ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ ಚಿಕಿತ್ಸೆಯನ್ನು ಮಾಡಿ ಪುನಃಕೂದಲು ಸಮೃದ್ಧಗೊಳ್ಳುವಂತೆ ಮಾಡಲು ಇನ್ನೂ ಪ್ರಯೋಗಗಳು ಆಗಿಲ್ಲ. ೫೦ ವರ್ಷದೊಳಗಿನ ಸ್ತ್ರೀ ಪುರುಷರಿಗೆ ಬೊಕ್ಕತಲೆಯಾದರೆ ಅಂಥವಹರಿಗೆ ಒಬ್ಬ ಸಾಮಾನ್ಯರು ಒಂದು ತೈಲವನ್ನು ಕಂಡು ಹಿಡಿದಿದ್ದಾರೆ. ಇದು ಇವರ ಇತ್ತೀಚಿನ ಶೋಧನೆ, ಮೇಲ್ನೋಟದಲ್ಲಿ ‘ಅರಳೆಕಾಯಿ ಪಾಂಡಿತ್ಯ’ವೆಂದಾದರೂ ಇದರಲ್ಲಿಯೂ ವೈಜ್ಞಾನಿಕ ಕ್ರಿಯೆಗಳು ನಡೆದೇ ಕೂದಲುಗಳು ಅಂಕುರಿಸುತ್ತವೆ, ಎಂಬುದು ಸತ್ಯ.

ಸದ್ಯ ಸಾಗರದ ನಾರಾಯಣ ಬಂಢಾರಿ ವೃತ್ತಿಯಲ್ಲಿ ಕ್ಷೌರಿಕ ೪೦ ವರ್ಷಗಳಿಂದಲೂ ಉದ್ಯೋಗ ಮಾಡುತ್ತಿದ್ದ ಇವರು ಇತ್ತೀಚೆಗೆ ಗಿಡಮೂಲಿಕೆಗಳ ಸಂಗ್ರಹದಿಂದ ತೈಲವೊಂದನ್ನು ಕಂಡು ಹಿಡಿದು ಪ್ರಯೋಗಿಸಿ ಯಶಸ್ವಿಯಾದರು. ಈ ತೈಲದ ಹೆಸರು “ಕನಕ ಸಿಂಹಾದ್ರಿತೈಲ”. ಈಗಾಗಲೇ ಸಾವಿರಾರು ಜನ ಇದನ್ನು ಉಪಯೋಗಿಸಿ ಯಶಸ್ವಿಯಾಗಿದ್ದಾರೆ. ಸ್ನಾನದ ನಂತರ ದಿನ ಬಿಟ್ಟು ದಿನ ಹೀಗೆ ೪ ಬಾಟಲ್ ಮುಗಿಯುವವರೆಗೂ ಹಚ್ಚಿದರೆ ಕೇಶಗಳು ಪುನರ್‌ಸೃಷ್ಟಿಗೊಳ್ಳುತ್ತವೆ. ಇದರ ತಯಾರಿಕೆಯ ಮೂಲವನ್ನು ನಾರಾಯಣ ಬಂಢಾರಿ ಹೇಳಿಲ್ಲ. ಕೆಲವು ವಿದೇಶಿಯರೂ ಕೂಡ ಈ ತೈಲವನ್ನು ಕೊಂಡೊಯ್ದಿದ್ದಾರೆ.
*****