೧ ನೆನೆಯಲಾಗಿ ನಿಮಿ- ಷಾರ್ಧದಲ್ಲಿ ಅನಿ- ಮಿಷರ ಮೀರಿ ನೆಗೆ- ಯುತ್ತ ಬಂದು ಈ ಜೀವನಕ್ಕೆ ಜೀ- ವನವನೆರೆದು ಸಂ- ತೈಸುವಂಥ ಏ- ಕಾಂತದೇಕ ಮಾ- ತ್ರಾಧಿಕಾರಿ ಪ್ರೇ- ಮಾವತಾರಿ ಮಮ ಪ್ರಾಣದಾನಿ ಸಂ- ಜೀವ ವರದ ಶ್ರೀ ರಾಮಚಂದ್ರನಿಗೆ ಓಂ ನಮೋ ನಮೋ! ೨ ತವಕದಿ...
ಮಿನಿಮಿನಿ ಉರಿಯುವ ದೀಪವು ಇರುವದು ಬೆಕ್ಕಿನ ಕಣ್ಣಿನ ಗುಡ್ಡದೊಳು ಅಂತೆಯೆ ಅಲೆದಾಡುವದದು ಸುಲಭದಿ ಮನಬಂದಂತೇ ಕಾರಿರುಳು ಸಿಟ್ಟಿಗೆಯೆದ್ದಾಗಪ್ಪನ ಕಣ್ಣು ಕಿಡಿಕಿಡಿ ಬೆಂಕಿಯ ಕಾರುವದು ಸಿಟ್ಟು ಅಪ್ಪನಿಗೆ ಎಷ್ಟೇಬರಲಿ ಬೆಕ್ಕಿನ ಹಾಗೇ ಕಾರಿರುಳಿನಲಿ ಅ...
ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೋರುವಿರಾ? ಅಪಾರ ಗಗನವು ಇರತಿಹುದಂತೆ! ತಾರಾಗಣದಿಂ ತೋರುವುದಂತೆ! ಕಾರ್‍ಮೋಡಗಳಿಂ ಮುಸುಕಿಹುದಂತೆ! ಚಂದ್ರ ಸೂರ್ಯರಲ್ಲಿರುತಿಹರಂತೆ! ಜಗವನು ಬೆಳಗಲು ನಿಂದಿಹರಂತೆ! ರಾಹು ಕೇತುಗಳು ಪೀಡಿಪವಂತ...
ವಿಜಯಹಾದಿಯ ಸುತ್ತಲು ಎತ್ತಲು, ಮುಚ್ಚಿತು ಮುಬ್ಬು ಹೇರಳದಿ; ದೂರದ ಶಿಖರದಿ ಮಿನುಗಿತು ವಿದ್ಯುತ್, ಭೀಕರ ದಿನಗಳಲಿ. ಬಂಟನ ಭರವಸೆ ಸಾಗಿತು ಹಾರಿ, ಧರೆಯಲಿ ಮೆರೆಯುತ ನೆಟ್ಟನೆ ಸಾರಿ; ಕೊಂಬುತುತ್ತೂರಿ ತುಂಬಿತು ನೆರವಿ, ಸಮರವ ಇಮ್ಮಡಿಸಿ. ಸ್ವಚ್ಛ ಸ...
ಎಣೆಯಿಲ್ಲದೀ ಸೊಬಗ ನೋಡಿ ಸಂತಸಗೊಂಡು ಸವಿಯಿದನು ಹಾಡಬೇಕೆಂದುಲಿವ ಜೀವ! ಆನಂದದಾ ಮುಕುಟ ಮೌನವೆಂಬುದನರಿದು ನಿಗ್ರಹಿಸು, ನುಡಿಯದಿರು ನುಡಿಗೂಳಿಯಾಗಿ. ನೀನು ಕಂಡಿಹ ಚೆಲುವ ಕೋಟಿ ಕಣ್ಗಳು ಕಂಡು ಮರೆಯಾಗುವವು ನಿನ್ನ ಕಣ್ಣಿನಂತೆ, ಕಾಣಿಸಿಹ ಚೆಲುವು ತ...
ಗೆಳತೀ ಹನಿಗೂಡಿದರ್ಹಳ್ಳ ||ಪ|| ಹನಿಹನಿ ಗೂಡಿದರ್ಹಳ್ಳ, ತೆನತೆನಿ ಗೂಡಿದರ ರಾಸಿ ಮನಕ ಮನಗೂಡಿದರೆ, ಮನಿಮಾರ ಗೆಳತಿ ||ಅ.ಪ.|| * ಹರಿಯ ಹೊತ್ತಿಲೆದ್ದು, ಅತ್ತಿ ಮಾವಗ ಶರಣ ಮತ್ತೊಂದು ಶರಣ ಗುರುವೀಗೆ | ಗೆ | ನಾಮಾಡಿ ಹೊಕ್ಕಿನಿ ಮನಿಯ ದಗದಕ | ಗೆ ...
೧ ತಾಯಿ ಹೊರಳಿದಳು ನರಳಿ ಸುಪ್ತ ಮನಸಿನಲೇನೊ ತುಂಬ ಕನಸು; ಹಗಲೆಲ್ಲ ದುಡಿದು ದಣಿದಿಹ ದೇಹ- ಯಾವಾಗ ನೆಲವ ಕಂಡೇನೆಂದು ತೂಗಿ ಮಲಗಿರಬೇಕು. ಮೈ ಮುದುರಿ ಮಲಗಿರುವ ಎಲುಬು ಹಂದರ ಗೂಡು ಮುರಿದು ಬಿದ್ದಿಹ ಹಳೆಯ ಕೊಡೆಯ ಪಾಡು; ಆದರೂ….ಆದರೂ…...





