Home / ವೇಣಿ ಪುಷ್ಪ

Browsing Tag: ವೇಣಿ ಪುಷ್ಪ

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು ಸೌಖ್ಯಸಾಗರದಲ್ಲಿ ಮೀಯಿಸೆಂದು ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು ನೀಡೆಂದು ಬೇಡುವೆನು ಕರುಣಸಿಂಧು ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು ತೆಗೆಯೆಂದು ಬೇಡುವೆನೆ ಓ ಅನಂತ ತಡೆದುಕೊಳ್ಳುವ ಕಸುವ ...

ಮೂಡದಿಸೆಯಲಿ ಮುಗುಳಿನಂದದಿ ಅರಳಲಿಹ ಚಲು ಬೆಳ್ಳಿಯೆ ಯಾವ ಸಿದ್ಧಿಗೆ ಯಾವ ಧ್ಯಾನದಿ ಮಗ್ನಳಾಗಿಹೆ ಕಳ್ಳಿಯೆ ಯಾವ ವೃತವಿದು ಏನು ನಿಯಮವು? ಹೇಳಬಾರದೆ ಗೆಳತಿಯೆ? ನಿನ್ನ ಶಾ೦ತಿಯು ನನಗೆ ಬೇಕಿದೆ ಒಣದು ಬಾಳಲಿ ಬಳಲಿಹೆ ಬೆರಳನೆಣಿಸಿದರೇನು ಕರುಳಿಗೆ ಕಣ್...

ಹೆಣ್ಣು ಬಾಳ್ ಕಣ್ಣೀರು ಎಂದು ಹೇಳುವರೆಲ್ಲ ಆದರೇಂ ಕಣ್ಣೀರನೊರೆಸುವವರಾರಿಲ್ಲ ಮುಳ್ಳು ಬೇಲಿಯೊಳೆಲ್ಲ ಹೂಮಾಲೆ ಎಳೆದಂತೆ ಬಾಳ ಸಾಗಿಸುವವರ ಕಂಡರೂ ಏನಂತೆ? ಮರುಕವೊಂದಿನಿತಿಲ್ಲ! ಮಾತು ಗಾಳಿಯಲಾಯ್ತು ಬಡಹಣ್ಗೆ ಈ ಬಯಲು ನೈರಾಶ್ಯಗತಿಯಾಯ್ತು ಹುಣ್ಗೆ ಒ...

ಸಿದ್ದನಿವ ಸಿದ್ದನಿವ ಸಾಧನೆಯ ಗರ್ಭದಿಂ ಸಿದ್ಧಿಯನು ಪಡೆದ ಶ್ರೀ ಸಿದ್ದನಿವನು| ಅಂದು ನಾಡಾಗಿರಲು ಸಂದೇಹವಾಬೀಡು ಸಂದೇಹ ನೀಗಿಸಲು ಬಂದ ನಿವನು ಗೊಂದಲದಿ ಬಿದ್ದವರ ತಂದೆ, ಕೈ ಹಿಡಿದೆತ್ತಿ ಮುಂದಕ್ಕೆ ಕರೆತಂದು ಮೇಲೆತ್ತಿದೆ| ನೂರೆಂಟು ಹೀನಗಳ ದೂರ ಮ...

ಕನ್ನಡದ ಸಿರಿದೇವಿ ಅನುಭಾವಿ ಮಾದೇವಿ ಕನ್ನಡದ ದುಸ್ಥಿತಿಯ ಕಂಡು ಕಳವಳಗೊಂಡು ಮೈಮರೆದು ಮಲಗಿರುವ ಮಹಿಳೆಯರ, ವಿಸ್ಮರಣ- ಸಾಗರದಿ ಮುಳುಮುಳುಗಿ ತೊಳಲುತಿಹ ಪುರುಷರನ್ನು ಎಚ್ಚರಿಸಿ ಮತ್ತೆ ಕನ್ನಡ ತಾಯ ಐಸಿರಿಯ ಪವಣಿಸಲು ಹೊಂದಿಸಲು ತಲೆಯೆತ್ತಿ ಮೆರೆಯಿ...

ತಾಳಬೇಕು ಬಾಳಬೇಕು ದೇವಚಿತ್ತ ಎಲ್ಲವು ದುಃಖವೇಕೆ ಬದುಕಿನಲ್ಲಿ ದೇವಲೀಲೆ ಎಲ್ಲವು ನಿಂದೆ ಏಕೆ?; ನಿಂದ್ಯವೆಲ್ಲಿ? ಮಾತೃ ಸೃಷ್ಟಿ ಎಲ್ಲವು ಈ ವಿಶಾಲ ವಿಶ್ವವೆಲ್ಲ ಅವನೆ ಬೇರೆ ಇಲ್ಲವು “ಭಕ್ತಿ ಬೇಕು” “ಒಳಿತು ಆಗು, ಸಾಕು ನುಡಿ, ಕುಡಿ ದಿವ್ಯನಾಮದಮೃ...

ಕರುಣೆಯ ಜೊನ್ನವಾಗಿ ತಾ ಸುರಿವುದು ತುಂಬಲು ಇಳೆಯ ಅಂಗಳ ಪಾವನಗೊಳಿಸಲೆಂದೇನೆ ನಿಂತಿದೆ ಮೂರ್ತಿಯು ಪರಮಮಂಗಳ ಮಳೆಬೆಳೆ ಎಲ್ಲ ಅವನ ದಯೆ ರವಿಶಶಿ ಎಲ್ಲರು ಅವನ ರೂಪವು ನಿಲಿಸುವ ನೆತ್ತಿ ವಿಶ್ವವನು ತಣಿವುದು ಜೀವಿಯ ಘೋರ ತಾಪವು ದಿವ್ಯನು ಪರಮ ಪುರುಷನವ...

ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು ದೇವಗಾನದಿ ಬೆಳಕ ತಂದನೇನು? ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ ಸೂರ್ಯನಾರಾಯಣನು ಬಂದನೇನು ? ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ ಹಿಮಕೆ ಮುತ್ತಿದ ತಿಮಿರರಾಸಿಯನ್ನು ಮಾಯಮಾಡಿದ ಅಬ್ಬ! ಆದಿತ್ಯನವಗಾವು-...

ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ ಚಿತ್ತವಳಿಪನು ನನಗೆ ತಳೆಯದಿರಲಿ ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ ದೃಷ್ಟಿ ತಾಕಿದರಾನು ಬಾಡಿಯೇನು ಮುಟ್ಟಲೇತಕೆ ಮುಂ...

ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು! ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು ರಸವರ್ಜ್ಯ ನೀನಾಗಿ, ಎದೆಯತಾಣವನೊ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...