ಇಮ್ರಾನ್ ಗುಡಿಯಾ ಈಗ ಸಾನಿಯಾ ಚಡ್ಡಿ ಮ್ಯಾಗೆ ಕೆಂಗಣ್ಣು

ಇದು ಸೆಕ್ಯುರಿಟಿ ಸೆನ್ಸೇ ಇಲ್ಲದ ಸೆಕ್ಯುಲರ್ ಸ್ಟೋರಿ. ನೀವು ವಿಧುರರಾಗಿದ್ರೆ ಖರ್ಚಿಲ್ದೆ ಲಗ್ನ ಆಗೋ ಅಪರ್ಚಿನ್ಯುಟಿ. ಮದುವೆಗೆ ಹೆಣ್ಣು ಹುಡುಕೋಂಗಿಲ್ರಿ, ಮದುವೆ ಸಲುವಾಗಿ ಖರ್ಚಿನ ತ್ರಾಸಿಲ್ಲ! ಮನೆಯಾಗಿರೋ ಸೊಸೆಗೇ ಡವ್ ಹೊಡೆದ್ರೆ ರೆಡಿಮೇಡ್ ಹೆಂಡ್ತಿ ಸಿಕ್ಕಂಗೇ ಈವರ್ಗೆ ಗಂಡ ಆದೋನು ದಿಢೀರ್ ಅಂತ ಆಕಿ ಮಗನಾಗಿ ‘ಬೇಗಂ’ ಅಂತ ಕರೀದೆ ‘ಅಮ್ಮಿ ಜಾನ್’ ಅಂತ ಕರಿಬೋದು. ಅವನ್ಗೂ ಮತ್ತೊಂದು ಮ್ಯಾರೇಜ್ ಆಗೋ ಲಕ್ಕು. ಇಂಥ ಚಾನ್ಸು ಯಾರಿಗುಂಟು ಯಾರಿಗಿಲ್ಲ ಹೇಳ್ರಲಾ? ನಿಮಗೀಗ ಉತ್ತರ ಪ್ರದೇಶದ ಮುಜಫರ್ ನಗರದ ದೇವ್‌ಬಂದ್ ಊರಿನ ಮುಸ್ಲಿಂ ಮಹಿಳೆ ಇಮ್ರಾನಳು ನೆಪ್ಪಿಗೆ ಬಂದಿದ್ರೆ ಯು ಆರ್ ಕರೆಕ್ಟ್. ಮೂರು ಮಕ್ಕಳ ತಾಯಿಯಾದ ಇಮ್ರಾನಳನ್ನು ಅವಳ ಮಾವನೇ ರೇಪ್ ಮಾಡಿದರೂ ಅವನ್ಗೆ ನೊ ಪನಿಶ್‍ಮೆಂಟ್. ಮುಸ್ಲಿಂ ಪಂಚಾತಿದಾರರು ಮಾಫ್ ಮಾಡವ್ರೆ ಜೊತೆಗೆ ರೇಪ್ ಮಾಡಿದ ಪುಂಡ ಈಗ ಗಂಡ. ಗಂಡ ಅಂಬೋ ಪ್ರಾಣಿಯೇ ಈಗ ರೆಡಿಮೇಡ್ ಬೇಟಾ. ಇಮ್ರಾನಳ ಮಕ್ಕಳೆ ಈಗವಳಿಗೆ ಮೊಮ್ಮಕ್ಕಳು! ಹೆಂಗೈತೆ ನೋಡ್ರಿ ಮುಸ್ಲಿಂ ಧರ್ಮಾಂಧರ ಫತ್ವಾ!!

ಒಂದೀಟು ಫ್ಲಾಶ್ ಬ್ಯಾಕ್ಗೋದ್ರೆ ಗುಡಿಯಾ ಅಂಬೋ ಹುಡ್ಗಿಯ ಶಾದಿ ಕಹಾನಿದೇ ಡಿಫರೆಂಟು ಕ್ಲೈಮ್ಯಾಕ್ಸ್. ಗುಡಿಯಾ ಗಂಡ ಸೈನ್ಯದಾಗೆ ವರ್ಕ್ ಮಾಡ್ತಿದ್ದೋನು ಅಬಸ್ಕಾಂಡ್ ಆಗೋದ ಅಂಬೋ ಖಬರ್ ಖಾತ್ರಿ ಮಾಡ್ಕೊಂಡು ಆಕಿಗೆ ದುಸ್ರಾ ಗಂಡಿನ ಜೊತೆ ಶಾದಿ ಕರಾದಿಯಾ. ಇದ್ದಕ್ಕಿದ್ದಂಗೆ ಸಿನಿಮಾದಾಗೆ ಎಂಟ್ರಿ ಕೊಟ್ಟಂಗೆ ಆಕೆ ಹಳೆ ಗಂಡ ಎಂಟ್ರಿ ಕೊಟ್ಟ. ಪಾಕಿಸ್ತಾನದ ಜೇಲ್ನಾಗಿದ್ದೆ ಅಂತ ಹೇಳ್ಕೊಂಡ ಆ ಇಸುರಿ. ಆಗಿದ್ದು ಮುಸ್ಸಿಂ ಧಾರ್ಮಿಕ ಮುಖಂಡರ ತೆಲಿ ಗರಮ್ಮು. ತೀರ್ಪು ಕೊಟ್ಟೇಬಿಟ್ರು ! ಪೆಹಲೆ ಗಂಡನಿಗೆ ತಾಲಾಕ್ ಕೊಡ್ದೆ ದೂಸರಾ ಶಾದಿಯಾಗಿದ್ದು ಬೇಕಾನೂನಿ ಔರ್ ಧರ್ಮಬಾಹಿರ. ಬಸುರಿ ಹೆಣ್ಣು ಮಗಳಾಗಿರೋ ಗುಡಿಯಾಗೆ ಕೂಸು ಹುಟ್ಟುತ್ಲು ಎರಡ್ನೆ ಗಂಡಂಗೆ ಅದನ್ನ ನಜರಾನ ಅಂತ ಕೊಟ್ಟುಬಿಟ್ಟು ಪೆಹಲೆ ಗಂಡನ ಸಾಥ್‌ ಮೆ ಸಂಸಾರ್ ಕರ್ನಾ ಅಂತ ಹುಕುಂ ಹೊಂಡಿಸೇಬಿಟ್ರು.. ಇದ್ನೆಲ್ಲಾ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅದ್ಹೆಂಗೆ ಒಪ್ಪಿ ‘ಫತ್ವಾ’ ಹೊಂಡಿಸ್ತೋ ಸರ್ವಶಕ್ತ ಅಲ್ಲಾನೇ ಬಲ್ಲ. ಜೈಲ್ನಾಗೆ ಸಿಮೆಂಟ್ ಬೆಡ್ ಮ್ಯಾಗೆ ಮಲಗಬೇಕಾದ ಇಮ್ರಾನಳ ಮಾವನಿಗೆ ನಿಖಾಯೋಗ. ಗಂಡ ಮಕ್ಳಿಗೆ ಅಗಲಿಕೆಯ ರೋಗ! ಒಮ್ಮೆ ಅಂವಾ ಗಂಡ, ಇನ್ನೊಮ್ಮೆ ಇಂವಾನೇ ನಿನ್ನ ಗಂಡ ಅಂದ್ರೆ ಇಮ್ರಾನೇ ಆಗ್ಲಿ
ಗುಡಿಯಾಳೇ ಆಗ್ಲಿ ಒಪ್ಪೋಕೆ ಆಟ ಆಡೋ ಖಿಲೋನಾ ಅಂತ ತಿಳಿದಾರೇನ್ರಿ ಮುಲ್ಲಾಗುಳು?

ಇದರ ಮಧ್ಯದಾಗೆ ಔರ್ ಏಕ್ ಘಟನಾ ಫರಮಾನಾ ಹೈ ಜನಾಬ್. ಮೊನ್ನೆನಾಗ ಮುಜಫರ್ ನಗರದ ಪ್ರತಾಪಗಡ ಜಿಲ್ಲೆ ಉದ್ವೆಯಾ ಗ್ರಾಮದಾಗೆ ಏಕ್ ಲಡ್ಕಿ ಕಿ ಶಾದಿ ಮೆಹರ್‌ರೋಡ್ ಕೆ ಲಡ್ಕೆ ಸಿರಾಜ್ ಕೆ ಸಾಥ್ ನೆಡಿಯೋದಿತ್ತು. ನಿಖಾ ಸಮಾರಂಭದಾಗ ಪವಿತ್ರ ವಿವಾಹದ ಪ್ರಮಾಣ ಹೇಳಿಕೊಡೋ ಮೌಲಿಗೆ ಅಟ್ಟಲ್ ಎಲ್ಲಿತ್ತೋ ಹೆಂಗೋ? ಸಿರಾಜನ ಹೆಸರು ಬದ್ಲು ಅವನ ತಮ್ಮ ೨೪ ವರ್ಷದ ಮೆಹರಾಜ್ ಹೆಸನ ಅನೌನ್ಸ್ ಮಾಡ್ದ. ದಾಖಲೆದಾಗೂ ಬರೆದುಬಿಟ್ಟ. ಇದು ಉಳಿದೋರ ಗಮನಕ್ಕೆ ಬಂದಿದ್ದು ಮಾರನೆ ದಿನ. ಹಂಗಾರೆ ಆಕೆ ಈಗ ಯಾರ ಬೀಬಿ? ಅಂತ ಫತ್ವಾ ಹೊರಡಿಸ್ರಿ ಎಂದರು ಮುಸ್ಲಿಮ್ಸ್ ಧಾರ್ಮಿಕ ಮುಖಂಡರು. ಮುಖಂಡರ ಮಂಡಳಿ ಮುಂದೆ ಕುಂತು ಲಡ್ಕಿ ಕಡೇರು ಲಡತ್ ಮಾಡಿದ ಮ್ಯಾಗೆ ಹೆಂಗೋ ಲಡ್ಕಿ ಸೀರಾಜ್‌ಗೇ ದಕ್ಕಿದ್ಳು, ಅನ್ನಿ.

ಇದೀಗ ಧರ್ಮಗುರುಗಳ ಕಣ್ಣು ಅಂತಾರಾಷ್ಟೀಯ ಟೆನ್ನಿಸ್ ಪಟು ಸಾನಿಯಾ ಮಿರ್ಜಾಳ ಚಡ್ಡಿ, ಮೋಟು ಸ್ಕರ್ಟ್‌ನ ಮೇಲೆ ಬಿದ್ದೈತೆ. ದಕ್ಷಿಣ ಭಾರತದ ಹೈದರಬಾದ್‌ನ ಈ ಹುಡ್ಗಿ ತನ್ನ ಆಟದ ಚೆಂದ ಅಂದಗಳಿಂದ ಇಡೀ ವಿಶ್ವದ ಗಮನವನ್ನೇ ಸೆಳೆದು ಭಾರತ ದೇಶದ ಕಣ್ಮಣಿಯಾದ ಬಗ್ಗೆ ಗರ್ವ ಪಡಬೇಕಾದ ಇಸ್ಲಾಂ ಧಾರ್ಮಿಕ ಗುರುಗಳಿಗೆ ಬೋತ್ ಗುಸ್ಸಾ ಆಗಯಿ ಹೈ! ದಿನ ಬೆಳಾಗಗೋದ್ರೊಳ್ಗೆ ವರಲ್ಡ್ ಫೇಮಸ್ ಆದ ಚೋಕ್ರಿ ಬಗ್ಗೆ ಖುಷಿ ಪಡೋದು
ಬಿಟ್ಟು ಬಿಟ್ಟಿ ಈಕೆ ತನ್ನ ರೇಷ್ಮೆ ತೊಡೆಗಳು, ಟೈಟ್ ಟೀಶರ್ಟ್ನಾಗೆ ಪುಟಿವ ಅಂಗಾಂಗಗಳು, ಹಾರುವ ಚೋಟಾ ಸ್ಕರ್ಟು, ಅಲ್ಲಿ ಕಾಣುವ ಚಡ್ಡಿನಾ ವರಲ್ಡ್‌ಗೇ ದಿಖಾಕೆ ಹಮಾರಾ ಇಜ್ಜತ್ ಲೂಟಿ ಮಾಡ್ತಾ ಅವ್ಳೆ ಅಂತ ಬೆಂಕಿ ಕಾರ್ತಾ ಅವ್ರೆ.. ಏ ಚೋಕ್ರಿ ಬೋತ್ ಖೂಬ್ ಸೂರತ್ ಕ್ಯೋಂ ಪೈದಾಹುವಾ ಅಂತ ರೋತಿ ಸೂರತ್‌ಗಳು ಚಿಂತಾಕ್ರಾಂತರಾಗವ್ರೆ. ಬುರ್ಖಾ ಹಾಕಿಕೊಂಡೇ ಸಾನಿಯಾ ಟೆನಿಸ್ ಆಡ್ಲಿ ಇಸ್ಲಾಂಗೆ ಇಜ್ಜತ್ ತೋರ್ಲಿ ಅಂತ ಫತ್ವಾ ಹೊರಡಿಸವ್ರೆ ಅಂತ ನಂಬಲನರ್ಹ ಕಡೆಯಿಂದ ಸುದ್ದಿ ಬಂದಿದೆ. ಈ ಬಗ್ಗೆ ಭಾರತ ದೇಶದ ಎಲ್ಲಾ ಮುಲ್ಲಾಗಳು ಮುನಿಸ್ಕಂಡು ಗಡ್ಡ ನೀವ್ಕಂತ ಮಸೀದಿನಾಗೆ ಮೀಟಿಂಗ್ ರಾತ್‌ಭರ್ ನಡೆಸ್ತಾ ಅವರಂತೆ. ಎಂತ ಮಳ್ಳರದಾರ್‌ ನೊಡ್ರಿ ! ಒಂದೊಂದು ಆಟಕ್ಕೂ ಒದ್ದೊಂದು ನಮೂನಿ ಡ್ರೆಸ್ ಇರ್ತತಿ. ಕಂಫರ‍ಟಬಲ್ ದೃಷ್ಟಿಯಿಂದ ಆಟಗಾರರು ಅದ್ನ ತೊಟ್ಕೊಂತಾರೆ ಹೊರ್ತು ಮೈ ತೋರಿಸೋಕಲ್ಲ ಅಂಬೋ ಕನಿಷ್ಟ ತಿಳವಳ್ಕನಾರ ಬ್ಯಾಡ್ವಾ ಈ ಬುಡ್ಡಾಗುಳ್ಗೆ. ಕ್ರಿಕೆಟಿಗರು ದೊಗಲೆ ಪ್ಯಾಂಟು ಶರ್ಟು ಹಾಕ್ಕೊಂಡು ಪ್ಯಾಡ್ ಕಟ್ಕಂಡು ಹೆಲ್ಮೆಟ್ಟು ಮುಖವಾಡ ಇಕ್ಕಂಡು ಆಡ್ದೆ ಹೋದ್ರೆ ಅವರ ಕಣ್ಣು ಹಲ್ಲು ಕೈಕಾಲು ಮಟಾಷ್. ಬಾಕ್ಸಿಂಗ್ ಆಡೋರ್ದು ದೊಗಲೆ ಚಡ್ಡಿ, ಖ್ಯಾತ ಬಾಕ್ಸಿಂಗ್ ಬಾಂಪಿಯನ್ ಮಹಮದ್ ಆಲಿ ಮಗಳು ಚಡ್ಡಿ ಬ್ರಾ ಹಾಕಿ ಬಾಕ್ಸಿಂಗ್ ಆಡ್ತಾಳೆ ಆಕೇನೂ ಮುಸ್ಲಿಂ. ಈಜು ಸ್ಪರ್ಧೆ ಪಟುಗಳು ಸ್ವಿಮಿಂಗ್ ಸೂಟ್ ತೊಡ್ದೆ ಸೀರೆ ಉಡ್ಲಿ ಅಂದ್ರೆ ಹೆಂಗ್ರಿ? ಬ್ಯಾಲೆ ಮಾಡೋರ್ದು ಪುಲ್ ಡ್ರೆಸ್, ಸರ್ಕಸ್ ಹುಡ್ಗೀರ ಆಟಕ್ಕೆ ಬ್ರಾ ಚಡ್ಡಿನೆ ಕಂಫರ್ಟ್, ರನ್ನಿಂಗ್ ರೇಸ್, ಹೈಜಂಪ್, ಲಾಂಗ್ ಜಂಪ್ಗೆ ಚಡ್ಡಿ, ದೊಗಲೆ ಶರ್ಟು ತೊಡುವ ಹುಡುಗ. ಹುಡುಗಿಯರಿಲ್ಲವೆ. ಸ್ಪೋರ್ಟ್ ಪ್ರತಿಭಗಳಿಗೆ ‘ಡ್ರೆಸ್‌ಕೋಡ್’ ಮಾಡಲಾಗಿದೆ ಅಂಬೋ ಅರಿವೂ ಇಲ್ಲದಷ್ಟು ದಡ್ಡರೆ? ಧರ್ಮಾಂಧರೆ ಇವರು. ಆಟಕ್ಕೇ ಏನು ಎಲ್ಲಾ ಹುದ್ದೆಗಳಿಗೂ ಅದರದ್ದೇ ಆದ ಯೂನಿಫಾರಂ ಇದೆ. ಪೋಲೀಸಿನವರಿಗೆ ಕಾಕಿ, ಸ್ವಾಮಿಗಳಿಗೆ ಕಾವಿ ನೈಟಿ, ರಾಜಕಾರಣಿಗಳಿಗೆ ಖಾದಿನೇ ಬ್ಯೂಟಿ. ಮಿಲಿಟ್ರಿಯವರ ಡ್ರೆಸ್ ಬಣ್ಣ ಫಿಟ್ಟಿಂಗ್‌ದೇ ಬೇರೆ ವೆರೈಟಿ. ಅಧಿಕಾರಿಗಳು ಫುಲ್‌ಸೂಟು ಲಾಯರ್ದು ಬ್ಲಾಕ್ ಅಂಡ್ ವೈಟು. ಆಟದಲ್ಲಿ ಧರ್ಮ ಬೆರೆಸಬಾರ್ದು. ಮಾರ್ಟಿನಾ ನವ್ರಟಿಲೋವಾ, ಕ್ರಿಸ್ ಎವರ್ಟ್, ಶರಪೋವ ರಷ್ಯಾದ ಮೌರೆಸ್ಮಾ ಪೆಟ್ರೋವಾ, ಎ ಮಿಸ್ಕಿ ಮಾಜಿ ಸುರಸುಂದರಿ ಸ್ಟೆಫಿ ಗ್ರಾಫ್ ಇವರೆಲ್ಲಾ ತೊಡುವ ಡ್ರೆಸ್ಸು ಸಾನಿಯಾಗಿಂತ ಭಿನ್ನವಾಗೇನಿಲ್ಲ. ಟೆನ್ನಿಸ್ ಜಗತ್ತೇ ಒಂದು ಮಾದರಿಯಾಗಿರುವಾಗ ಸಾನಿಯಾ ಮಾತ್ರ ಬುರ್ಖಾ ಹಾಕಬೇಕಂದ್ರೆ ಹೆಂಗ್ರಿ. ಮುಲ್ಲಾ ಸಾಬಿಗಳೇ ಮೊದ್ಲೆ ನಿಮ್ಮನ್ನ ಕಂಡ್ರೆ ಸಂಘ ಪರಿವಾರದ ಮಂಗ್ಯಾಗಳು ಏನೇನೋ ಸುಟ್ಕೊಂಡೋರಂಗಡ್ತಾ ಆಪಾದ್ನೆ ಹೊರ್ಸೋಕೆ ಹೊಂಚು ಹಾಕ್ತಾ ಇರೋವಾಗ ನೀವು ಅಂಡು ಸುಟ್ಕೊಂಡ ಬೆಕ್ಕಿನಂಗೆ ಎಗರಾಡಿದ್ರೆಂಗೆ? ಪ್ಯಾರೆ ಮುಲ್ಲಾಗಳೆ ೨೧ ನೇ ಶತಮಾನದಾಗಾರ ಒಂದೀಟು ಚೇಂಜ್ ಆಗ್ರಲಾ. ಇಂತಹ ಆತಾರ್ಕಿಕ ಕ್ರೂರ ತೀರ್ಪುಗಳನ್ನು ನೀಡುವುದರ ಬಗ್ಗೆ ಮುಸ್ಲಿಂ ಬುದ್ಧಿಜೀವಿಗಳು ಖ್ಯಾತ ಬರಹಗಾರರು ತುಟಿ ಬಿಚ್ಚದಂಗೆ ಕಿಸೆದಾಗಳ ಪೆನ್ ತೆಗಿದಂಗೆ ಯಾಕಿಂಗ್ ಗಪ್ ಕುಂತಾವೋ ಅಲ್ಲಾ ಪರ್ವರ್ದಿಗಾರನೇ ಬಲ್ಲ!
*****
( ದಿ. ೦೫-೧೦-೨೦೦೫)

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಪಾರದೊಳಗೆ ಮದೀನಶಹರದೊಳು
Next post ನವಾಬಿ ಮಲ್ಲಿಗಿ ಹೂವಿನ ಗಜರಾ

ಸಣ್ಣ ಕತೆ