Home / Kannada Novels

Browsing Tag: Kannada Novels

ಬೇಡೆನಗೆ ಹಸ್ತಿನೆಯ ಭಿಕ್ಷೆಯು ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭ...

ಕ್ಷಾತ್ರವಚನದಿ ಗೆಲಿದನಾರಣವ ಭೀಷ್ಮರು ಮಗ್ಗುಲು ಬದಲಾಯಿಸಿದರು. ಎದೆಯ ನೋವು ತೀವ್ರವಾಗುತ್ತಾ ಹೋಗುತ್ತಿದೆ. ಯುದ್ಧ ಹದಿನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಇನ್ನು ಎಷ್ಟು ದಿನವೊ? ಈ ಬಾಣ ಅದಾಗಿಯೇ ಯಾವತ್ತು ಬಿದ್ದು ಹೋಗುತ್ತದೆಯೊ? ದೇಹಕ್ಕೆ ಸುಖವ...

ಜಲದೊಳರಳಿತು ಪ್ರೇಮಕಮಲ ಸೌಭದೇಶದ ಗಡಿಯವರೆಗೆ ಅವಳನ್ನು ಕರೆತಂದ ಹಸ್ತಿನಾವತಿಯ ರಥ ಅಲ್ಲಿ ನಿಂತಿತು. ಹಸ್ತಿನಾವತಿಯಿಂದ ಸೌಭಕ್ಕೆ ಎರಡು ದಿನಗಳ ಪಯಣ. ಎರಡು ರಾತ್ರೆಗಳನ್ನು ಛತ್ರಗಳಲ್ಲಿ ಕಳೆದು, ಅವುಗಳ ಸನಿಹದಲ್ಲೇ ಇದ್ದ ಅಶ್ವಶಾಲೆಗಳಲ್ಲಿ ಕುದುರೆ...

ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗ...

ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ...

ಹಸ್ತಿನೆಯನವ ಬಿಟ್ಟನೇತಕೆ ಅವಳ ಬಗ್ಗೆ ಮೊದಲ ಸುದ್ದಿ ತಂದದ್ದು ಒಬ್ಬ ವಾರ್ತಾವಾಹಕ. ಅವನಿಗೆ ಹಸ್ತಿನಾವತಿಯಾದ್ಯಂತ ಮಾರುವೇಷದಲ್ಲಿ ಸಂಚರಿಸುತ್ತಿದ್ದ ಗೂಢಚರರು ಸುದ್ದಿಮುಟ್ಟಿಸಿದ್ದರು. ಅದು ಅವಳ ಸ್ವಯಂವರದ ಸುದ್ದಿ. ಆರ್ಯಾವರ್ತದಲ್ಲಿ ಅದೆಷ್ಟೋ ಸ...

ಶರವು ಮರ್ಮವ ಘಾತಿಸಿತು “ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ.” ನಿಧಾನವಾಗಿ ಕಣ್ಣುತೆರೆದು ಸುತ್ತಲೂ ದಿಟ್ಟಿಸುವಾಗ ನೆನಪಾದ ಮಾತುಗಳವು....

ಕೆಲದಿನಗಳ ಕಾಲ ಮಂಜುಳಾ ಮೌನ ಮುಂದುವರೆಯಿತು. ಶಿವಕುಮಾರ್‌ ಹೆಚ್ಚು ಮಾತನಾಡುವ ಆಸಕ್ತಿ ತೋರಿಸಿದರೂ ಆಕೆ ಅಷ್ಟು ಉತ್ಸಾಹ ತೋರಲಿಲ್ಲ. ಅವಳಲ್ಲಿ ಒಂದು ಬಗೆಯ ಖಿನ್ನತೆ ಆವರಿಸಿತ್ತು. ರಾಜಕುಮಾರಿಯ ಹುಚ್ಚು ಮುಖದ ಹಿಂದಿನ ಮುಖಗಳ ಪರಿಚಯವಾದ ಮೇಲೆ ಮಾತ...

ಕರಿಯಮ್ಮ ಓಡೋಡಿ ಬಂದು ನೋಡಿದಾಗ ರಸ್ತೆಯಲ್ಲಿ ರಕ್ತದ ಕಲೆಯಿತ್ತು. ಪುಟ್ಟಕ್ಕಯ್ಯ ಮತ್ತು ಮಂಜುಳ – ಇಬ್ಬರೂ ಕರಿಯಮ್ಮ ನೊಂದಿಗೆ ದುಃಖಿತರಾಗಿದ್ದರು. ಆದರೆ ಕರಿಯಮ್ಮನ ದುಃಖಕ್ಕೆ ಸರಿ ಸಾಟಿಯಾದ ಮನಃಸ್ಥಿತಿ ಬೇರೆಯವರಲ್ಲಿ ಇರಲು ಹೇಗೆ ಸಾಧ್ಯ ...

ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗ...

1...456

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...