ಮಿಂಚುಳ್ಳಿ ಬೆಳಕಿಂಡಿ – ೫೩
Latest posts by ಧರ್ಮದಾಸ ಬಾರ್ಕಿ (see all)
- ಮಿಂಚುಳ್ಳಿ ಬೆಳಕಿಂಡಿ – ೭೧ - April 30, 2018
- ಮಿಂಚುಳ್ಳಿ ಬೆಳಕಿಂಡಿ – ೭೦ - April 23, 2018
- ಮಿಂಚುಳ್ಳಿ ಬೆಳಕಿಂಡಿ – ೬೯ - April 16, 2018
ಬದುಕಿಡೀ ನಾವು ಮಾಡುವುದಿಷ್ಟೇ: ನಮ್ಮ ನಮ್ಮ ಮುಖವಾಡಗಳ ಶೃಂಗಾರ! *****
ಬದುಕಿಡೀ ನಾವು ಮಾಡುವುದಿಷ್ಟೇ: ನಮ್ಮ ನಮ್ಮ ಮುಖವಾಡಗಳ ಶೃಂಗಾರ! *****
ಕತ್ತಲಿನಲ್ಲಿ ಕಣ್ಮರೆಯಾಗುವ ನಾವು ಬೆಳಕಿನಲಿ ಅದೃಶರಾಗುತ್ತೇವೆ! *****
ಮುಕ್ತನಾಗಬೇಕೆಂಬ ನನ್ನ ಆಲೋಚನೆಯೇ ನನ್ನನ್ನು ಬಂಧನದ ಕೂಪಕ್ಕೆ ತಳ್ಳಿತಲ್ಲಾ? *****
ನಿರಾಸೆಯ ಹೊಟ್ಟೆಯಲಿ ಹುಟ್ಟಿದ ಆಶೆಯೊಂದೇ ಆಶಾದಾಯಕ *****
ಎಲ್ಲ ತಿಳುವಳಿಕೆ ಒಂದು ಬಗೆಯ ಅರೆವಳಿಕೆ!! *****
ಸತ್ಯಂ ಶಿವಂ ಸುಂದರಂ ನನಗೆ ಈ ಮೂವರೆಂದರೆ ಬಲು ಇಷ್ಟ. ಇವರೇ ನಮ್ಮ – ಸತ್ಯಮ್ಮ ಶಿವಮ್ಮ ಸುಂದ್ರಮ್ಮ! *****
ನಮ್ಮ ಹಿತ್ತಲ ಗಿಡದಲ್ಲಿ ಹೂವೊಂದು ಕಾಯಿಯಾಯಿತು ಕಾಯಿ ಹಣ್ಣಾಯಿತು ಹಣ್ಣು ಮಾಗಿತು. ಇಷ್ಟಕ್ಕೂ ನಾನೇನು ಮಾಡಿದೆ? ಕಾ…. ದೆ. *****
ಭ್ರಮೆಯೆಂದು ನೀನು ಭ್ರಮಿಸುವವರೆಗೂ, ಭ್ರಮೆಯೆಂಬುದು ಭ್ರಮೆಯಲ್ಲ! *****
ನಾನಂದುಕೊಂಡಷ್ಟು ದಕ್ಕಲಿಲ್ಲ. ದಕ್ಕಿದ್ದೆಲ್ಲ ನನ್ನದಾಗಲಿಲ್ಲ. *****
ಹಾಡ ಹಾಡಲು ಕುಳಿತೆ, ಹಾಡು ಹಾಡಿಸಿದುದ ಅರಿತೆ. *****