ಮಗಳು ಬರೆದ ಕವಿತೆ

ಮಗಳು ಎಳೆಯ ಮುಗುಳು ಎದೆಯ ಮೇಲೆ ಮಲಗಿರುವಳು ಸದ್ದು ಮಾಡಿದ ಎದೆಯ ಪ್ರಶ್ನಿಸುತ್ತಾಳೆ ಮೆಲ್ಲಗೆ ಯಾರು ನೀನು? ಎದೆಯ ಬಡಿತ ಹಮ್ಮಿನಿಂದ ಕ್ರೈಸ್ತನೆಂದಿತು ಸಣ್ಣಗೆ ಕಂಪಿಸಿದಳು ಮುಸ್ಲಿಮನೆಂದಿತು ಗರ್ವದಲಿ ಒಳಗೇ ದುಃಖಿಸಿದಳು ಹಿಂದುವೆಂದಿತು ಹೆಮ್ಮೆಯಲಿ...

ಕಣಜಿರಿಗೆ ಹುಳು ಮತ್ತು ನಾನು

ಹಿತ್ತಲ ಬಾಗಿಲು ಬಹು ದಿನಗಳಿಂದ ಮುಚ್ಚಿಯೇ ಇತ್ತು ಇಂದು ಅದೇಕೋ ಬಿಸಿಲು ಹೆಚ್ಚಾಯಿತೆಂದು ತೆಗೆಯಬೇಕಾಯಿತು ಉಸಿರುಗಟ್ಟಿದಂತಿದ್ದ ಆ ಕೋಣೆಯೊಳಗೆ ಸ್ವಲ್ಪ ಗಾಳಿ ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ ಜೀವ ನಿರಾಳವಾಯ್ತು ಕಂಪ್ಯೂಟರ್ ಪರದೆಯನ್ನೇ ವಿಶ್ವವೆಂಬಂತೆ ದಿಟ್ಟಿಸಿ...

ಎರಡು ದಂಡೆಗಳ ನಡುವೆ

ಹೊಳೆಯ ಆ ದಂಡೆಯಲಿ ಸುಂದರ ಜನ ಕಣ್ಣ ಕುಕ್ಕುತ್ತಾರೆ ತುಂಬಿ ಹರಿವ ಹೊಳೆ ಸಿಹಿ ನೀರು ಅವರ ಹೊಲಗದ್ದೆಗಳಿಗೆ ಅಲ್ಲಿ ಮೀಯುವ ಮೀನು ಅವರ ಗಂಗಾಳಕೆ ಆ ಹಸಿರು ಕಾಡು ಅಲ್ಲಿ ಜಿಗಿದಾಡುವ ಜಿಂಕೆ...

ಕಲ್ಲು ಬಿದ್ದ ಕೊಳ

ಕೂತಲ್ಲಿ ಕೂಡಲಾರದ ನಿಂತಲ್ಲಿ ನಿಲಲಾರದ ಮನವೀಗ ಕಲ್ಲು ಬಿದ್ದ ಕೊಳ ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ? ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು ನನಗಾದರೂ ಏನು ಗೊತ್ತಿತ್ತು...? ಗೋಡೆಗಳು ಕೇಳಿಸಿಕೊಳ್ಳುವುದು ಹಲ್ಲಿಗಳು ಮಾತನಾಡುವುದು ಅದನ್ನೇ ಸಾಕ್ಷಿಯೆಂದು...

ಬೆಳಕ ಹೆಜ್ಜೆಯನರಸಿ

ಖಾಲಿ ಹಾಳೆಯ ಮೇಲೆ ಬರೆಯುವ ಮುನ್ನ ಚಿತ್ರ ಯೋಚಿಸಬೇಕಿತ್ತು ಯೋಚಿಸಲಿಲ್ಲ ಬರೆದೆ ವಿಧಿ ಬರೆದಂತೆ ಎಲ್ಲಾ ಪಾತ್ರಗಳು ಸುಮ್ಮನಿದ್ದವು ಮೂಕರಂತೆ ಕಾಲ ಕಳೆದಂತೆ ಕೆಲವು ಕೆಮ್ಮಿದವು ಹಲವು ಸೀನಿದವು ರೋಗ ಬಂದಂತೆ ಆಕಳಿಸಿದವು ನಿದ್ದೆ...

ಮೂರು ಲಂಗಗಳ ಮಾತುಕತೆ

ಲಂಗ ೧ ‘ಏನೇ ಇಷ್ಟೊಂಽಽಽದು ಘಮ್ ಅಂತೀಯಾ ರಾತ್ರಿಯೆಲ್ಲಾ ಜೋರಾಽಽಽ? ಒಂದಕ್ಕೊಂದು ಗಂಟು ಹಾಕಿ ದ ಗಂಟಿನೊಳಗೇ ಕುಳಿತು ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ ಗಂಟು ಮೋರೆಯ ಸಡಿಲಿಸುತ ಲಂಗ ೨ ‘ಅದು ಬ್ಯಾರೆ ಕೇಡು...

ಸರತಿಯಲಿ ನಿಂತವರು

ಸಾವು ಮಾರಾಟಕ್ಕಿದೆ ಇಲ್ಲಿ ಜಗದ ಮಾರುಕಟ್ಟೆಯಲ್ಲಿ ತಕ್ಕಡಿಯ ಒಂದು ಬದಿ ಹಸಿವು ಕಲ್ಲಾಗಿದೆ ಇನ್ನೊಂದು ಬದಿ ಗ್ರೆನೇಡುಗಳು ಹಿಟ್ಟಿನ ಮುದ್ದೆ! ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ ಸಣ್ಣ ಕಂದಮ್ಮಗಳ ಎದೆಯ ಗೂಡಲ್ಲಿ ಇನ್ನೂ ಜೀವವಿದೆ ತೂರಿ...

ಈ ರಸ್ತೆಗಳೇಕೆ ಹೀಗೆ?

ಹಿಂದೆ ನಮ್ಮ ಮುತ್ತಾತನವರ ಕಾಲಕ್ಕೆ ಈ ರಸ್ತೆಗಳು ಕಾಡಿನಲ್ಲಿ ಕಳೆದು ಹೋಗುತ್ತಿದ್ದವು ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು ನಡೆವವರ ಎಡ ಬಲಕು ಹಸಿರು, ಹೂವು ಗರಿಕೆ ಹುಲ್ಲು ಮಾತನಾಡುತ್ತಿದ್ದವು ದಣಿವು ನೀಗುತ್ತಿದ್ದವು ಮೊನ್ನೆ...

ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ ಹೊಸಿಲು ಎರಡೂ ಒಂದೇ ಬೊಟ್ಟು ಬಳಿದುಕೊಂಡರೂ ಎಡವುವವರು, ತುಳಿಯುವವರು, ದಾಟುವವರು ಇದ್ದದ್ದೇ ಮನೆಯ ಕಾಯುವ ಭಾರ ಹೊಸಿಲಿಗೂ ಹಿರಿ ಮಗನಿಗೂ ಸಮನಾಗಿ ಹಂಚಿಕೆಯಾಗಿದೆ ಆಕಳಿಸಿದರೆ ತಲಬಾಗಿಲ ಮೇಲೆ ಹಲ್ಲಿ ಲೊಚಗುಟ್ಟಿ ಎಚ್ಚರಿಸುತ್ತದೆ...

ಹೂಗಳು ಬಾಡಿಲ್ಲ

ಸಾವು ಬೇಡುವ ಭೂಮಿ ಸುಡುಗಾಡು ಇದು ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ ಬೆಳ್ಳಂಬೆಳಿಗ್ಗೆ ಮೂರು ವರ್ಷದ ಕೆಂಚ ಈರಿಯ ಮಗ ಹೊಲೆಗೇರಿಯಲ್ಲಿ ಊಟವಿಲ್ಲದೆ ಸತ್ತ ಸಮಾಧಿ ಮೇಲೆ ಹೂಗಳು ಬಾಡಿಲ್ಲ ಮಟ ಮಟ ಮಧ್ಯಾಹ್ನ ಇಪತ್ತರ...