ಮನುಜ ಬಾಳಿನಾಳ ಅರಿಬೇಕು ಹೆಜ್ಜೆ ಹೆಜ್ಜೆಗೂ ಬದುಕು ಉರುಳುತ್ತಿದೆ ನಾಳಿನ ಕನ್ಸುಗಳ ಹೊತ್ತು ಕ್ಷಣ ಕ್ಷಣಕ್ಕೂ ಬಾಳು ನವಿಯುತ್ತಿದೆ ನಿನ್ನ ಮೂಲ ಎಲ್ಲಯದು ಅರಿಯದೇ ಬರಿದೆ ದೊಂಬರಾಟ ನಿತ್ಯವೂ ಇಂದ್ರಿಯ ಸೌಖ್ಯ ಮೋಜೆಂದು ಮರೆತು ಬಿಟ್ಟಿಯಾ ನಿ ಸತ್ಯವು...

ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು; ಆಯುವೆಂಬಾ ಪಕ್ಕಿ ಪಾರ್‍ವ ದೂರವು ಕಿರಿದು; ಪಾರುತಿಹುದದು ನೋಡು; ಬಾ, ಮನಸುಮಾಡು. *****...

ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ ನಿನ್ನಿರವ ಮರ್‍ಮವನು ಎಂತರಿವೆ ಹರಿಯೇ? ನಿನ...

ಹಿಂಬಳಿ ಮುಂಬಳಿ ಗಂಧದ ಗೀರಾ ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ ಜಾತ ಮಲ್ಲಿಗಿ ಜಾಳಿಗಿ ದಂಡಿ ವಾನ್ಯಾಡು ತುರುಬ ಒನಪಿಲಿ ಕಟ್ಟಿ ಖನ್ನಿ ಕೋಮಽಲಿ ಹಸೀಗೇಳಽ ಸೋ ||೧|| ನೀರೆಯ ಬಾವುಲಿ ಲಿಗಿಲಿಗಿನಾಡುತ ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ ಹೊನ್ನಾ-ಭರ...

ಮರಿತನದ ಮರವೆಯಿಂ ಮರಸಿ ತಂದಪೆಯಾ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸೆದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪ ಸಾಕು, ನಿನ್ನುಪಚಾರಗಳನೊಲ್ಲೆನದನು ಇನಿತು ಬೇಗನೆ ಮರೆತೆಯಾ? ನಾನುಮಾಕೆ ಈರ್‍ವರಾವಿದ್ದೆ ವಿಲ್ಲಿಯ...

ಹರಿದಿದೆ ನೋಡಿ ಕನ್ನಡ ರಥವು ಪಶ್ಚಿಮದಾ ಕಡೆಗೆ ಕಾಣದಾಗಿವೆ ನಮ್ಮ ದಿಕ್ಕುಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು ಅಮರ! ಹೃದಯವು ಕನ್ನಡ ಮನಸು ಸಂಸ್ಕೃತ ನಾವು ಕಲ...

ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು, ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ. ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು ಮನದಲ್ಲಿ. ಪ್...

ಸುಡು ನಿನ್ನ ಸಿಂಗರವ, ನಿನ್ನ ಸೊಗವ. ಬಿಡು ನಿನ್ನ ಬೆಡಗ ಹಾ- ಳಾಗಿಸಿತು ಜಗವ! ಆಳಾಗಿಸಿತು ನೂರು ದೇಹಗಳನು, ತೊಳಲಾಡಿಸಿತ್ತೆನಿತೊ ಗೇಹಗಳನು! ನಿನ್ನ ಮಖಮಲು ಮುಖವ ಬಣ್ಣಿಸಿದ ವೆಂಪು,- ಕಳೆಯಲದು ನಿಲ್ಲುವವು ನೂರು ಸಂಪು! ಓ ಸುವಾಸಿನಿ! ನೀನು ತೈಲಿ...

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ) ೧ ಇಂದಿನುದಯ ರವಿ ತಂದಿಹನೈ, ತ- ನ್ನೊಂದಿಗೆ ನವಯುಗವ, ಇಂದಿನ ಮಧುರಸಮೀರ ಹರಡುತಿಹ ಸ್ವಾತಂತ್ರ್ಯದ ಸೊಗವ! ಇಂದಿನ ಉಸಿರಾಟಕೆ ತಡೆಯಿಲ್ಲವು ಕಳಚಿ ಕೊರಳ ನೊಗವ- ಹೊಂದಿಹವೈ ಮನ-ಮನವು ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...