Home / Kannada

Browsing Tag: Kannada

ಆಕಾಶದೆತ್ತರಕೆ ಹಾರಿದ ಹಕ್ಕಿ ಕೊಕ್ಕಿನಲಿ ಕೊಂಡು ಹೋಯಿತು ಯಾವ ಪೌರುಷದ ಬಿತ್ತು? ಅದನು ಸ್ವೀಕರಿಸುವುದಕ್ಕೆ ಮಣ್ಣು ಹೊಡೆ ಮರಳಿ ಮಲಗಿದೆ ಮರಳಿ ಮರಳಿ ಉತ್ತು ಮರಳುವುದೆ ಆ ಹಕ್ಕಿ ಮರಳಿದರೂ ಅದು ಉಗುಳುವುದೆ ತನ್ನ ತುತ್ತನೀ ನೆಲದ ಮೇಲೆ ಜೊಂಪು ತೂಗಿ...

ನನ್ನ ಶಬ್ದಗಳು ಗೋಧಿಯಾಗಿದ್ದಾಗ ನಾನು ನೆಲವಾಗಿದ್ದೆ. ಕೋಪವಾಗಿದ್ದಾಗ ನಾನು ಬಿರುಗಾಳಿಯಾಗಿದ್ದೆ. ಕಲ್ಲಾಗದಿದ್ದಾಗ ನಾನು ನದಿಯಾಗಿದ್ದೆ. ನನ್ನ ಶಬ್ದಗಳು ಜೇನಾದಾಗ ತುಟಿಗೆಲ್ಲ ನೊಣ ಮುತ್ತಿದವು. ***** ಮೂಲ: ಮಹಮೂದ್ ದರ್‍ವೇಶ್...

ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ. ಚಿಕ್ಕ ಮಣ್ಣಕಣದಲ್ಲೂ ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ ಚಂದ್ರಮುಖದ ಹಳ್ಳಕೊಳ್ಳ ಖಂಡಿತ ಕಾಣುತ್ತದೆ. ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ, ರಾಮಬುದ...

ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು ಬೆರೆತ ಕಾಲನ ಡಮರುಗನ ಆಟ|| ನಿನ್ನ ಹಾಡಿಗೆ ಕಾಲನ ಸೋಲಿಲ್ಲ ನಿನ್ನದೆ ರಾಗದ ಆಲಾಪನೆ ನಿತ...

ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. “ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ” ಅದಕ್ಕೆ ಮಗ ಹೇಳಿದ. “ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು. ಮಲಗ...

ಸ್ಮಶಾನದಲ್ಲಿ ಅವನು ಹೆಣಗಳನ್ನು ಹೂತಿಡುವ ಕೆಲಸ ಮಾಡುತಿದ್ದ. ಅವನೊಂದಿಗೆ ಮಣ್ಣು ಎತ್ತಿಹಾಕುತ್ತಿದ್ದ ಅವಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾದ. ಈಗ ಅವರಿಗೆ ಹುಟ್ಟಿದ ಮಗು ಮಸಣದ ಹೂವಾಗಿ ಗೋರಿ ಕಟ್ಟೆಗಳಿಗೆ ಜೀವ ತುಂಬಿ ಬೆಳೆಯುತ್ತಿದೆ. *****...

ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ ಸಾಲು. *****...

ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ ಬೆಳಗುವಾ ಬೆಳಕು|| ಕೋಟಿ ಸೂರ್ಯ ಸಮವೀಬೆಳಕು ಸರ್ವಕಾ...

1...9394959697...632

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...