ನವಾಬಿ ಮಲ್ಲಿಗಿ ಹೂವಿನ ಗಜರಾ
ಹಾಕಿದಿ ಗಜರಾ ಪುತ್ತಳಿ ಸರಾ
ಬಾಗಲಕೋಟಿ ಬಾವಿ ಸಮಾಲಾ
ಸವಣೂರ ಶಾರದೊರಿ
ಮಲ್ಲಿಗಿ ಹೂವಿನ ಗಜರಾ ||೧||
ಇಂಗ್ಲೀಷ ಸರಕಾರ
ಕಂಪನಿ ದರಬಾರ
ಹೇಳಿದ ವಿಚಾರ
ತಾಳಿದ ಸರಕಾರ
ಮಲ್ಲಿಗಿ ಹೂವಿನ ಗಜರಾ ||೨||
ಶಿಶುನಾಳ ಶಾಹೀರ
ಅಸಲ ಕಿತಾಬರ
ಉಸುರಿದ ಮಾತಿಗೆ
ಕಾದರಲಿಂಗನ ಪುತ್ತರ
ಮಲ್ಲಿಗಿ ಹೂವಿನ ಗಜರಾ ||೩||
*****
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013