ ಬಿಟ್ಟು ಬಂದೆ!
ಬಡವನ ದವಡೆಗೆ ಮೂಲವಾದ
ಈ ಪ್ರಳಯಾಂತಕ ಕೋಪವನ್ನ
ಇಟ್ಟುಕೊಳ್ಳುವುದಕ್ಕಿಂತ
ಬಿಟ್ಟು ಬಿಡುವುದೇ ಮೇಲಲ್ಲವೇ ?
ಅಷ್ಟೇ ಅಲ್ಲದೆ, ಕೋಪ ಬಿಡುವುದು
ಅನಿವಾರ್‍ಯವೂ ಆಗಿತ್ತು!
ಮನೆಯಲ್ಲಾಗಲಿ, ಆಫೀಸಲ್ಲಾಗಲಿ
ಎಳ್ಳಷ್ಟೂ ಬೆಲೆಯಿಲ್ಲದ ಕೋಪ
ನನ್ನನ್ನೂ ತೊರೆಯಲಿ
ಯಾರಾದರೂ ದೊಡ್ಡ
ಅಧಿಕಾರಿಯನ್ನು ಆಶ್ರಯಿಸಲಿ
ಒಳ್ಳೆಯ ಬೆಲೆ ಪಡೆಯಲಿ.
*****
೨೫-೦೫-೧೯೯೩