ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ

ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ
ಬೆಳಗುವೆನಾರುತಿಯಾ ಗುರುವರಾ
ಎತ್ತುವೆ ಆರತಿಯಾ || ಪ ||

ಥಳಿಥಳಿಸುತ ಕಾಲ್ ಕೈ ಮೈ ಬಣ್ಣಾ
ಕೆಂಪ ನಿಂಬಿಹಣ್ಣಾ ಗುರುವರಾ ಕೆಂಪ ನಿಂಬಿಹಣ್ಣಾ
ಸೂರ್ಯನ ಕಿರಣ ವರಣ ಇವರಿಗೆ ಇರುತಿರೆ ಪರಿಪೂರ್ಣ || ೧ ||

ಸಂಶಿಗ್ರಾಮ ಕಡಿಭಾಗ ಅಮೀನಧೀನ್
ಅವರ ವರವಿಲೆ ಹುಟ್ಟಿ ಪಟ್ಟವಗಟ್ಟಿ
ಶಿವಪುರ ಶಿರಹಟ್ಟಿ ಒಂದೇ ಮನಸಿಟ್ಟಿ || ೨ ||

ಹಳ್ಳದ ಬದಿಯಲಿ ಹುತ್ತದೊಳು ಅಡಗಿ
ಸತ್ಯಕಾಲದಲ್ಲಿ ಗುರುವರಾ ಸತ್ಯಕಾಲದಲ್ಲಿ
ಮತ್ತ ಭವಕೆ ಬಾರದೇ ಸಾಯುಜ್ಯ ಪದವಿಯ ಪಡಕೊಂಡೆ || ೩ ||

ಜಂಗಮಸ್ಥಾನ ಜಗಭರಿತ ಇವನ
ಎಲ್ಲರೊಳಗೆ ಸವನ ಗುರುವರಾ ಎಲ್ಲರೊಳಗೆ ಸವನ
ಸರ್ವಧರ್ಮ ಪಾವನಮೂರುತಿ ಸಿದ್ಧರಾಮನ || ೪ ||

ಪೊಡವಿಯೊಳು ಶಿಶುನಾಳಧೀಶನ ದಯದಿ
ಉಸುರುವೆ ಈ ನುಡಿಯಾ ಗುರುವರಾ ಉಸುರುವೆ ಈ ನುಡಿಯಾ
ಒಡಿಯ ಫಕ್ಕೀರೇಶಾ ನಿಮಗೆ ಬೇಡುವೆ ಮುಕ್ತಿಯ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಟಾರಕ್ಕೆಸೆದ ೨೩ ಲಕ್ಷ ರೂ…ಹಾಗು ಇತಿಹಾಸ.
Next post ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys