Home / Kannada

Browsing Tag: Kannada

ಇದು ಸೆಕ್ಯುರಿಟಿ ಸೆನ್ಸೇ ಇಲ್ಲದ ಸೆಕ್ಯುಲರ್ ಸ್ಟೋರಿ. ನೀವು ವಿಧುರರಾಗಿದ್ರೆ ಖರ್ಚಿಲ್ದೆ ಲಗ್ನ ಆಗೋ ಅಪರ್ಚಿನ್ಯುಟಿ. ಮದುವೆಗೆ ಹೆಣ್ಣು ಹುಡುಕೋಂಗಿಲ್ರಿ, ಮದುವೆ ಸಲುವಾಗಿ ಖರ್ಚಿನ ತ್ರಾಸಿಲ್ಲ! ಮನೆಯಾಗಿರೋ ಸೊಸೆಗೇ ಡವ್ ಹೊಡೆದ್ರೆ ರೆಡಿಮೇಡ್ ಹ...

ಭೂಪಾರದೊಳಗೆ ಮದೀನಶಹರದೊಳು ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ|| ಕೂಪದೊಳು ಹರಿದಾಡುತಿಹ ಜಲ ವ್ಯಾಪಿಸಿತು ಮುದ್ದಿನ ಸಲಾಕೆಯು ರೂಪ ಬೆಂಕಿಯ ಪುಟವಗೊಳ್ಳುತ ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.|| ಸಧ್ಯಕ್ಕೆ ಕಾಶೀಮಸಾಹ...

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ? ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳ ತೇದು ಮಕ್ಕಳಿಗೆ ಬೆರೆದಳಲ್ಲ ಕನಸಿಗೆ! ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಲಿ ಕಾಣದ...

ಕೊಡಗಿನ ಹಳೆಯ ತಲೆಗಳು ಉಪಕಾರ ಸ್ಮರಣೆ ಇಲ್ಲದವರನ್ನು ನಮಕು ಹರಾಮು ನಾಗಪ್ಪಯ್ಯನೆಂದು ಈಗಲೂ ಬಯ್ಯುವುದುಂಟು. ಅವನು ಟಿಪ್ಪುವಿನಿಂದ ಕೊಡಗಿನ ಅಮಲ್ದಾರನಾಗಿ ನೇಮಕನಾದವನು. ಕೊಡಗಿನ ರಾಜ ಲಿಂಗರಾಜೇಂದ್ರನು ತನ್ನ ದಾಯಾದಿ ದೇವಪ್ಪರಾಜನನ್ನು ಮೈಸೂರಿನ ನ...

ಧಾರವಾಡ – ನನ್ನ ಭಾರವಾದ ಹೃದಯದಿಂದಿಳಿದ ಕವಿತೆ ಇದು ನಿನ್ನ ಮಡಿಲೊಳಗಿಟ್ಟು ಕೆಲ ಕಾಲ ತೂಗಿ ನಗಿಸಿ – ನನ್ನೊಳಗಿಂದ ಆಳವಾಗಿ ಬದುಕುವ ಕಲೆಯ ಕಲಿಸಿದೆ ನನಗೆ ನಿನ್ನ ನೆನೆಯುತ್ತೇನೆ ಅಹೋರಾತ್ರಿ ಇಲ್ಲಿ ಮೋಡಗಳ ನಡುವೆ ನಡೆದಾಡುವಾಗ ನಗು...

ಬೆಂಕಿಯುದರ ಹಡೆದ ತಂಪು ತೇಜ ಇವಳು ಯಾರ ತಪೋಮಣಿಯೋ! ಯಾವ ಆಟದ ಚೆಂಡೋ! ಗೋಲಿ ಗುಂಡೋ! ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ ಪ್ರಿಯನನೋಲೈಸಿ ಪ್ರಣಯಕೇಳಿಯಲನವ...

ಶ್ಯಾಮ: “ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?” ಶೀನ: “ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್‍ಸ್ಟಿಕ್ ಇತ್ಯಾದಿ ಅ...

ನಮ್ಮ ಕರುನಾಡ ಪಾಲಿಟ್ರಿಕ್ಸ್‌ನಗೆ ಇತ್ತೀಚೆಗೆ ಗೆಸ್ ಮಾಡಿದ್ದೆಲ್ಲಾ ಮಿಸ್ ಆಗ್ತಾ ನೆಡಿಬಾರದ್ದೆಲ್ಲಾ ನಡಿಲಿಕತ್ತದೆ ನೋಡ್ರಿ. ಕಪಿಸೇನೆ ಮುಖಂಡ ಪ್ರಮೋದ ಮುತಾಲಿಕನೆಂಬ ಗಡವ ಮುನಿಸ್ಕೊಂಡು ಬಿಜೆಪಿಗೆ ಡೈವೋರ್ಸ್ ಬರೆದೊಗೆದು ಶಿವಸೇನೆ ಮುದುಕನಿಂದ ತ...

ಏನು ಹೇಳಲಿ ಅರ್ಭಾಟ ಅನುರಾಧಾ ಮಳೆಯು ತಾಳಲಾರದೆ ಇಳೆಯು                 ||ಪ|| ಕಟ್ಟಿದ ಕಿಲ್ಲೆ ಕೋಲಾಹಲ ಕಟ್ಟಿದ ಕಿಲ್ಲೆ ಸಡಲಿ ಅನುರಾಧ ಮಳೆಯು ತಾಳಲಾರದೆ ಇಳೆಯು                 ||೧|| ಗಾಳಿ ದೂಳಿ ಜೋಳದ ರಾಶಿ ಜೋಳದ ರಾಶಿ ತೇಲ್ಹೋಗಿ ತೆನ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...