
ಇದು ಚಲಚ್ಚಿತ್ರಗಳ ಛತ್ರ, ಕಾಣುವದಿಲ್ಲಿ ಎಲ್ಲ ಸೃಷ್ಟಿ, ವಿಚಿತ್ರ. ರವಿಯ ಪಟ್ಟದ ಮಹಿಷಿ- ಯಾದ ಛಾಯಾದೇವಿ ಇದರ ಭಾರವ ವಹಿಸಿ ಬಳಗದೊಡನೆಯೆ ಬಂದು ಪ್ರತಿಬಿಂಬಿಸುವಳಿಲ್ಲಿ ಲೋಗರಾ ದುಗುಡ-ನಲುಮೆಗಳ, ಕೇಂದ್ರಿಸುತಿಲ್ಲಿ ಕಿರಣವ್ಯೂಹವನವಳು ಉಸಿರಾಗಿ ಮಾ...
‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ. ‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು ಎಳೆಯರೆಲ್ಲರು ಕೂಡಿ, ‘ನೀನು ನೋಂಪಿಯನೋಂತು ನಡೆವ ಬಗೆಯನ್ನರುಹು. ತ...














