Home / Veena Madappadi

Browsing Tag: Veena Madappadi

ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ  ಇಡುಗಿದರೂ ಮೂಗಿಗದು ಬಡಿಯುತ್ತಿರಲಿಲ್ಲ. ದಿನವಿಡೀ ಯೋಚಿಸಿ ಅತ್ತೆಯಿಂದ ಬೈಗಳು ತಿಂದದ್ದು ಅದೆಷ್ಟು ಬಾರಿಯ...

ಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ ಅ...

ಊರ ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದಕ್ಕೆ ಊರಿಗೆ ಊರೇ ರೋಮಾಂಚನಗೊಂಡಿತ್ತು. ತೀರಾ ಸಣ್ಣ ಊರದು. ಭಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನವೇ ಇರಲಿಲ್ಲ. ಸಂತೋಷಪಡಲು ಅದಕ್ಕೊಂದು ಕಾರಣವೂ ಇರಲಿಲ್ಲ. ಈಗ ಅದು ದೊರಕಿತ್ತು. ಚೇರುಮನ್ನರ ಹೆಸರು ...

ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್ ಏಕಾಕಿ ವಿಧವೆಯರನ್ನು ಸಂದರ್ಶಿಸಿ ಡೆಸರ್ಟೇಶನ್ ಸಿದ್ಧಪಡಿಸಬೇಕೆಂದ...

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ...

“ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು.” ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ ಒಮ್ಮೆಯೂ ಬೆಲೆ ಕೊಟ್ಟವನಲ್ಲ. ಪೋಲಿಸರು ಅಂಡಿಗೆ ತುಳಿದಾಗ ತಾನಾ...

ದಿನವಿಡೀ ಭುವಿಯನ್ನು ಬಿಸಿಲಿನ ಜಳದಿಂದ ತೋಯಿಸಿದ್ದ ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತಿದ್ದ. ಸೂರ್ಯನೆಲ್ಲಾದರೂ ಮುಳುಗುವುದು ಸಾಧ್ಯವೆ? ಭೂಮಿಯ ಒಂದು ಮೈಯನ್ನು ಕತ್ತಲೆ ಮಾಡಿ ಮತ್ತೊಂದನ್ನು ಮುತ್ತಿ ತೋಯಿಸುವ ಸೂರ್ಯನ ಈ ಚಕ್ಕಂದ ಅದೆಷ್...

ಹಿರಿಪುಢಾರಿಯ ಸಂಪರ್ಕಕ್ಕೆ ಮರಿ ಪುಢಾರಿಯು ಬಂದದ್ದು ಕಿರಿಪುಢಾರಿಯ ಮೂಲಕ. ಮರಿಪುಢಾರಿಯು ಕಾಲೇಜಲ್ಲಿ ಒಬ್ಬ ನಾಯಕನಾಗಿದ್ದನು. ಒಂದೆರಡು ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ಬೇಕೆಂದೇ ಬೈಕಿನ ಸೈಲೆನ್ಸರ್‍ ಹಾಳು ಮಾಡಿ ಬೈಕು ಓಡಿಸುವುದು, ಭಯ...

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು. ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ ಜೋಲು ಮೋರೆ ಹಾಕಿ ಕೂತಿತ್ತು. ಇನ್ನೇನು ಯಾವುದಾದರೂ ಕಾರು, ಆಟೋ, ಬಸ್ಸಿ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...