ಡೆಡ್ ಎಂಡ್ ಗುಡ್ಡಗಳು!

Published on :

ಮೊನ್ನೆ ನಾನು ಕಾರು ಓಡಿಸುತ್ತಿದ್ದಾಗ ಸಮೀಪ ಕಂಡ ಒಬ್ಬ ಪೊಲೀಸಿನವನಿಗೆ ನ್ಯಾಶನಲ್ ಪಾರ್ಕಿನ ದಾರಿ ಕೇಳಿದೆ. ಆತ ಹೇಳಿದ – ‘ಡೆಡ್ ಎಂಡ್‌ವರೆಗೂ ಹೋಗಿ. ನಂತರ ರೈಟಿಗೆ ತಿರುಗಿ…’ ಡೆಡ್ ಎಂಡ್…. ಶಬ್ದ ಕೇಳುತ್ತಲೇ ನಡುಗಿಬಿಟ್ಟೆ! ಕಾರು ಮುಂದೆ ಓಡಿದ ಮೇಲೆ ಸಮಾಧಾನಕ್ಕಾಗಿ ಇನ್ನೊಬ್ಬಳು ಮಹಿಳೆಗೆ ವಿಚಾರಿಸಿದೆ. ಅವಳೂ ಅಂದಳು. ‘ಗೋ ಟು ದಿ ಡೆಡ್ ಎಂಡ್… ಅಂಡ್ ಟೇಕ್ ರೈಟ್…’ ಅಯ್ಯಯ್ಯೋ ಎಂದೆ! ಬೆಂಗಳೂರಿನವರಿಗೆ ಈಸ್ಟ್ ಎಂಡ್… ಸೌತ್ […]

ನೀಲ ಮುಗಿಲಿನ ಮಾವ!

Published on :

ಬಯಲ ಸೀಮಿ ಮಾಳಿಗೆಯ ಮೇಲೆ ಅಂಗಾತ ಮಲಗುವ ಚಟವಿದ್ದವರಿಗೆ ಈ ಮುಗಿಲಮಾವನ ಪ್ರೇಮ ಪ್ರಸಂಗಗಳು ಪುರಮಾಶಿ ಲಭ್ಯ! ಆ ಮಾಳಿಗೆ… ಆ ಗಾಳಿ…. ಆ ಏಕಾಂತದೊಂದಿಗೆ ಗಗನದ ತುಂಬಾ ಗಗನಾಕಾರವಾಗಿ ತೇಲಾಡುವ ಚೈತನ್ಯ ನೌಕೆಗಳು… ಮುಗಿಲ ಅಂಗಳದಿಂದ ಮನೆಯ ಅಂಗಳಕ್ಕೆ ತಿರುಗುತ್ತ ತಿರುಗುತ್ತ ಇಳಿಯುವ ಠೀವಿ… ಕಂಡಿರಾ? ಅವುಗಳ ಸುಂದರವಾದ ಹರವಾದ ಎದೆಕಟ್ಟು ಚುಂಬಿಸಲು ಚಾಚಿದ ಚುಂಚು, ವಿಮಾನಿನಂತೆ ಚಾಚಿದ ಜೋಡಿ ರೆಕ್ಕೆಗಳು, ಅವುಗಳ ಕಂಠದಿಂದ ಆಗಾಗ ಹೊಮ್ಮುವ… ಕಿಲಿಲಿಲಿ.. […]

ಚಾದಂಗ್ಡೀ ಕಟೀಮ್ಯಾಲ ಆ ರಾತ್ರಿ….

Published on :

ಇಂದು ನಾವು ಫಾಯಿವ್‌ಸ್ಟಾರ್ ಹೋಟಲಿನಲ್ಲಿ ಮಲಗಿದ್ದು ಮರೆಯಬಹುದು… ಆದರೆ… ಒಂದು ಕಾಲಕ್ಕೆ… ಒಂದು ದಿನ… ಯಾರದೊ ಕಟ್ಟೆಯ ಮೇಲೆ ಮಲಗಿದ್ದು ಮರೆಯಲೆಂತು ಸಾಧ್ಯ? ಹಾಂ… ಇವತ್ತಿನ ಮಿತಿಗೆ ಐವತ್ತು ವರ್ಷಗಳ ಹಿಂದಿನ ಆ ಒಂದು ರಾತ್ರಿ… ಆ ಒಂದು ಘಟನೆ… ಕಣ್ಣಲ್ಲಿ ಮಿಂಚು ಹೊಳೆದಂತೆ ಚಕಚಕನೇ ಕಣ್ಮುಂದೆ ಕಟ್ಟಿ ನಿಲ್ಲುತ್ತದೆ… ಹೇಗೆ ಮರೆಯಿಲಿ ಆ ರಾತ್ರಿ? ಅದು ದುಡ್ಡಿನ ದಿನಮಾನವಲ್ಲ. ಐದು ನಯಾ ಪೈಸೆಗೆ ಒಂದು ಕಪ್ಪು ಚಾ…. ಹನ್ನೆರಡು […]

ಬಾನಂಗಳದಿಂದ ಹಾರಿಬಂದ ಗೆಳೆಯ!

Published on :

ಇಳಕಲ್ಲಿನ ಭವ್ಯ ದರ್ಗಾ ನನ್ನ ಪ್ರೀತಿಯ ಪ್ರಶಾಂತ ವಿಹಾರ ಸ್ಥಾನ. ಇಂದು ಹೈವೇ ರಾಕ್ಷಸನ ಹಾವಳಿಗೆ ತುತ್ತಾಗಿ ಆ ದರ್ಗಾದ ಅಖಂಡ ಶಾಂತಿಗೆ ಭಂಗ ಬಂದಿದೆ. ಆದರೆ ಆ ಕಾಲದಲ್ಲಿ ಅದೇ ದರ್ಗಾ ಸುಂದರ ಸುಖದ ಶಾಂತಿಯ ಪರಿಸರವಾಗಿತ್ತು. ನನಗೆ ಭಾರಿ ಖುಷಿ ಕೊಟ್ಟ ಸಂಗತಿಯೆಂದರೆ ಈ ದರ್ಗಾದ ಮೇಲೆ ಕುಳಿತುಕೊಳ್ಳುವ ಸಾವಿರಾರು ಪಾರಿವಾಳಗಳು. ಅದೊಂದು ಪಾರಿವಾಳಗಳ ಪರಿಸೆ, ಎಷ್ಟು ನೋಡಿದರೂ ಮನ ತಣಿಯದು. ಈ ಪಾರಿವಾಳಗಳಿಗೆ ಕಾಳು ಹಾಕುವ […]

ಜ್ಞಾನವೆಂಬುದು ಚೀಲದೊಳಗಣ ಜೀರಿಗೆಯೇ?

Published on :

ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ… ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ” ವೆಂದು ಸಾರಿದ್ದಾಳೆ. ಅಂತರಂಗದ ಚಿಂತನೆಗಳನ್ನು ಪ್ರಯೋಗ ಮುಖವಾಗಿ ದುಡಿಸಿದವರು ಶರಣರು. ಕೇವಲ ಹೇಳುವವರು ಅವರಲ್ಲ. ಸ್ವಾನುಭವದಲ್ಲಿ ನೆಲೆನಿಂತು ಮಾಡಿ ತೋರಿಸುವವರು! ಹಿಂದೆಂದಿಗಿಂತಲೂ ಇಂದು ವಚನ ಸಾಹಿತ್ಯ ನಮಗೆ ಕ್ಷಿಪ್ರ ಪ್ರಸ್ತುತವೂ ಆತ್ಮ ಸ್ನೇಹಿಯೂ ಆಗಿರುವುದು ಈ ಸಹಸ್ರಮಾನದ ಒಂದು ಅಚ್ಚರಿ. ಮಾನವನ ಹೂತುಂಬಿದ ಹೃದಯದಲ್ಲಿ […]

ಹೆಂಗ ಮರೆಯಲಿ ಆ ಹುಡುಗಿಯನ್ನು?

Published on :

ಸುಂದರ ಬೆಂಗಳೂರಿನ ಸಿಟಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಕಿಡಿಗೇಡಿ ಬಸ್ಸು ಒಂದು ಗಂಟೆ ತಡವಾದರೂ ಮುಖ ತೋರಿಸಲಿಲ್ಲ. ನನ್ನೆದುರಿನ ಪಾನ, ಬೀಡಾ, ಸಿಗರೇಟ, ಗುಟಕಾ, ಚಿಲ್ಲರೆ ದಿನಸಿ ಡಬ್ಬಿ ಅಂಗಡಿಯ ಮಾಲಕ ಅಂಗಡಿಯೊಳಗಿನ ಒಂದು ಬುಟ್ಟಿ ಕಸ ಬೆಂಗಳೂರಿನ ಸುಂದರವಾದ ದಾರಿಯ ಮೇಲೆ ಸ್ಥಿತಪ್ರಜ್ಞ ತಪಸ್ವಿಯಂತೆ ಚೆಲ್ಲಿಬಿಟ್ಟ. ನನ್ನ ಹೊಟ್ಟೆ ಚುರ್ ಎಂದಿತು. ಮತ್ತೆ ತನ್ನ ಅಂಗಡಿ ಸುತ್ತಮುತ್ತ ಕಸ ಗುಡಿಸುತ್ತಲೇ ಚಂದ ಮಾಡಿದ. ಸಿಗರೇಟ ಪ್ಯಾಕಗಳು, […]

ತಾಯ ಚುಂಬನದಲ್ಲಿ ಮೊದಲ ಹೂಬನ!

Published on :

ತಾಯ ಮಡಿಲು ಮಮತೆಯ ಮಲ್ಲಿಗೆ ತೊಟ್ಟಿಲು ಮಾತ್ರವೇ ಅಲ್ಲ, ತಾಯಿ ನೀಡುವ ಬಿಸಿಬಿಸಿ ಚುಂಬನದಿಂದಲೇ ಮಗುವಿನ ಜೀವನದ ಜೇನ ಹೆಬ್ಬಾಗಿಲು ತೆರೆಯುತ್ತದೆ. ಹೆತ್ತತಾಯಿ ಅರಮನೆಯ ಮಹಾರಾಣೀಯೇ ಇರಲಿ, ಇಲ್ಲವೆ… ಹುಲ್ಲ ಗುಡಿಸಿಲಿನ ಕೂಲಿಕುಂಬಳಿಯ ಬೆಮರಿನ ಜೀವವೇ ಆಗಿರಲಿ… ಮಗುವಿಗೆ… ಅವಳೇ ದೇವರು… ಅವಳೇ ವಿಶ್ವ… ಅವಳೇ ಮೂಡು – ಪಡುವಲದ ಹೊಂಬೆಳಗು! ಈ ನಿಟ್ಟಿನಲ್ಲಿ ಮಗುವಿಗೆ ಅವಳು ತಾಯಿ ಮಾತ್ರವಲ್ಲ. ತಾಯಿರೂಪದಿಂದ ಬಂದ ಶಿಕ್ಷಕಿ… ಸದ್ಗುರು… ಸಂಭ್ರಮದ ಗೆಳತಿ! ಇಂಥ […]