Home / Kannada

Browsing Tag: Kannada

ಬಾಲೆ ನೀಲಾಂಜನ ಬೆಳಗುಬಾ ಲೀಲಾನಂದ ವಿಶಾಲ ದಯಾಳಗೆ || ಪ || ಮಿಂದು ಮಡಿಯನುಟ್ಟು ದಂದುಗವ ಬಿಟ್ಟು ಒಂದೆ ಮನಸಿನಿಂದ ವಂದಿಸುತೆ ಇಂದುವದನೆ ಜಯ ಎಂದು ಪೊಗಳುತಲಿ ಸುಂದರ ಗುರುಗೋವಿಂದನ ಆಡಿಗೆ || ೧ || ಮೂರಾರುದಳದೊಳು ತೋರಿ ಅಡಗುವ ಜ್ಯೋತಿ ಬೇರೊಂದು...

ಪಂಕಜನೇತ್ರೆ ಬಾ ಅಂಕಿತಸ್ಥಾನಕೆ ಶಂಕ ನೀಲಾಂಜನ ಪಂಚಾರುತಿ || ಪ || ಕಿಂಕರತ್ವದ ತಳಗಿಯೊಳು ಬೆಂಕಿಯನು ಬೆಳಸಿಟ್ಟು ಕರ್ಪೂರ ಓಂಕಾರ ಪ್ರಣಮವನು ಜಪಿಸುತ ವೆಂಕಟೇಶಾನ ಪಾದಕಮಲಕೆ || ೧ || ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ ಲಕ್ಷ ತೆರೆದುನೋಡೋ ಆತ್ಮ...

ಜಯವೆನುತ ಕೈಮುಗಿದು ನಮಿಸುವೆ ನಯದೊಳೊಂದಿಪೆ ದೃಢದಲಿ ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ || ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ ಚಿನುಮಯಾತ್ಮಕ...

ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ || ಆರತಿಯನು ಎತ್ತಿರೆ ಈರತಿಗೆ ರತಿಯಿಟ್ಟು ಸಾಕ್ಷಾತ ಸಾರುತಿರೆ ಶ್ರುತಿಗಳು ಸದ್ಗುರು ಚಾರುತರ ಕೀರತಿಯ ಪೋಲ್ವಗೆ || ೧ || ಜ್ಯೋತಿತ್ರಯಕೆ ತಳಗಿ ಮೇಲಕೆ ಆತು ಬತ್ತಿಗಳೈದು ಎಡಬಲ ಆತುರಿವ ಸುಜ್ಞಾನ ತೈಲವ...

ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ ಬೆಳಗುವೆನಾರುತಿಯಾ ಗುರುವರಾ ಎತ್ತುವೆ ಆರತಿಯಾ || ಪ || ಥಳಿಥಳಿಸುತ ಕಾಲ್ ಕೈ ಮೈ ಬಣ್ಣಾ ಕೆಂಪ ನಿಂಬಿಹಣ್ಣಾ ಗುರುವರಾ ಕೆಂಪ ನಿಂಬಿಹಣ್ಣಾ ಸೂರ್ಯನ ಕಿರಣ ವರಣ ಇವರಿಗೆ ಇರುತಿರೆ ಪರಿಪೂರ್ಣ || ೧ || ಸಂಶಿಗ್...

ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ ಒಂದು ವಿಚ...

ಬೆಂಗಳೂರಿನ ಉದ್ದಗಲಕುಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿ...

ಜಯಮಂಗಳಂ ಜಯ ಜಗತ್ಯಾಳು ಜಯ ಮಹಾರುದ್ರಗೆ || ಪ || ರುದ್ರ ಭಕ್ತರು ರುದ್ರ ತಳಗಿಯ ಪಿಡಿದು ರುದ್ರಮಂತ್ರವ ಜಪಿಸಿ ರುದ್ರನೊಳು ರುದ್ರದೃಷ್ಟಿಯನಿಟ್ಟು ರುದ್ರನಡಿಗಳಿಗೆ || ೧ || ಶಿವನೆ ಗಗನವೇರಿ ಶಿವ ನಿಮ್ಮೊಳೊಲಿದು ಶಿವನೆನಿಪ ಶಿವರುದ್ರ ವಿಷಯಗಳ ಸ...

ಆರತಿ ಬೆಳಗುವೆನು ಯೋಗದ ಆರುತಿ ಬೆಳಗುವೆನು || ಪ || ಆರುತಿ ಬೆಳಗುವೆ ಪರಮಾರ್ಥದ ಸಾರವ ತಿಳಿದಿನ್ನು ತಾರಕ ಬ್ರಹ್ಮಗೆ || ಆ. ಪ. || ಗುದಗುಹ್ಹೆಗಳನೊತ್ತಿ ಮೇಲಕೆ ಚದುರತನದಲಿ ಹತ್ತಿ ಸದರ ಮನಿಯೊಳು ನದರಿಟ್ಟು ಮೋಡಲು ಎದುರಿಗೆ ಕಾಂಬುವ ಸದಮಲ ಬ್ರಹ...

ಗುರುವರನ ಸ್ಮರಿಸಿ ಕರಿಮುಖಗ ಕರಗಳ ಮುಗಿದು ವರವ ಬೇಡುವೆನು ಶಾರದಿಗೆ ||ಇಳವು|| ಶಾರದಿ ಗಣಪತಿ ಉಭಯ ಮೂರುತಿ ಹದಪೂರ ನುತಿಸಿ ನಮೋಯೆಂದು ಭಾರತ ಪುರಾಣದ ಸಂದು ಧಾರುಣಿಪತಿ ರಾಜೇಂದ್ರ ಧರ್ಮನಾ ಯಜ್ಞ ತುರಗವು ಬಂದು ಸ್ತ್ರೀ ರಾಜ್ಯದೊಳಗ ನಡತಂದು ಏ ನಾರ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...