
ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ ಜಂಗಮಕ್ಕೆ ಜಂಗಮವಿಲ್ಲ ನನಗೆ ನಾನಿಲ್ಲ ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ ಕಪಿಲಸಿದ್ಧಮಲ್ಲಿಕಾರ್ಜುನಾ ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ. ಏಸು ಕ್...
ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು ಇದಿರ ಗುಣ ಬಲ್ಲೆವೆಂಬರು ತಮ್ಮ ಗುಣವತಾವರಿಯರು ಕೂಡಲಸಂಗಮದೇವಾ ಗಿಳಿ ಹೇಳಿಕೊಟ್ಟದ್ದನ್ನು ಹೇಳುತ್ತದೆ, ಆಡುತ್ತದೆ. ಗಿಳಿಯ ಶಾಸ್ತ್ರವೆನ್ನುವ...
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯ್ತ್ತು ತುಂಬಿ ನೋಡಾ ಆತುಮ ತುಂಬಿ ತುಂಬಿ ನೋಡಾ ಪರಮಾತುಮ ತುಂಬಿ ತುಂಬಿ ನೋಡಾ ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ ಹೂವಿಗೆ ದುಂಬಿ ಎರಗಿದರೆ ದುಂಬಿ ಮಧುವನ್ನು ಹೀರಿ ವಿಕಾಸಗೊಳ್ಳ...
ಗಾಣದಲ್ಲಿ ಸಿಲುಕಿದ ಎಳ್ಳು ನೋಯದೆ ಎಣ್ಣೆಯ ಬಿಡುವುದೆ ಕಾಯದಲ್ಲಿ ಸಿಲುಕಿದ ಜೀವ ನೋಯದ ಕರಣಂಗಳ ಬಿಡುವನೆ ಭಾವದಲ್ಲಿ ಸಿಲುಕಿದ ಭ್ರಮೆ ನೋಯದೆ ವಿಕಾರವ ಬಿಡುವುದೆ ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ ನಿಃಕಳಂಕ ಮಲ್ಲಿಕಾರ್ಜುನಾ ವೇದ ಎಂದರೆ ಜ್ಞಾನವಂತ...
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ಅವು ತಮ್ಮ ಅಂಗಸ್ವಭಾವದಂತೆ ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗಚೌಡಯ್ಯ ಗಾಳಿಯು ಸುಗಂಧವನ್ನು ಕೊಳ...
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅಲ್ಲಮನ ವಚನ. ಬಹುಶಃ ಮನುಷ್ಯ ಮಾತ್ರವೇ ತಾನು ಏ...
ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ. ಆ...
ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ ಅಸಹಾಯಕತೆಯನ್ನು...
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲ...















