ಸ್ಥವಿರ ಗಿರಿಯ ಚಲನದಾಸೆ, ಮೂಕ ವನದ ಗೀತದಾಸೆ, ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ. ಬಾಳ್ವೆಗೆಲ್ಲ ನಾನೆ ನಚ್ಚು, ಲೋಕಕೆಲ್ಲ ಅಚ್ಚುಮೆಚ್ಚು, ನಾನೆ ನಾನೆ ವಿಧಿಯ ಹುಚ್ಚು, ಹೊನಲ ರಾಣಿ ನಾ. ಕಿರಣ ನೆಯ್ದ ಸರಿಗೆಯುಡಿಗೆ, ಇರುಳು ಕೊಟ್ಟ ತಾ...

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ| ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ| ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ| ಇಸಮಾಡಿ ಒಂದ ತುತ್ತ ತಿಂದೇನ ತಾಯಿ| ಬಂಕಿ ಕಾಡತಾವ ತಾಯಿ ಪರಿಪರಿಯಿಂದ ಬಂಕಿ ಕಾಡತಾವ ||೧|| ಆಕಳ ಹಾಲಾಗ ದುಮ್ಮಸ ಮಾಡ| ಪರಡಿ ಸವತೀಬೀ...

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ! ಇಂದೆನ್ನನೀಚಿಸುವ ವೀಚಿಯೂ ವಿಭವಂ ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪ ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ- ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ? ನನ್ನೆದೆಯಮಾಸೆಗಿ...

ದೂರದೊಂದು ತೀರದಿಂದ ಹಾಡು ಕೇಳಿಬಂದಿತು; ಅದೆ ಕನ್ನಡವಾಯಿತು ನಿಂತ ನೆಲವು ಪುಲಕಗೊಂಡು ಮರುಧ್ವನಿಯ ನೀಡಿತು; ಕರ್ನಾಟಕವೆನಿಸಿತು ಬ್ರಹ್ಮನೂರ ಶಿಲ್ಪಿಗಳನು ಕೈ ಬೀಸಿ ಕರೆಯಿತು; ಬೇಲೂರ ಕಟ್ಟಿತು ಶಿವನೂರಿನ ಬೆಟ್ಟಗಳನು ತನ್ನೆಡೆಗೆ ಸೆಳೆಯಿತು; ಸಹ್ಯ...

ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ! ಪ್ರೀತಿಸಿದ್ದವ ಹಾಗೆ ನಾನು, ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು ಮರೆಯಾಗಿಯೇ ಹೋದೆ ನಾನು. ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ ತಿಳಿಯಲಾಗಲೇ ಇಲ್ಲ ನಮಗೆ ಯಾವುದವಳ ವಿಚಾರ, ಯಾವುದು ನನ್ನದು ಎಂದು ಹಾಗಿತ...

ಜಯ ಜಯ ಜಯಂತಿ ನಿನಗಿರಲಿ ಓ ! ದಮಯಂತಿ | ಎಲ್ಲರಿಗೆ ತಿಳಿದಿರಲಿ ! ಮೂಲೋಕ ಗಮನಿಸಲಿ,- ‘ಮಾನವನ ನಲುಮೆಗೀ ಭೂತಲದಿ ಸಮನಿಸಲಿ ನಾಕದೈಸಿರಿ’ ಎಂಬ ಹಿರಿನುಡಿಯು. ಕುವದಂತಿ ಹಿಂಗಲಿ ನಳರಾಯ ಹಾಕಿಟ್ಟ ಹಿರಿಪಂಙ್ತಿ ಅಮರ ದೀವಿಗೆಯಾಗಿ ಬೆಳಗಲಿ! ರಮಿಸಲಿ ಪ್...

೧ ಇದ್ದರೂ ಸತ್ತಂತ ಇರುವವರೆ ಬಹುಜನರು, ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು, ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು- ಮಾಡಿಕೊಂಡವರು ಹಲರು! ಇದ್ದಾಗ ನಿನ್ನಂತೆ ಇದ್ದವರು ಯಾರಿಹರು? ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ ಸಿದ್ದಿ ತುಂಬಿದರಾರು...

ಊರಾಚೆ ಪಡಕಾನೆ ಇಟ್ಟೌನೆ ಮುನಿಯ- ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ. ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ- ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ- ಊರಾಚೆ ಪಡಕಾನೆ ಯೆಜಮಾನ ಮುನಿಯ- ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...