Home / ಸುಳಿ

Browsing Tag: ಸುಳಿ

ಹಣ್ಣು ತಿನ್ನುವುದಿರಲಿ ನಿನ್ನ ಸ್ನೇಹಕ್ಕೆ ಸೋತು ಮಣ್ಣು ತಿಂದೇನು ಅಂದಿದ್ದೆ, ಅಲ್ಲವ ಹೇಳು? ಅಂದಿದ್ದೆ ಹೌದು ಒಂದಾನೊಂದು ಕಾಲದಲಿ ಬುದ್ದಿಯಿದ್ದದ್ದೆಲ್ಲ ಆಗಿನ್ನು ಬಾಲದಲಿ ಕೈಯಾರೆ ಬೆಳೆಸಿದ್ದ ಚಂದ್ರ ಹಲಸಿನ ಗಿಡ ಬುಡಕ್ಕೆ ಗೆದ್ದಲು ಹಿಡಿದು ಒಲ...

ನೀರು ಕಾಯುತ ನೋಡಲು ಬಚ್ಚಲಿಗೆ ಹೋದೆ ಉರಿ ಕೊನೆತನಕ ಬಂದು ಕಟ್ಟಿಗೆ ಕೈಹಿಡಿಯಷ್ಟು ಉಳಿದು ಒಲೆಯಿಂದ ಹೊರಗೆ ಬಿದ್ದಿದೆ; ಥಟ್ಟನೆ ವಯಸ್ಸಾಯಿತೆನ್ನಿಸಿತು ಸರಿದ ಬದುಕ ತಲೆಗೆ ಕರೆದು ದುರ್ಬೀನಡಿಗೆ ದಬ್ಬಿ ಹುಡುಕಿದೆ. ಒಂದು ಮಲ್ಲಿಗೆ ಒಂದು ಗುಲಾಬಿ ಇ...

ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ ಸರಳ ಸಮರ್‍ಪಕ ಸೂತ್ರಬದ್ಧ ಇದ್ದಕ್ಕಿದ್ದಂತೆ ದನಿಯೊಡೆದೆ ಈಗ ಕನ್ನೆಮಾಡದ ಕನಸಮುಗ್ಧ ಹಸಿರು ಹಾವು ಅಸಂಖ್ಯ ಉಸಿರುಗಟ್ಟಿಸುವಂತೆ ಹರಿದುಬಂದವು ಹತ್ತುದಿಕ್ಕಿನಿಂದ ಕುಡಿದು ಮಲಗಿದ್ದವನ ಕಡಿದು ಹೋದವು ಸತ್ತು ...

ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ? ಸಿಂಹದಂತೆ...

ಈ ಪಚ್ಚಬಾಳಸಿಪ್ಪೆಯ ಬೆಳಗು, ಟೊಮ್ಯಾಟೋ ಸೂರ್‍ಯನ ಮುಳುಗು, ಮೊಳೆಮೆಟ್ಟಿನಿಂದ ತಲೆಮೆಟ್ಟುವ ರಾಕ್ಷಸ ನಡುಹಗಲು, ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ, ಯಾರು ದೂರವಾದರೆ ಏನು ನನಗೆ? ನಿಂತ ನೆಲದ ಈ ಸ...

ಬೆಟ್ಟದ ತಪ್ಪಲಲ್ಲೇ ಹುಟ್ಟಿ ಅಲ್ಲೇ ಬಾಳು ಕಟ್ಟಿದ್ದೇವೆ, ಕೊಪ್ಪಲು ಬಿಟ್ಟು ಬೆಟ್ಟದ ನೆತ್ತಿ ಹತ್ತಲಾರದೆ ಹೋಗಿದ್ದೇವೆ. ಇಲ್ಲೇ ಹುಟ್ಟಿದ ನೀನು ಅಲ್ಲಿಗೆ ಮುಟ್ಟಿದ್ದಕ್ಕೆ ನಗಾರಿ ಬಡಿದರು ಹೊರಗೆ ನಡುಗಿದ್ದೇವೆ ಒಳಗೆ ಅಲ್ಲಿಗೆ ಸೇರಿದ ನೀನು ಮಲ್ಲಿ...

ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ? ಗಡಿ ರಕ್ಷಿಸಿಯಾಯಿತಲ್ಲ! ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ ಏಕಾಂತದಲ್ಲೆ ಮಾನವೆಲ್ಲ! ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ ಚಿನಕುರಳಿ ಸಿಡಿಯುತ್ತವೆ. ಮಾಮೂಲು ಬದುಕಿನ ಒಂದು ಕೂದಲು ಕೊಂಕದ...

ಬರಿ ಗಂಗೆ ಗೌರೀಶಂಕರ ರಾವಣಾಸುರ ಮಥನ ದಿವ್ಯನಡತೆಯ ಕಥನ ಹಗಲಲ್ಲಿ ಹತ್ತು ಜನರೆದುರಲ್ಲಿ ಸತ್ತರೂ ನಿಲ್ಲುವ ಶಾಸನದಲ್ಲಿ; ಕೊಳೆವ ಗದ್ದಲದ ವಠಾರ ನಿಂತ ನೀರ ಗಬ್ಬುಗಟಾರ ಬಾಗಿದವನ ಬೆನ್ನ ಕುತಾರ ಹಿತ್ತಿಲಲ್ಲಿ ಗುಪ್ತಚಾರರ ಜೊತೆ ಕತ್ತಲಲ್ಲಿ ಗಾಳಿ ಹಾರ...

ಕರೆದೇ ಕರೆದೆ ಗಂಟಲು ಹರಿವ ತನಕ ಒಂದೇ ಸಮನೆ ಮೊರೆದೆ. ತಿರುಗಿದೆಯ ನೀನು ತಿರುಗುವುದೆ ಬಾನು ಭೂಮಿಯ ತಾಳಕ್ಕೆ? ಭೂಮಿಯ ತಾಳಕ್ಕೆ ಋತುಗಳ ಗಾನಕ್ಕೆ ತಿರುಗುವವರು ನಾವು, ಯಾವನ ಪುಂಗಿಗೊ ರಾಗದ ಭಂಗಿಗೊ ಎಳ್ಳುಕಾಳಾಗಿ ಕಲ್ಲಗಾಣಕ್ಕೆ ದಿನವೂ ಉರುಳುವ ನೋ...

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ; ಹಳೆಯ ಅರಳಿಮರ ಹೊಳೆಮೆಟ್ಟಲು ಗರುಡಗಂಬ ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ ಹುಟ್ಟಿಕೊಳ್ಳುತ್ತದೆ ಸತ್ತ ಗಿಡ ಸುತ್ತದಡ ನಡುವೆ ಕತ್ತ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...