Prabhakara Shishila

#ಸಣ್ಣ ಕಥೆ

ಚಿಂಡನ್ನಾರಾಯಣ ನಾಯರನ ಕಂಪ್ಯೂಟರು ಅಷ್ಟಮಂಗಲ ಪುರಾಣವು

0

ಕಂಪ್ಯೂಟರು ಮೂಲಕ ನಿಮ್ಮ ಧಾರ್ಮಿಕ ಸಮಸ್ಯೆಗಳಿಗೆ ಅಷ್ಟಮಂಗಲ ಪ್ರಶ್ನೆ ಹಾಕಿ ನಾವು ಪರಿಹಾರ ಸೂಚಿಸುತ್ತೇವೆ. ನಮ್ಮ ವೆಬ್‌ಸೈಟ್: www cnnglobal computerasthamangala dot comಎಂಬ ಜಾಹೀರಾತೊಂದು ವೃತ್ತ ಪತ್ರಿಕೆಗಳಲ್ಲಿ ಕಾಣಿಸಿಕೊಂಡದ್ದೇ ಕಪಿಲಳ್ಳಿಗೆ ಕಪಿಲಳ್ಳಿಯೇ ಎದ್ದು ಕೂತು ಅನಾದಿ ಅನಂತ ಚರ್ಚೆಯಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಬಿಟ್ಟಿತು. ಕಪಿಲಳ್ಳಿಯ ಏಕಮಾತ್ರ ಸಂರಕ್ಷಕ ಕಪಿಲೇಶ್ವರನ ಸುತ್ತು ಗೋಪುರ […]

#ಸಣ್ಣ ಕಥೆ

ಬೀಜ

0

ಘನ ರಾಜ್ಯ ಸರ್ಕಾರದಿಂದ ಕಪಿಲಳ್ಳಿ ಪಂಚಾಯತಿಗೆ ಸುತ್ತೋಲೆಯೊಂದು ಬಂದಿದೆಯೆಂದೂ, ಅದರ ಬಗ್ಗೆ ಚರ್ಚಿಸಲು ರೈತರೆಲ್ಲಾ ಸಂಜೆ ಪಂಚಾಯತ್‌ ವಠಾರದಲ್ಲಿ ಸೇರಬೇಕೆಂದೂ ಉಗ್ರಾಣಿ ನರ್ಸಪ್ಪ ಕಂಡ ಕಂಡವರಿಗೆಲ್ಲಾ ಹೇಳುತ್ತಾ ಹೋದುದರಿಂದ ಎಂದಿಗಿಂತ ಹೆಚ್ಚು ಮಂದಿ ಅಂದು ಸೇರಿದ್ದರು. ಊರಿಗೊಂದು ಪಂಚಾಯತಿಗಾಗಿ, ಅಲ್ಲಿಗೆರಡು ದಿನಪತ್ರಿಕೆ ಮತ್ತು ಒಂದು ಸಂಜೆಪತ್ರಿಕೆ ಬರತೊಡಗಿದಂದಿನಿಂದ ಊರಿನ ರಂಗೇ ಬದಲಾಗಿ ಹೋಗಿತ್ತು. ದಿನಪತ್ರಿಕೆಗಿಂತಲೂ ಸಂಜೆಪತ್ರಿಕೆ […]

#ಸಣ್ಣ ಕಥೆ

ಏಕದಂತಮುಪಾಸ್ಮಹೇ

0

ಸಂಜೆ ಕಪಿಲಳ್ಳಿ ಕಾಡಿನಿಂದ ವಾಪಾಸಾದ ತನ್ನ ಗಂಡನ ಮುಖದಲ್ಲಿ ಭಯ, ಗಾಬರಿ ತಾಂಡವವಾಡುತ್ತಿದ್ದುದನ್ನು ಕಂಡು ದೇವಕಿಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೇ ಮಂಕಾಡಿಸಿ ಏಳಿದರೂ ಗಂಡ ಚನಿಯ ಮಲೆಕುಡಿಯನಿಂದ ಉತ್ತರವಿಲ್ಲ. ಏನಾಗಿರಬಹುದು ಇವರಿಗೆ? ಎಲ್ಲಾದರೂ ಕುಡೋಳು ಕುಟ್ಟಿತೆ? ಏನಾದರೂ ಸೋಂಕೆ? ಅಥವಾ ಕಾಡಿನ ಪ್ರೇತ ಚೇಷ್ಟೆಯಾ? ಕೇಳಿ ಕೇಳಿ ಬಚ್ಚಿಹೋಗಿ ಕೊನೆಗೆ, “ಮಣ್ಣು ಹಾಕಲಿ. ಮನಸ್ಸಾದಾಗ ತಾನಾಗಿಯೇ […]

#ಸಣ್ಣ ಕಥೆ

ಸೂದ್ರ ಮಾಣಿ ಡಾಕ್ಟರನಾದ ಕಥಾನಕವು

0

ಡಾ|| ಸುಧೀರಕೃಷ್ಣ ರಾವ್ ಕಪಿಲಳ್ಳಿ, ಗಂಡಸರ ಸಮಸ್ಯೆ ಕಾಯಿಲೆಗಳ ತಜ್ಞ ವೈದ್ಯರು ಎಂಬ ಬೋರ್ಡೊಂದು ಹಠಾತ್ತನೆ ಪುರಾತನ ಮುಳಿ ಮಾಡಿನ ಚಿಕ್ಕ ಕಟ್ಟಡವೊಂದರ ಮುಂದೆ ನೇತು ಬಿದ್ದದ್ದು ಕಪಿಲಳ್ಳಿಯಲ್ಲಿ ಬಹುದೊಡ್ಡ ಚರ್ಚೆಗೆ ವಿಶಾಲವಾದ ವೇದಿಕೆಯನ್ನು ಒದಗಿಸಿಬಿಟ್ಟಿತು. ಕಪಿಲೇಶ್ವರನ ದೇವಾಲಯದಲ್ಲಿ ಬಾಯಲ್ಲಿ ಮಣ ಮಣ ಮಂತ್ರ ಹೇಳುತ್ತಾ ಪೂಜೆ ಮಾಡುತ್ತಿದ್ದ ಅರ್ಚಕ ಪುರೋಹಿತ ಗಣಪತಿ ಸುಬ್ರಾಯ ಜೋಯಿಸರಿಗೆ […]

#ಸಣ್ಣ ಕಥೆ

ಕರಾಚಿ ಕಾರಣೋರು

0

ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ ನುಸಿ, ಉಮಿಲಿ, ಕುರ್ಡ ಕಚ್ಚಿಸಿಕೊಂಡು ಪುಳಿಚ್ಚಾರಿನಲ್ಲೇ ಸಂಭ್ರಮಿಸಬೇಕಾಗಿದ್ದವರಿಗೆ ಕೆಸರು ನೀರಲ್ಲಿ ಉಳುತ್ತಾ, ನೇಜಿ ತೆಗೆದು ನೆಡುತ್ತಾ, ಓ ಬೇಲೆ, ರಾವು ಕೊರಂಗು, ದೂಜಿ ಕೆಮ್ಮಯಿರಾ ಹಾಡುತ್ತಾ, ಚೊರಲ್ಲಿ […]

#ಸಣ್ಣ ಕಥೆ

ಧರ್ಮಸಂಸ್ಥಾಪನಾರ್ಥಾಯ

0

ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ, ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟಸುಬ್ಬಯ್ಯನವರು ದೇವಳದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರಲ್ಲಿ ಎತ್ತರದ ಸ್ವರದಲ್ಲಿ, ಒಂದೇ ಉಸಿರಲ್ಲಿ, ಮೂತಿಗೆ ಇಕ್ಕಿದಂತೆ ಹೇಳಿದಾಗ ಅವರು […]

#ಸಣ್ಣ ಕಥೆ

ರಾಧೆಯ ಸ್ವಗತ

0

ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: “ರಾಧೆ, ಈ ಮುಖ ಹೀಗೆ ಪ್ರಪುಲ್ಲಿತವಾಗಿರುವಾಗಲೇ, ನಿನ್ನ ದೇಹದ ಕಣಕಣಗಳಿಗೆ ಮುಪ್ಪಡರುವ ಮುನ್ನ ನಾನು ಸತ್ತು ಹೋಗಬೇಕು. ನಾನು ಮುದುಕನಾದಾಗ ನೀನು ನನ್ನನ್ನು ಸಹಿಸಬಲ್ಲೆ. ಆದರೆ ನನ್ನ ರಾಧೆಯನ್ನು ಮುದುಕಿಯಾಗಿ […]

#ಸಣ್ಣ ಕಥೆ

ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

0

ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು. ಸದಾ ಚುರುಕಿಂದ ಓಡಾಡಿಕೊಂಡು, ಎಂತಹ ತೆಂಗಿನ ಮರವನ್ನಾದರೂ ಸರಸರನೆ ಏರಿ ಕಾಯಿ ಕೀಳಬಲ್ಲ ಕೌಶಲವಂತ ದೋಂಟಿ ತ್ಯಾಂಪಣ್ಣನು ಮೂಡು ಕೆಡಿಸಿಕೊಂಡನೆಂದರೆ ಅಂದು ಯಾವುದೇ ಕೆಲಸ ಮಾಡಲಾರ. ಸಂಜೆ […]

#ಸಣ್ಣ ಕಥೆ

ಥಡ್ರ್‌ಸೆಕ್ಸ್ ಮೊನೊಲಾಗು

0

ನಿಮ್ಮೊಡನೆ ಇಂದು ಹೃದಯ ಬಿಚ್ಚಿ ಮಾತಾಡುತ್ತಿದ್ದೇನೆ. ಈಗ ಹಾಗೆ ಯಾರೂ ಮಾತಾಡುವವರಿಲ್ಲ. ಸ್ವಭಾವ, ನಡೆ, ನುಡಿ ಎಲ್ಲದರಲ್ಲೂ ಒಳಗೊಂದು ಹೊರಗೊಂದು. ನೀವೂ ಹಾಗೇ ಅಲ್ವಾ? ಹೇಳಿ, ನೀವು ಗಂಡಸರಾ, ಹೆಂಗಸರಾ? ನನ್ನನ್ನು ನೀವು ಹೇಗೆ ಬೇಕಾದರೂ ಕರೆಯಿರಿ, ನನ್ನದೇನಡ್ಡಿಯಿಲ್ಲ. ಅದು-ಇದು, ಅವನು-ಅವಳು, ಇವನು-ಇವಳು, ಹೇಗಾದರೂ. ದೈಹಿಕ ನ್ಯೂನ್ಯತೆಯನ್ನು ಪರಿಹಾಸ್ಯ ಮಾಡುವುದು ಸುಸಂಸ್ಕೃತರ ಲಕ್ಷಣ ಅಲ್ಲವಂತೆ. ಆದರೂ […]

#ಸಣ್ಣ ಕಥೆ

ಆ ಕೈಗಳು

0

ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ. ಬಲಗೈಯಿಂದ ಗಾಳಿಯನ್ನು ಸೀಳಿ ಏನನ್ನೋ ಅಟ್ಟಿದ. ಗಾಬರಿ ಯಿಂದ ಬಂದವನು ಕಾಲಿಂಗ್‌ಬೆಲ್ಲನ್ನು ಒತ್ತದೆ ದಬ ದಬ ಬಾಗಿಲು ಬಡಿದ. ನಾನು […]