Tirumalesh KV

ಗಗನವು ಯಾರದೊ

ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ […]

ಇದಾರ ಮನಸು

ಇದಾರ ಮನಸು ಉದಾರ ಮನಸು ಕನಸುಗಳ ಹೊಸೆಯಿತೊ ಚಿತ್ರ ಬರೆದು ಬಣ್ಣ ಹಚ್ಚಿ ಮೂಡುವ ಮೊದಲೆ ಅಳಿಸಿತೊ ಇದಾರ ಮನಸು ಉದಾರ ಮನಸು ಭಾವನೆಗಳ ಭಾವಿಸಿತೊ ಪ್ರೀತಿಯೆಂದು […]

ಏನ ಮಾಡಲಿರುವೆ ನೀನು

ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ […]

ಏನೂ ಮಾಡದೆ

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ […]

ಸಾವಿರಾರು ನದಿಗಳು

ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು […]

ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ ತ್ಯಾಗರಾಜರಿಲ್ಲದೆ ಕೃಷ್ಣನೇನು ಗೊತ್ತು ಪುರಂದರ ದಾಸರಿಲ್ಲದೆ ಶಿವನೇನು ಗೊತ್ತು ನಮಗೆ ಅಲ್ಲಮರಿಲ್ಲದೆ ದಿವವೇನು ಗೊತ್ತು ನಮಗೆ ಸೂರ್‍ಯಚಂದ್ರರಿಲ್ಲದೆ ಭಕ್ತಿಯೇನು ಗೊತ್ತು ಆ- ನಂದವೇನು […]

ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು […]

ನೀರಿಲ್ಲದೂರಿನಲಿ

ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನಲಿ ಹಣ್ಣ […]