ಪ್ರಥಮ ಪಾಠ

ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ. ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು ರೋಮಾಂಚಗೊಂಡೆ....

ಹಾಮಾ ನಾಯಕ

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು ವ್ಯೂಹರಚನೆಯ ಗುಟ್ಟು ಪರಿಪೂರ್ಣ...

ಕೆ.ಎಸ್. ನರಸಿಂಹಸ್ವಾಮಿ

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ ಮಾತನೆತ್ತಿದ ಜಾಣ, ನೇರಗಿಡದಿಂದಲೇ ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ. ಮಲ್ಲಿಗೆಯ ಹೆದೆಯಲ್ಲಿ ಹೂಡಿ...

ಗೋಪಾಲಕೃಷ್ಣ ಅಡಿಗ

ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ; ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ. ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ; ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು. ಕಾವು ಕೂತಿತು...

ಷೇಕ್ಸ್‌ಪಿಯರನಿಗೆ

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು ಹದ ಬೇರೆ. ಒಂದೆ ಅನುಭವ, ಬೇರೆ...

ವಸ್ತುನಿಷ್ಠ ವಿಮರ್ಶೆ

ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ...

ಇಲ್ಲದೆಯೆ ಇರಬೇಕು

ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್ನದಾಗಿಸಬೇಕು;...

ಅನ್ನಾವತಾರ

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ. ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ. ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ ಪುಟ್ಟಲಂಗದ...

ಬಾ ಬಾ ಹೊಸ ಗಾಳಿಯೆ

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ. ಮಾತಾಡದೆ ಸಡಗರದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿ ಹೂಡುತ್ತಿದೆ ಬೆಳಂದಿಂಗಳ ಕೊರಳು. ದಡವ ಕೊಚ್ಚಿ ಹರಿಯುತ್ತಿದೆ ನದಿಗೆ...

ಕವಿತೆಗೆಲ್ಲಿದೆ ಅರ್ಥ ?

ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ - ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ...
cheap jordans|wholesale air max|wholesale jordans|wholesale jewelry|wholesale jerseys