ಲಿಂಗಮ್ಮನ ವಚನಗಳು – ೫೭

ಅಂಗವೆಂದರೆ ಲಿಂಗದೊಳಡಗಿತ್ತು. ಲಿಂಗವೆಂದರೆ ಅಂಗದೊಳಡಗಿತ್ತು. ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದರೆ, ಮಂಗಳದ ಮಹಾಬೆಳಗು ಕಾಣಿಸಿತ್ತು. ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣಂಘ್ರಿಗೆರಗಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಸೌಂದರ್ಯಂತಾದ ಮಣ್ಣು

ಸೌಂದರ್ಯಂತಾದ ಕಣ್ಣು ಇದಕೆ ಸೌಂದರ್ಯಂತಾದ ಮಣ್ಣು            ||ಪ|| ಘಮಾ ಘಮಾ ಮೂಗಿಗೆ ವಾಸನೆ ಹಳದಿ ಕೆಂಪು ಬಣ್ಣದ ಹೂವ ಉಬ್ಬೂ ತಗ್ಗು ಸೀರೆ ಮುಚ್ಚಿದ ಬಳ್ಳೀಹಂಗೆ ಬಳಕೋ ಮೈನ ಮಾಂಸದಂಥ ಹಣ್ಣಿನ ಮಣ್ಣಿನ ಗೂಂಬೇನ್ನೋಡಿ...

ಅಣ್ಣನಿಗೊಂದು ಕಳಕಳಿಯ ಪತ್ರ

ಪ್ರೀತಿಯ ಅಣ್ಣನಿಗೆ ಶರಣು ಶರಣಾರ್ಥಿ, ಬಯಲಲ್ಲಿ ಬಯಲಾಗಿ, ಕೈಲಾಸ ಸೇರಿ ಸುಖವಾಗಿರೋ ನಿನಗೆ ನಮ್ಮ ಭೂಲೋಕದ ಮಂದಿ ಬದಲಾದ ಕಥೆನಾ ಒಂದೀಟು ಹೇಳಿಕೊಂಬಾನ ಅನ್ನಿಸಿದ್ದರಿಂದ ಈ ಪತ್ರ ಸಾಮಿ. ನೀನು ಬ್ರಾಂಬ್ರಾಗಿ ಹುಟ್ಟಿದರೂ, ವೈದಿಕ...

ಕ್ಲಿಂಟನ್

"ಪಾಪ! ಅಂವ ಮಾಡಬಾರದ್ದ ತಪ್ಪೇಽನ ಮಾಡ್ಯಾನ ಮನುಷ್ಯಾ ಮಾಡ್ದ ಏನ್ ಹೆಣಾ ಮಾಡ್ತತಿ" "ಮೋನಿ ಅಷ್ಟ ಮೋಡೀಽನ ಮಾಡ್ಯಾಳ ಅಂದ ಮ್ಯಾಲ ಅವಂದಽ ತಪ್ಪಂತ ಹೆಂಗಂತೀರಿ, - ಆಕಿಂದನೂ ತಪ್ಪಽ ಹೌದಲ್ಲೋ ಮತ್ತಽ" "ಅಂವ...

ಆರ್ಟ್ಸ್ ಕಾಲೇಜಿನ ಹಾದಿಯಲ್ಲಿ

ಇಲ್ಲಿ ಗುಲ್ಮೊಹರ್‍ ಹೂವುಗಳು ದಟ್ಟವಾಗಿ ಬೀಳುತ್ತಿವೆ. ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ. ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ ಏನೋ ಹೇಳುವ ಹಾಗಿವೆ. ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಬಸ್...
ಆ ಒಂದು ನಗು

ಆ ಒಂದು ನಗು

[caption id="attachment_6125" align="alignleft" width="192"] ಚಿತ್ರ: ಅಪೂರ್ವ ಅಪರಿಮಿತ[/caption] ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ...

ಹುಲ್ಲನ್ ಬೆಳೆಯೋದ್

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್‍ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ ಭಾರ ಆಗದ...

ನಗೆ ಡಂಗುರ – ೧೭೬

ಆಕೆ: ‘ನನ್ನ ಗಂಡ ಯಾವುದೇ ವಿಷಯದ ಬಗ್ಗೆ ಇಡೀದಿನ ಮಾತನಾಡಲು ಬಲ್ಲ.’ ಸ್ನೇಹಿತೆ: ‘ಆದೇನು ಮಹಾ ? ನನ್ನ ಗಂಡನಿಗೆ ಯಾವುದೇ ವಿಷಯ ಬೇಕಿಲ್ಲ. ಆದರೂ ಮಾತಾಡ್ತಾ, ಮಾತಾಡ್ತಾ, ಮಾತಾಡ್ತಾನೇ ಸದಾ ಇರಬಲ್ಲ?’ ***