ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು ಮಾನವ ಜನ್ಮದಾಗ್ ಹುಟ್ಟಿದ್ಮೇಲೆ ಏನೇನ್ಕಂಡಿ ಜೀವನ್ದೊಳ್ಗೆ ಸಾಯೋತನ್ಕ ಗಂಡಾಗುಂಡಿ. ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ ಕುಳಿತ್ಕೊಂಡಿ ಬರೀತೇನೆ ಲಾವಣಿ ಒಂದು, ಜೈಲಿನ್ಕಂಡಿ. ಹಿಂದೆ ಎಂದೂ ಜೈಲಿನ್ಕಡ್ಗೆ ಸುಳ್ದಿರ್ಲಿಲ್ಲ ಜೈಲಿನ್ಜೀವ್ನ ಹೆಂಗಂಬೋದ್...
ಕಣ್ಣೀರಿನ ಕಡಲಿನ ಮೇಲೆ ಮಿಂಚಿದೆ ನನ್ನೀ ಬಾಳಿನ ಒಲವಿನಲೆ! ದೂರ ತೋರಿದಾ ನೀಲ ಬೆಟ್ಟಗಳ ನೀಲ ಮುಗಿಲಿನಲ್ಲಿ ಮುಳುಗು ಸೂರ್ಯನಾ ಕೆಂಪು ಕಾಡಿಗೆಯ ಬಣ್ಣ ಮಡಿಲಿನಲ್ಲಿ ತಾರೆ ಓರೆಯಲಿ ನಿಂತು ನೋಡುತಿರೆ, ಅಲೆಯು ಮೇಲೆ...
"ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ ನೆನವು ಹರಿಸಿದೆ ಇಂದು." ಅದು ಹಿಂದೆ, ಬಲು ಹಿಂದೆ,...
ಹೊಡೆ- ಹೊಡೆ - ಹೊಡೆ ಪಡುಗಡಲಿನ ತೆರೆ ತಡಿಯೊಡೆಯುವವರೆಗೂ, ತಡೆ - ತಡೆ - ತಡೆ ಕಡಲಲೆಗಳ ಹೆಡೆ ದಡ ಮುಟ್ಟುವವರೆಗೂ. ನಡೆ - ನಡೆ - ನಡೆ ಕಡೆದೆಬ್ಬಿಸುತಲೆ ಮುಗಿಲಪ್ಪುವವರೆಗೂ, ಕಡೆ -...
ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ ಬೆಳ್ಳಿಯಲೆಗಳ ಭ್ರಾಂತಿ...