ಹೆಣ್ಣುಮಗುವಿಗೆ ಜನ್ಮವೆತ್ತ ಕಾರಣಕ್ಕಾಗಿ ಆ ಮಗುವನ್ನೇ ಕಣ್ಮರೆಯಾಗಿಸುವ ಅಥವಾ ಹೆಣ್ಣುಹೆತ್ತದ್ದಕ್ಕಾಗಿ ತಾಯಿಗೆ ಮಾನಸಿಕ ಹಿಂಸೆ ಕೊಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಕೇವಲ ಗಂಡು ಮಕ್ಕಳೆ ಡಜನ್‌ಗಟ್ಟಲೇ ಸೃಷ್ಟಿಯಾಗಿ ಒಂದಾದರೂ ಹೆಣ್ಣು ಮಗ...

ನಮ್ಮ ಸುತ್ತಮುತ್ತಲಿರುವ ನಿಸರ್ಗ ಗಾಳಿ, ನೀರು ಮುಂತಾದವುಗಳನ್ನು ನಾವು ಪರಿಸರವೆಂದು ಹೇಳುತ್ತೇವೆ.  ಗಾಳಿ ನಮ್ಮ ಜೀವಾಳ ಅದಿರದಿದರೆ ನಾವು ಬದುಕಲಾರೆವು.  ಮನುಷ್ಯನು ಬದುಕಿರಬೇಕಾದರೆ ಗಾಳಿಯಂತೆ ನೀರು ಕೂಡ ಅತ್ಯವಶ್ಯಕ.  ಇಂದು ವಾಯು ಮಾಲಿನ್ಯ, ಶ...

ನೀವು ನೀರಿನಲ್ಲಿ ಹಾರಿಕೊಳ್ಳುತ್ತೀರಿ. ಆ ವಿಪುಲವಾದ ಜಲರಾಶಿಯು ನಮ್ಮನ್ನು ಹೆದರಿಸುವುದಿಲ್ಲ. ನೀವು ಕೈಕಾಲುಗಳನ್ನು ಬಡಿಯುತ್ತೀರಿ.  ಅದರೊಡನಯೇ ಈಸಕಲಿಸಿದೆ ನಿಮ್ಮ ಗುರುವಿಗೆ ಧನ್ಯವಾದಗಳನ್ನು ಅರ್ಪಿಸುತ್ತೀರಿ. ನೀವು ತೆರೆಗಳ ಮೇಲೆ ಅಧಿಕಾರವನ್ನ...

ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ ಅನುಭವಕ್ಕೆ ಸಂಬಂಧಿಸಿದ್ದು. ಆರ್ದ್ರತೆಯ ಈ ಆನ...

ಚಿತ್ರದುರ್ಗದ ವಸುಂಧರೆ ಎಂದೂ ಬಡವಿಯಲ್ಲ. ಅದೇನು ಈ ನೆಲದ ಪುಣ್ಯ ವಿಶೇಷವೋ ಯಾವುದೇ ಕ್ಷೇತ್ರದಲ್ಲಿ ದುರ್ಗ ನೀಡಿದ ಕೊಡುಗೆ ಅನನ್ಯ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ ಮತ್ತು ಚಿತ್ರದುರ್ಗದ ಬೃಹನ್ಮಠ, ರಾಜಕೀಯದಲ್ಲಿ ರಾಷ್ಟ್ರ ನಾಯಕ ನಿಜಲಿಂಗಪ್ಪ,...

ಪ್ರಿಯ ಸಖಿ, ಬೆಂಗಳೂರಿಗೆ ಹೊರಟಿದ್ದ ಬಸ್ಸು ಕುಣಿಗಲ್ನಲ್ಲಿ ನಿಂತು ಇಳಿಸುವವರನ್ನು ಇಳಿಸಿ ಹತ್ತಿಸಿಕೊಳ್ಳುವವರನ್ನು ಹತ್ತಿಸಿಕೊಂಡು ತಕ್ಷಣ ಹೊರಟಿದೆ. ಇದರ ಅರಿವಿಲ್ಲವ ಕಡಲೇ ಕಾಯಿ ಮಾರುವ ಹುಡುಗನೂ ಬಸ್ಸು ಹತ್ತಿ ವ್ಯಾಪಾರಕ್ಕಿಳಿದವನು ಬಸ್ಸು ಹೊ...

ಭಾರತದ ಜೀವಂತ ಶಕ್ತಿಯಾಗಿ ಪ್ರವಹಿಸಬೇಕಾಗಿದ್ದ ಡಾ|| ರಾಮ ಮನೋಹರ ಲೋಹಿಯಾ ಕೇವಲ ಒಂದು ನೆನಪಾಗಿ ಉಳಿಯುತ್ತಿರುವುದು ನಮ್ಮ ಭವಿಷ್ಯದ ಕರಾಳತೆಯನ್ನು ಸೂಚಿಸುತ್ತಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲ ಜ್ವಲಂತ ಸಮಸ್ಯೆಗಳನ್ನು ಕುರಿತು ಅವರು ಅಂದೆ ...

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗ...

“ಗ್ರೀನ್‌ಹೌಸ್” ಎಂದರೆ “ಹಸಿರುಮನೆ” ಎಂದರ್ಥ.  ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.  ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....