ಬಲೆ ಜಿಪ್ಣ ಮುನಿಯ

ಊರಾಚೆ ಪಡಕಾನೆ ಇಟ್ಟೌನೆ ಮುನಿಯ-
ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ.
ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ-
ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ-
ಊರಾಚೆ ಪಡಕಾನೆ ಯೆಜಮಾನ ಮುನಿಯ-
ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ! ೧

ಮನೇ ತಾಕ್ ಯಾರ್ ಬರ್‍ಲಿ ಕೂಗ್ತಾನ್ ಔನ್ ಕಿರ್‍ಲಿ-
ಬಂದೋರ್‍ಗೆ ಕೇಳೋಹಂಗ್ ಕೂಗ್ತಾನ್ ಆ ಮುನಿಯ
ಮನೆಯೋರ್‍ನ ಬೊಯ್ಯೋ ಹಂಗ್ ಕೂಗ್ತಾನ್ ಆ ಮುನಿಯ:
‘ಬೋರಯ್ಯ ತಂದ್ ಕೊಟ್ಟ ತಕೊಂಡೋದ್ ನೂರ?
ಮನೇಗ್ ಬೇರ್ ಆಕ್ಬೇಕಿನ್ ಮಂಗ್ಳೂರೆಂಚ್ ಸೂರ!
ತಕ್ಕೊಂಡೋದ್ ಮಕ್ಳಿನ್ನಾ ಬಡ್ಡಿ ಕೊಡ್ದಿರ್‍ಲಿ-
ಉಪ್ಗೂನೆ ವುಳಿಗೂನೆ ಕಾಸ್ ಎಲ್ಲಿಂದ್ ತರ್‍ಲಿ?
ಪರಪಂಚ ಕೆಟ್ಟೋಯ್ತು -ಬಲ್ ಪೂರ ಓಯ್ತು-
ಇಂಗಿದ್ರೆ ನಾವೆಲ್ಲ ಬಾಳ್ ಬದಕಿದಂಗಾಯ್ತು!
ತಕ್ಕೊಂಡೋರ್ ತಕ್ಕೊಂಡಂಗ್ ತಿನ್ಕಂಡ್ ಓಗ್ತಿರ್‍ಲಿ-
ಗಂಟ್ಟೆಲ್ಲ ಕಟ್ಟೋಯ್ತು ಇವ್ರತ್ರ ವೊರ್‍ಲಿ!
ಕಟ್ಬೇಕ್ ಇನ್ ಮಂಡೀಗೆ ಸಾವರದೆಂಟ್ ನೂರು!
ಮತ್ಬೇರೆ ಬ್ಯಾಂಕ್ಗಿನ್ನು ಎರಡ್ಸಾವರದ್ ನೂರು!

ಎಲ್ಲಿಂದ ತರಬೇಕೋ ದೇವರ್‍ಗೇ ಬೆಳಕು!
ಮಿಕ್ಕೋರೀಗ್ ಏನ್ ಗೊತ್ತು ಈ ಚೋಳಿನ್ ಚಳಕು!
ಕೇಳ್ದೋರಿಗ್ ಕೊಟ್ತಂದ್ರೆ ಅಸಲೇನೆ ಸ್ವಾಆ!
ಇನ್ನಾರನ್ ಕೇಳ್ಬೇಕೊ ಬಡ್ಡಿ? ಹ್ಹ್! ಹ್ಹ್! ಹ್ಹ್!
ತಕ್ಕೊಂಡೋರ್ ತೆರದಿರ್‍ಲಿ ಬೇಗ್ಬೇಗ ತಂದು
ಸತ್ತಾರ ವೋಯ್ತೀನಿ ವಿಸಗಿಸ ತಿಂದು! ೨

ಯೆಂಡದಂಗಡಿ ಮುನ್ಯಣ್ಣ! ಪಡಕಾನೆ ಮುನ್ಯ!
ಏನ್ ಏಳ್ಲಿ ನೀ ಕೊಡ್ಸೋ ಬಲ್ಬಲೆ ಪುನ್ಯ!
ಬೇಡಿದೋರ್‍ಗೆ ನೀಡ್ದಿದ್ರೆ ಪಾಪಾಂತ್ ಅಂದ್ರೆ
ಬೇಡೋಕ್ಕೂ ಮುಂಚೇನೆ ಬಾಕ್ಲ್ ಇಕ್ತ ಬಂದ್ರೆ
ಏನ್ ಏಳ್ಲಿ ಮುನ್ಯಣ್ಣ ನೀ ಕೊಡ್ಸೊ ಪುನ್ಯ!
ಜಿಪುಣಾಂದ್ರೆ ನಿನ್ ಬಿಟ್ರೆ ಬೇರಿಲ್ಲ ಮುನ್ಯ! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ ಪ್ರಭು
Next post ಗೆಳೆಯ ವ್ಯಾಸ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…